Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ಮತಕ್ಷೇತ್ರದ ನಾಲತವಾಡ ಭಾಗದಲ್ಲಿ ಇನ್ನೂ ನಾಡಗೌಡ ಪಾಳೆಗಾರಿಕೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ವಿರುದ್ಧ ಯಾರೂ ಪ್ರಶ್ನೆ ಮಾಡದಂತೆ ಮಾಡಿದ್ದಾರೆ.ಉತ್ತಮ ಸಮಾಜಕ್ಕೋಸ್ಕರ ಜನ ಜಾಗೃತಿ ಅಭಿಯಾನ ನಿಮಿತ್ತ ನಾಲತವಾಡಕ್ಕೆ ತೆರಳಿದಾಗ ಬೆಂಬಲಿಗರೊಬ್ಬರು ನಾಡಗೌಡರ ಬಗ್ಗೆ ಯಾವುದೇ ರೀತಿ ಪ್ರಶ್ನೆ ಮಾಡಬೇಡಿ. ನಿನ್ನನ್ನು ಜೀವಂತ ಹೋಗಲು ಅವರು ಬಿಡುವುದಿಲ್ಲ ಎಂಬ ಬೆದರಿಕೆ ಮಾತು ಹೇಳುತ್ತಾರೆ. ಪ್ರಶ್ನಾತೀತ ನಾಯಕರೆಂದು ಹೇಳಿಕೊಳ್ಳುವ ನಾಡಗೌಡರು ಜನರು ಪ್ರಶ್ನೆ ಮಾಡದ ಹಾಗೆ ಅಭಿವೃದ್ಧಿ ಮಾಡಿಲ್ಲ, ಕೇವಲ ಭಯ ಹುಟ್ಟಿಸುವ ರೀತಿಯಲ್ಲಿ ಕಾಪಾಡಿಕೊಂಡು ಮುನ್ನಡೆದಿದ್ದಾರೆ ಎಂದರು.
Related Articles
Advertisement
ನಾನು ಕೈಗೊಂಡಿರುವ ಈ ಜನ ಜಾಗೃತಿ ಉದ್ದೇಶ ನಾಡಗೌಡ ನಡಹಳ್ಳಿ ಹಟಾವೋ ಮುದ್ದೇಬಿಹಾಳ ಬಚಾವೋ ಹೊಂದಿದೆ. ಈ ಇಬ್ಬರೂ ಶಾಸಕರು ಮಾವಿನಗಿಡದ ಹಾಗಿಲ್ಲ, ಬೇವಿನ ಗಿಡದ ಹಾಗೆ ವಿಷ ಕಾರುವವರಾಗಿದ್ದಾರೆ. ಮುಂದೆಯೂ ಕೂಡಾ ಇವರಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾತ್ರ ಶೂನ್ಯ. ಮುಂದಿನ ಚುನಾವಣೆಯಲ್ಲಿ ಇವರು ಜನರ ಬಳಿಗೆ ಹೋಗುವುದಾದರೆ ರಸ್ತೆ, ನೀರು, ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರೋಗ್ರೆಸ್ ಕಾರ್ಡ್ ಮುಂದಿಟ್ಟುಕೊಂಡು ಹೋಗಲಿ, ಅದನ್ನು ಬಿಟ್ಟು ಭಯಹುಟ್ಟಿಸುತ್ತ ಮತ ಪಡೆದು ಪಾಳೇಗಾರಿಕೆ ಆಡಳಿ ನಿಲ್ಲಿಸಲಿ ಎಂದರು.
ಶಾಸಕ ನಡಹಳ್ಳಿ ಅವರಿಗೆ ಸ್ವಕ್ಷೇತ್ರ ದೇವರಹಿಪ್ಪರಗಿಯನ್ನು ಕ್ಲೀನ್ ಮಾಡಲು ಆಗುತ್ತಿಲ್ಲ. ಅದನ್ನು ಬಿಟ್ಟು ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ನಾನು ಯಾವುದೇ ಪಕ್ಷದ ಪರ ಕೆಲಸ ಮಾಡಲು ಹೊರಟಿಲ್ಲ. ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಆಡಳಿತ ತರಬೇಕು ಎಲ್ಲರಿಗೂ ಪ್ರಶ್ನೆ ಮಾಡುವ ಹಕ್ಕು ಬರಬೇಕೆಂಬುದು ನನ್ನ ಆಸೆಯಾಗಿದೆ. ನಾನು ರಾಜಕೀಯಕ್ಕೆ ಬರಬೇಕೆಂಬ ಆಸೆಯಿಲ್ಲ. ಸಾಮಾಜಿಕ ಹೋರಾಟಗಳನ್ನು ಮುಂದುವರಿಸಿ ಕ್ಷೇತ್ರದಲ್ಲಿ ಬದಲಾವಣೆ ತರಲು ಜನಜಾಗೃತಿ ಅಭಿಯಾನ ಕೈಗೊಂಡಿದ್ದೇನೆ ಎಂದರು.ಮಾಳಿಂಗರಾಯ ವನಹಳ್ಳಿ, ಬಸವರಾಜ ದನ್ನೂರ, ಮಲ್ಲಿಕಾರ್ಜುನ ಲಿಂಗದಳ್ಳಿ ಇದ್ದರು.