Advertisement

ನಾಡಪ್ರಭು ಕೆಂಪೇಗೌಡ ಜಯಂತಿ

04:23 PM Jun 29, 2020 | Suhan S |

ಹೊನ್ನಾವರ: ತಾಲೂಕು ಒಕ್ಕಲಿಗರ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ ವಿಜಯನಗರ ಸಾಮ್ರಾಜ್ಯದ ವೈಭವ ನೋಡಿ ಅದರಂತೆ ಬೆಂಗಳೂರು ನಿರ್ಮಿಸಲು ಪಣತೊಟ್ಟು ನಿರ್ಮಾಣ ಮಾಡಿದವರು ನಮ್ಮ ಸಮಾಜದವರು ಎಂದು ಹೇಳಲು ಪ್ರತಿಯೊಬ್ಬರು ಹೆಮ್ಮೆಪಡಬೇಕಿದೆ. ಕೇವಲ ಸಮಾಜಕ್ಕಷ್ಟೆ ಕೊಡುಗೆ ನೀಡಿದ ಎಲ್ಲಾ ಸಮಾಜ ಸೇರಿಸಿಕೊಂಡು ಒಂದೊಂದು ಪ್ರಾಂತ್ಯದ ರೂಪದಲ್ಲಿ ನಿರ್ಮಾಣ ಮಾಡಿದ್ದರು. ಅವರ ಜನ್ಮದಿನವನ್ನು ಹಬ್ಬದಂತೆ ಸಮಾಜ ಬಾಂಧವರು ಆಚರಿಸಬೇಕಿದೆ ಎಂದರು.

Advertisement

ಜಿಪಂ ಮಾಜಿ ಸದಸ್ಯ ಕೃಷ್ಣ ಗೌಡ ಮಾತನಾಡಿ 500 ವರ್ಷಗಳ ಹಿಂದೆ ನಮ್ಮ ಸಮಾಜದವರು ಸಾಧಿಸಿದ ಸಾಧನೆ ಇಂದಿಗೂ ಹೆಮ್ಮೆ ಪಡುವಂತದಾಗಿದೆ. ಬೆಂಗಳೂರನ್ನು ಇಂದು ಇಡೀ ವಿಶ್ವ ತಿರುಗಿ ನೋಡುವಂತೆ ಮಾಡಿರುವಲ್ಲಿ ನಮ್ಮ ಸಮಾಜ ಪಾತ್ರ ಬಹುಮುಖ್ಯವಾಗಿದೆ. ತಾಲೂಕಿನ ಸಮಾಜದವರು ಒಗ್ಗಟ್ಟಾಗಿ ಮುಂದೆಯೂ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸೋಣ ಎಂದರು.

ಜಿಪಂ ಸದಸ್ಯರಾದ ಸವಿತಾ ಕೃಷ್ಣ ಗೌಡ, ತಾಪಂ ಸದಸ್ಯ ಗಣಪಯ್ಯ ಗೌಡ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ದೇವಿ ಮಾಬ್ಲು ಗೌಡ, ಶಿಕ್ಷಕರಾದ ಜಿ.ಆರ್‌. ಗೌಡ ಉಪಸ್ಥಿತರಿದ್ದರು. ಬಾಲಚಂದ್ರ ಗೌಡ ಸ್ವಾಗತಿಸಿದರು. ಅಣ್ಣಪ್ಪ ಗೌಡ ವಂದಿಸಿದರು. ಜಗದೀಶ ಗೌಡ ನಿರ್ವಹಿಸಿದರು. ಗೌಡ, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಮಾಬ್ಲು ಗೌಡ, ಶಿಕ್ಷಕರಾದ ಜಿ.ಆರ್‌. ಗೌಡ ಉಪಸ್ಥಿತರಿದ್ದರು. ಬಾಲಚಂದ್ರ ಗೌಡ ಸ್ವಾಗತಿಸಿದರು. ಅಣ್ಣಪ್ಪ ಗೌಡ ವಂದಿಸಿದರು. ಜಗದೀಶ ಗೌಡ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next