Advertisement

ನಾದಸುಧಾ ಸಂಗೀತ ವಿದ್ಯಾಲಯ: ಶಾಸ್ತ್ರೀಯ ಸಂಗೀತ ಕಛೇರಿ

03:18 PM Feb 02, 2018 | |

ನಾದಸುಧಾ ಸಂಗೀತ ವಿದ್ಯಾಲಯ (ರಿ.) ಮಂಗಳೂರು ಇದರ ಹನ್ನೊಂದನೇ ವಾರ್ಷಿಕೋತ್ಸವ ಹಾಗೂ ತ್ಯಾಗರಾಜ ಆರಾಧನೆಯ ಅಂಗವಾಗಿ ಇತ್ತೀಚೆಗೆ ವಿದ್ವಾನ್‌ ವಿಷ್ಣುದೇವ ನಂಬೂದಿರಿ,ಚೆನ್ನೈ ಅವರ ಶಾಸ್ತ್ರೀಯ ಸಂಗೀತ ಕಛೇರಿ ಜರಗಿತು. ಶಹನಾ ರಾಗದ ವರ್ಣದೊಂದಿಗೆ ಪ್ರಾರಂಭವಾದ ಕಛೇರಿ ಶ್ರೀ ಮಹಾಗಣಪತಿ ರವತು ಮಾಂ… ಗೌಳರಾಗದ ಸ್ತುತಿಯಿಂದ ರಂಜಿಸಿತು. ಮಾಕೇಲರಾ ಕೃತಿಯ ಬಳಿಕ ಉಪಪ್ರಧಾನ ರಾಗವಾಗಿ ಪಂತುವರಾಳಿಯ ಎನ್ನಗಾನು ರಾಮಭಜನ… ಮನಗೆದ್ದಿತು. ಪ್ರಧಾನ ರಾಗ ಭೈರವಿಯ ರಕ್ಷ ಬೆಟ್ಟರೆಯ ಆಲಾಪನೆ, ನೆರವಲ್‌ ಸ್ವರಕಲ್ಪನೆಯು ಅತೀತ ಎಡುಪ್ಪಿನೊಂದಿಗೆ ಮೂಡಿಬಂತು. ಆರಭಿ ರಾಗದ ದೇವರ ನಾಮದ ಅನಂತರ ಹಮೀರ್‌ ಕಲ್ಯಾಣಿ ರಾಗದಲ್ಲಿ ಮಾಯೇ ಸಮುದಾಯೇ ಶಿವಜಾಯೇ ಪಾಹಿಮಾಂ… ಸಾಹಿತ್ಯದ ಮಿಶ್ರ ತ್ರಿಪುಟ ಗತಿಯ ರಾಗತಾನ ಪಲ್ಲವಿಯನ್ನು ರಾಗಮಾಲಿಕೆಯೊಂದಿಗೆ ಹಾಡಿದರು. ಗೋವಿಂದ ನಿನ್ನ ನಾಮವೇ ಚಂದ… ದೇವರನಾಮ ಜನಸಮ್ಮೊàಹಿನಿಯಲ್ಲಿ ಹಾಗೂ ಮೋಹನ ಕಲ್ಯಾಣಿಯ ತಕ ತಝಣ ಧೀಂತ… ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. ವಯಲಿನ್‌ನಲ್ಲಿ ವಿದ್ವಾನ್‌ ಗಣರಾಜ ಕಾರ್ಲೆ ಮತ್ತು ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. 

Advertisement

ಇದಕ್ಕೂ ಮೊದಲು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ಹಾಗೂ ಶಿಕ್ಷಕಿ ವಿದುಷಿ ಅರುಣಾ ಕೆ.ಎಸ್‌.ಭಟ್‌ ನೇತೃತ್ವದಲ್ಲಿ ತ್ಯಾಗರಾಜ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನೆರವೇರಿತು. ವಿದ್ವಾನ್‌ ಶ್ರೀಧರ ರೈ ಕಾಸರಗೋಡು ಮೃದಂಗದಲ್ಲಿ ಮತ್ತು ಸುಮೇಧ ಅಮೈ ವಯಲಿನ್‌ನಲ್ಲಿ ಸಹಕರಿಸಿದರು. 

ಶ್ರೋತೃ 

Advertisement

Udayavani is now on Telegram. Click here to join our channel and stay updated with the latest news.

Next