Advertisement

ನಾಗಚೈತನ್ಯ ‘ಲವ್ ಸ್ಟೋರಿ’ಗೆ ಕನ್ನ ಹಾಕಿದ ಖದೀಮರು

03:39 PM Sep 26, 2021 | Team Udayavani |

ಹೈದರಾಬಾದ್: ಟಾಲಿವುಡ್ ನಟ ನಾಗಚೈತನ್ಯ ಹಾಗೂ ನ್ಯಾಚುರಲ್ ನಟಿ ಸಾಯಿ ಪಲ್ಲವಿ ನಟಿಸಿರುವ ಲವ್ ಸ್ಟೋರಿ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

Advertisement

ಇದೆ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಲವ್ ಸ್ಟೋರಿ ಚಿತ್ರವನ್ನು ಪ್ರೇಕ್ಷಕ ವರ್ಗ ಅದ್ಧೂರಿಯಾಗ ಬರಮಾಡಿಕೊಂಡಿದೆ. ಮೊದಲ ದಿನವೇ ಸುಮಾರು 10 ಕೋಟಿ ರೂ. ಹಣ ಗಲ್ಲಾಪೆಟ್ಟಿಗೆಗೆ ಹರಿದು ಬಂದಿದೆ. ಎಲ್ಲೆಡೆ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲಿಯೇ ಪೈರಸಿ ಕಾಟ ಎದುರಾಗಿದೆ.

ಹೌದು, ಶೇಖರ್ ಕಮ್ಮುಲ ನಿರ್ದೇಶನದ ‘ಲವ್ ಸ್ಟೋರಿ’ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಈ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಇಡೀ ಚಿತ್ರವನ್ನು ತಮಿಳು ರಾಕರ್ಸ್ ಲೀಕ್ ಮಾಡಿದೆ. ಹೈ ಕ್ವಾಲಿಟಿಯಲ್ಲೇ ಟೆಲಿಗ್ರಾಮ್ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ‘ಲವ್ ಸ್ಟೋರಿ’ ಸಿನಿಮಾ ಸೋರಿಕೆಯಾಗಿದೆ.

ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆಯೂ ‘ಲವ್ ಸ್ಟೋರಿ’ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಧಾವಿಸುತ್ತಿದ್ದಾರೆ. ಹೀಗಿರುವಾಗಲೇ, ‘ಲವ್ ಸ್ಟೋರಿ’ ಚಿತ್ರದ ಕಲೆಕ್ಷನ್‌ಗೆ ಪೈರಸಿಯಿಂದ ಪೆಟ್ಟು ಬೀಳುತ್ತಿದೆ. ಹೀಗಾಗಿ ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ‘ಲವ್ ಸ್ಟೋರಿ’ ಚಿತ್ರತಂಡ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next