Advertisement

ಬಿಎಸ್‌ವೈ ಸರ್ಕಾರಕ್ಕೆ ನಡ್ಡಾ ಮೆಚ್ಚುಗೆ

07:19 AM Jun 15, 2020 | Team Udayavani |

ರಾಮನಗರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಕರ್ನಾಟಕದ ಕಾರ್ಯಕರ್ತರನ್ನು ಉದ್ದೇಶಿಸಿ ನಡೆಸಿದ ಸಂವಾದ ಕಾರ್ಯಕ್ರಮದ ನೇರ ಪ್ರಸಾರ ಆರ್‌ವಿಸಿಎಸ್‌ ಕನ್ವೆನ್ಶನ್‌ ಹಾಲ್‌ನಲ್ಲಿ ಏರ್ಪಡಿಸಿದ್ದರು. ಬೃಹತ್‌  ಸ್ಕ್ರೀನ್‌ಲ್ಲಿ ಮೂಡಿದ ಪ್ರಸಾರವನ್ನು ಸ್ಥಳೀಯ ನಗರದ ನಾಗರಿಕ ಪ್ರಮುಖರು ಮತ್ತು ಬಿಜೆಪಿ ಕಾರ್ಯಕರ್ತರು ವೀಕ್ಷಿಸಿದರು.

Advertisement

ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಸಹ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರ ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಕರ್ನಾಟಕದಲ್ಲಿ ಬಿಎಸ್‌ವೈ ನೇತೃತ್ವದ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡು ತ್ತಿದೆ. ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಸಂಪರ್ಕ ಇಲ್ಲದ ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ವಿಚಾರವನ್ನು ನಡ್ಡಾ ಪ್ರಸ್ತಾಪಿಸಿದರು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಆಯುಶ್ಮಾನ್‌ ಭವ, ದೇಶದ ಸುಮಾರು 5 ಕೋಟಿ ಮಂದಿಯನ್ನು ತಲುಪಲಿದೆ. ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿ ಈ  ಯೋಜನೆಯ ಉಪಯೋಗ ಪಡೆದು ಕೊಂಡಿದ್ದಾರೆ. ಬಡ ಕಟುಂಬಗಳಿಗೆ ಉನ್ನತ ಚಿಕಿತ್ಸೆ, ಶಸOಉಚಿ ಕಿತ್ಸೆ ಅಗತ್ಯವಿದ್ದಲ್ಲಿ ಇಷ್ಟು ದಿನ ಅದು ಸಾಧ್ಯವಿರಲಿಲ್ಲ. ಆಯುಶ್ಮಾನ್‌ ಮೂಲಕ ಇದು ಸಾಧ್ಯವಾಗಿದೆ, ಈ ಯೋಜನೆ ನರೇಂದ್ರ ಮೋದಿ  ಅವರ ಕಲ್ಪನೆಯಾಗಿದ್ದು, ಸಾಕಾರಗೊಳ್ಳುತ್ತಿದೆ ಎಂದು ಕಾರ್ಯಕರ್ತರು ಧನ್ಯತಾ ಭಾವ ಪ್ರದರ್ಶಿಸಿದರು.

ಕೋವಿಡ್‌ 19 ಲಾಕ್‌ಡೌನ್‌ ಸಂದರ್ಭದಲ್ಲಿ ಸವಿತಾ ಸಮಾಜದವರಿಗೆ, ಮಡಿವಾಳರಿಗೆ, ಆಟೋರಿಕ್ಷಾ ಚಾಲಕರಿಗೆ, ಆಶಾ  ಕಾರ್ಯಕರ್ತೆಯರಿಗೆ ನೀಡಿದ ನಗದು ಪ್ರೋತ್ಸಾಹದ ಬಗ್ಗೆಯೂ ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ಕೊರೊನಾ ಸೋಂಕಿತರಿಗೆ ಬಿಜೆಪಿ ಕಾರ್ಯಕರ್ತರ ಸೇವೆ ಮುಂದುವರಿಸುವ ಅವರ ಸೂಚನೆಯನ್ನು ಪಾಲಿಸುವುದಾಗಿ ಸ್ಥಳೀಯ  ಮುಖಂಡರು ಮತ್ತು ಕಾರ್ಯಕರ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next