Advertisement

Rain: ತ.ನಾಡು ವರುಣಾರ್ಭಟ- 12,533 ಮಂದಿಯ ರಕ್ಷಣೆ

11:39 PM Dec 19, 2023 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಮಂಗಳ ವಾರವೂ ವರುಣನ ಆರ್ಭಟ ಮುಂದುವರಿದಿದ್ದು, ರಾಜ್ಯದ ತಗ್ಗು ಪ್ರದೇಶಗಳಿಂದ 12,553 ಮಂದಿ ಯನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದು, ಮತ್ತೆ ಮೂವರು ಕಾಣೆಯಾಗಿರುವುದು ವರದಿಯಾಗಿದೆ.

Advertisement

ಭಾರೀ ಮಳೆಯಿಂದಾಗಿ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ವಾಯುಪಡೆ ಮತ್ತು ನೌಕಾಪಡೆಗಳ ಸಿಬಂದಿಯೂ ಬಂದಿಳಿದಿದ್ದಾರೆ. ಇತ್ತ ಸ್ಥಳೀಯ ಅಧಿಕಾರಿಗಳ ಜತೆಗೆ ರಾಜ್ಯಪಾಲ ಆರ್‌.ಎನ್‌.ರವಿ ಅವರು ಪರಿಶೀಲನಾ ಸಭೆ ನಡೆಸಿದ್ದಾರೆ. ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿಯಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಕಾರಣ ಕೇಂದ್ರಪಡೆಗಳ ನೆರವಿನೊಂದಿಗೆ ರಕ್ಷಣ ಕಾರ್ಯಾಚರಣೆಗಳನ್ನು ಬಿರುಸುಗೊಳಿಸಲಾಗಿದೆ.  ಏತನ್ಮಧ್ಯೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ದಿಲ್ಲಿಯಲ್ಲಿ ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯದ ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸಿ, ಕೇಂದ್ರದ ನೆರವು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next