Advertisement
ನಾಗದೇವರು ಮೋಹ ನಿಯಂತ್ರಕ ಮತ್ತು ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ (ವಿಷ್ಣುವಿನ) ಸಂಕರ್ಷಣಾ ಶಕ್ತಿಯಾಗಿದೆ. ನಾಗದೇವರ ನಾಯಕ ಸುಬ್ರಹ್ಮಣ್ಯ ದೇವರಾಗಿದ್ದು, ಇವನನ್ನು ದೇವ ಸೇನಾನಿ ಎನ್ನುತ್ತಾರೆ. ಪಂಚಮಿಯ ದಿನ ನಾಗ ದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳುವ ಉದ್ದೇಶವೂ ನಾಗರ ಪಂಚಮಿಯ ಆಚರಣೆಯ ಹಿನ್ನೆಲೆಯಲ್ಲಿ ಇದೆ.
Related Articles
Advertisement
ಮತ್ತು ಶ್ರದ್ಧೆಯಿಂದ, ನಾಗ ದೇವರ ಪ್ರಾಮುಖ್ಯತೆಯನ್ನು ಅರಿತು, ಶುದ್ಧ ಮನಸ್ಸಿನಿಂದ ಆರಾಧನೆ ಮಾಡಬೇಕು. ನಾಗದೇವರಿಗೆ ಹಾಲುಬಾಯಿ, ಪಂಚಾಮೃತ, ಹಣ್ಣು ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗರಪಂಚಮಿಯ ದಿನ ಏನನ್ನೂ ಕತ್ತರಿಸ ಬಾರದು, ಕೊಯ್ಯಬಾರದು, ಮತ್ತು ಏನನ್ನೂ ಎಣ್ಣೆಯಲ್ಲಿ ಕರಿಯಬಾರದು ಎಂಬ ನಿಯಮ ಪಾಲಿಸಬೇಕು. ಅದೇ ರೀತಿ ನಾಗರ ಪಂಚಮಿಯ ದಿನ ಭೂಮಿ ಅಗೆಯಬಾರದು ಎಂಬ ನಂಬಿಕೆಯೂ ಇದ್ದು, ಈ ದಿನ ನಾಗರನಿಗೆ ಯಾವುದೇ ಉಪಟಳವಾಗಬಾರದು ಎಂದು ರೈತರು ಗದ್ದೆಯನ್ನು ಉಳುವುದಿಲ್ಲ.
ಪತಿಯ ದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ, ನಾಗ ದೋಷ ನಿವಾರಣೆಗೆ ಮಹಿಳೆಯರು ನಾಗರ ಪೂಜೆಯನ್ನು ಮಾಡುತ್ತಾರೆ. ರಾಹು ಮತ್ತು ಕೇತುವಿನ ದೋಷ ಇದ್ದವರು ನಾಗನ ಪೂಜೆ ಮಾಡುವುದರಿಂದ ಅದು ದೂರಾಗುತ್ತದೆ. ಹಾವಿನ ಕನಸು ಇಲ್ಲವೇ ಹಾವಿನ ಬಗ್ಗೆ ಭಯವನ್ನು ಜನರು ಹೊಂದಿದ್ದರೆ ಅದು ದೂರಾಗುತ್ತದೆ. ನಾಗನ ಪೂಜೆಯಿಂದ ಹೆಂಗಳೆಯರಿಗೆ ಕಂಕಣ ಭಾಗ್ಯ ಮತ್ತು ವಿವಾಹಿತರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದ್ದು, ನಾಗಾರಾಧನೆಯು ಪ್ರಾಕೃತಿಕ ಅಂಶಗಳನ್ನೂ ಒಳಗೊಂಡಿದೆ.
-ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ