Advertisement

ಸಿನಿಮಾಕ್ಕೆ ‘Kalki 2898ʼ ಟೈಟಲ್‌ ಇಟ್ಟಿದ್ದೇಕೆ? ಕಾರಣ ರಿವೀಲ್‌ ಮಾಡಿದ ನಿರ್ದೇಶಕ

11:58 AM Feb 26, 2024 | Team Udayavani |

ಹೈದರಾಬಾದ್: ಪ್ರಭಾಸ್‌ ವೃತ್ತಿ ಬದುಕಿನ ಬಹುದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ʼಕಲ್ಕಿ2898ADʼ ಚಿತ್ರದ ನಿರೀಕ್ಷೆ ಸೆಟ್ಟೇರಿದ ದಿನದಂದಲೇ ಹೆಚ್ಚಾಗಿದೆ. ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ ವಿಶ್ವವೇ ಸಿನಿಮಾದತ್ತ ತಿರುಗಿ ನೋಡುವತ್ತ ಸಿನಿಮಾ ತಯಾರಾಗುತ್ತಿದೆ ಎಂದರೆ ತಪ್ಪಾಗದು.

Advertisement

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ʼಕಲ್ಕಿ2898ADʼ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಈ ಸೈನ್ಸ್‌ ಫಿಕ್ಷನ್‌ ಸಿನಿಮಾದ ಗ್ಲಿಂಪ್ಸ್‌ ಸಿಕ್ಕಾಪಟ್ಟೆ ಹೈಪ್‌ ಹೆಚ್ಚಿಸಿದೆ. ಮಲ್ಟಿಸ್ಟಾರರ್‌ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮುಂತಾದವರು ನಟಿಸುತ್ತಿದ್ದಾರೆ.

ಸಿನಿಮಾದ ಕಥಾವಸ್ತು ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಸಿನಿಮಾಕ್ಕೆ ಯಾಕೆ ʼಕಲ್ಕಿ2898ADʼ ಎನ್ನುವ ಟೈಟಲ್‌ ಇಟ್ಟಿದ್ದಾರೆ ಎನ್ನುವುದರ ಬಗ್ಗೆ ಅವರು ಮಾತನಾಡಿದ್ದಾರೆ.

“ನಮ್ಮ ಚಿತ್ರವು ಮಹಾಭಾರತದಲ್ಲಿ ಪ್ರಾರಂಭವಾಗಿ 2898 ರಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಇದಕ್ಕೆ ‘ಕಲ್ಕಿ 2898 AD’ ಟೈಟಲ್‌ ಇಡಲಾಗಿದೆ. ಇದು 6000 ವರ್ಷಗಳ ನಡುವಿನ ಕಥೆಯನ್ನೊಳಗೊಂಡಿದೆ. ನಾವು ಅಲ್ಲಿರುವ ಪ್ರಪಂಚಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಅದು ಹೇಗಿರಬಹುದು ಎಂದು ಕಲ್ಪಿಸಿಕೊಳ್ಳುತ್ತೇವೆ. ನಾವು ಅದನ್ನು ಇನ್ನೂ ಭಾರತೀಯವಾಗಿಯೇ ಇಡುತ್ತೇವೆ ಮತ್ತು ಅದನ್ನು ‘ಬ್ಲೇಡ್ ರನ್ನರ್’ ಎಂದು ತೋರಿಸುವುದು ನಮ್ಮ ಸವಾಲು” ಎಂದು ಹೇಳಿದ್ದಾರೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಅವರು ಕೃತಕ ಬುದ್ಧಿಮತ್ತೆ (AI) ಬಳಕೆ ಮತ್ತು ಚಿತ್ರರಂಗದಲ್ಲಿ ಅದರ ಪರಿಣಾಮಗಳ ಬಗ್ಗೆ  ಮಾತನಾಡಿದ್ದಾರೆ.

Advertisement

ಕಲ್ಕಿ ಆಗಿ ಪ್ರಭಾಸ್, ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್ ಹಾಗೂ ಕಲಿ ಆಗಿ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ದಿಶಾ ಪಟಾನಿ, ಪಶುಪತಿ, ಸಶ್ವತಾ ಚಟರ್ಜಿ ಚಿತ್ರದ ತಾರಾಗಣದಲ್ಲಿದ್ದಾರೆ.

ಇದೇ ಮೇ.9 ರಂದು ಸಿನಿಮಾ ವರ್ಲ್ಡ್‌ ವೈಡ್‌ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next