Advertisement

ನಾಡೋಳಿ ಸೇತುವೆ: ದುರಸ್ತಿ ಆರಂಭ

11:50 PM May 29, 2019 | mahesh |

ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ ನಾಡೋಳಿಯಲ್ಲಿರುವ ಸೇತುವೆಯ ದುರಸ್ತಿ ಕಾರ್ಯ ಆರಂಭವಾಗಿದೆ. ಘನ ವಾಹನ ಸಂಚರಿಸುವಷ್ಟು ಸಾಮರ್ಥ್ಯದ ಸೇತುವೆ ಕುಸಿತದ ಭೀತಿ ಎದುರಿಸುತ್ತಿದೆ. ಪಿಲ್ಲರ್‌ಗಳು ದುರ್ಬಲವಾಗಿವೆ. ಅವುಗಳ ಕಾಂಕ್ರೀಟ್ ಕಿತ್ತುಹೋಗಿ ಎದ್ದು ಹೋಗಿ ಕಬ್ಬಿಣದ ಸರಳು ಕಾಣಿಸುತ್ತಿದೆ. ಕಬ್ಬಿಣದ ಸರಳು ತುಕ್ಕು ಹಿಡಿದಿದ್ದು, ದುರಸ್ತಿ ಕಾಮಗಾರಿ ಆರಂಭವಾಗಿದೆ.

Advertisement

ಸಂಪರ್ಕ ಕೊಂಡಿ ಈ ಸೇತುವೆ
ಈ ಸೇತುವೆಯ ಮೂಲಕ ಪಾಲ್ತಾಡಿ, ಉಪ್ಪಳಿಗೆ, ಮಾಡಾವು, ಮಣಿಕ್ಕರ, ತಾರಿಪಡ್ಪು, ಅಂಕತ್ತಡ್ಕ, ಜಾಣಮೂಲೆ, ಅರೆಪ್ಪಳ ಮೊದಲಾದೆಡೆಯಿಂದ ಮಂಜುನಾಥನಗರ, ಬಂಬಿಲ ಮೂಲಕ ಸವಣೂರನ್ನು ಸಂಪರ್ಕಿಸಲು, ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮಂಜುನಾಥನಗರ ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಸಿದ್ಧಿವಿನಾಯಕ ಸಭಾಭವನ, ಭಜನ ಮಂದಿರ, ಮಹಾದೇವಿ ದೇವಸ್ಥಾನ ಬಂಬಿಲ ಮುಂತಾದ ಕಡೆಗಳಿಗೆ ಈ ಸೇತುವೆಯ ಮೂಲಕವೇ ಸಾಗಬೇಕಾಗಿದೆ. ಕುಸಿತದ ಭೀತಿಯಿಂದ ಈ ಸೇತುವೆಯಲ್ಲಿ ಸಂಚರಿಸುವ ಜನರಿಗೆ ಆತಂಕವಿತ್ತು.

ಅಧಿಕಾರಿಗಳಿಂದ ಪರಿಶೀಲನೆ
ಈ ಸೇತುವೆಯ ಪಿಲ್ಲರ್‌ಗಳು ದುರ್ಬಲಗೊಂಡು ಅಪಾಯಕಾರಿ ಸ್ಥಿತಿ ಯಲ್ಲಿರುವುದರಿಂದ ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌, ಕಂದಾಯ ನಿರೀಕ್ಷಕ ನವೀನ್‌, ಜಿ.ಪಂ. ಎಂಜಿನಿಯರ್‌ ಗೋವರ್ಧನ್‌ ಮೊದಲಾದವರು ಸ್ಥಳಕ್ಕೆ ಬಂದು ಪರಿಶೀಲಿಸಿ ದುರಸ್ತಿ ಕುರಿತಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಸೇತುವೆಯ ಪಿಲ್ಲರ್‌ ದುರಸ್ತಿ ಕಾರ್ಯ ನಡೆಯುತ್ತಿದೆ. ಆದರೆ ಭವಿಷ್ಯದಲ್ಲಿ ಇಲ್ಲಿ ನೂತನ ಸೇತುವೆಯ ಅಗತ್ಯವಿದೆ. ದುರಸ್ತಿ ಮಾಡಿದರೆ ಒಂದು ವರ್ಷದ ಬಳಿಕ ಮತ್ತೆ ಅದೇ ಸ್ಥಿತಿಗೆ ಬರುತ್ತಿದ್ದು, ಕಳೆದ ವರ್ಷವೂ ದುರಸ್ತಿ ನಡೆದಿತ್ತು. ಅತಿವೃಷ್ಟಿಯಿಂದಾಗಿ ಕೊಚ್ಚಿ ಹೋಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next