ಮಾಗಡಿ: ವಿಶ್ವವೇ ತಿರುಗಿ ನೋಡುವಂತೆ ಬೃಹತ್ ಬೆಂಗಳೂರು ನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಕೇವಲ ಜನಪ್ರತಿನಿಧಿಗಳ ಭಾಷಣಕ್ಕಷ್ಟೇ ಸೀಮಿತವಾದಂತಿದ್ದಾರೆ. ಕೆಂಪೇ ಗೌಡರು ಕಟ್ಟಿದ ಕಟ್ಟಿದ ಗುಡಿ, ಗೋಪುರ, ಕೋಟೆ ಕೊತ್ತಲು, ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಅಭಿವೃದ್ಧಿ ಮಾಡದೇ ಅವರ ತತ್ವಾದರ್ಶವನ್ನು ಪಾಲಿಸಬೇಕೆಂದು ಹೇಳುವವರೇ ಹೆಚ್ಚಾಗಿದ್ದಾರೆ!
ನಾಡಪ್ರಭುವಿನ ಬಹುತೇಕ ಕುರುಹು ಮಾಗಡಿಯಲ್ಲಿ ಪತ್ತೆಯಾಗಿದ್ದರೂ ಸಂರಕ್ಷಿಸುವ ಕೆಲಸವೂ ಆಗಿಲ್ಲ. ಜತೆಗೆ ಸುಂದರವಾದ ಪ್ರವಾಸಿ ತಾಣವೂ ಈವರೆಗೂ ಅಭಿವೃದ್ಧಿ ಆಗಿಲ್ಲ.
ಗಣ್ಯರು ಭೇಟಿ: ಕೆಂಪಾಪುರದಲ್ಲಿ ಹಿರಿಯ ಕೆಂಪೇ ಗೌಡ ಐಕ್ಯ ಸ್ಥಳ ಪತ್ತೆಯಾಗಿ ಹಲವು ವರ್ಷಗಳೇ ಕಳೆದಿ ವೆ. ರಾಷ್ಟ್ರ ನಾಯಕರು, ರಾಜ್ಯದ ಸಚಿವರು, ಬಿಬಿ ಎಂಪಿ ಮೇಯರ್, ಸದಸ್ಯರು, ಮಠಾಧೀಶರು, ಕೆಂ ಪೇಗೌಡ ಅಭಿಮಾನಿಗಳು, ಜನನಾಯಕರು, ಜನ ಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಕೆಂಪೇಗೌಡರ ತತ್ವಾ ದರ್ಶ ಹಾಡಿ ಹೊಗಳಿದರೇ ವಿನಹಃ ಐಕ್ಯ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸುವ ಭರವಸೆ ಈಡೇರಿಲ್ಲ.
ಅನುದಾನ ಏನಾಯಿತು?: ಕೆಂಪೇಗೌಡ ಪ್ರಾಧಿಕಾರ ರಚನೆಯಾಗಿದೆ. ಅಧ್ಯಕ್ಷರು, ನಿರ್ದೇಶಕರು ಎಲ್ಲರೂ ಕೆಂಪೇಗೌಡರ ಕಾಲದ ಪಳೆಯುಳಿಕೆ ಉಳಿಸುತ್ತೇವೆ ಎಂದವರು ಅಧಿಕಾರ ಮುಗಿದರೂ ಅಭಿವೃದ್ಧಿ ಮರೀಚಿಕೆ. ಇದಕ್ಕಾಗಿ ಸರ್ಕಾರವು ಕೋಟ್ಯಂತರ ರೂ. ಮಂಜೂರು ಮಾಡಿದ್ದಾಗಿ ಪ್ರಚಾರಗಿಟ್ಟಿಸಿತು. ಬಿಬಿ ಎಂಪಿ ಯೂ 5 ಕೋಟಿ ಅನುದಾನ ಮಂಜೂರು ಮಾಡಿರು ವುದಾಗಿ ಹೇಳಿ ಹಲವು ವರ್ಷಗಳೇ ಕಳೆದಿವೆ.
ಅಪಮಾನ: ಕೆಂಪಾಪುರದಲ್ಲಿನ ಶಿಥಿಲಗೊಂಡಿರುವ ಹಿರಿಯ ಕೆಂಪೇಗೌಡರ ಐಕ್ಯ ಸ್ಥಳ ಅಭಿವೃದ್ಧಿ ಕಂಡಿಲ್ಲ. ಈ ಹಿಂದಿನ ಸ್ಥಿತಿಯಲ್ಲಿಯೇ ಇದೆ. ಕನಿಷ್ಠ ಮುರಿದ ಕಲ್ಲುಗಳನ್ನಾದರೂ ಸರಿಪಡಿಸಿಲ್ಲ. ಈ ಸಮಾಧಿಯೂ ದಿನೇ ದಿನೆ ಕಾಲನ ಲೀಲೆಗೆ ಕರಗಿ ಹೋಗುತ್ತಿದೆ. ವರ್ಷಕ್ಕೊಮ್ಮೆ ಜಯಂತಿ, ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ. ಖರ್ಚು ಆಗಿದೆ. ಆದರೆ, ಸಂರಕ್ಷಣೆಗೆ ನಿರ್ಲಕ್ಷ್ಯವಹಿಸಿರುವುದು ನಿಜಕ್ಕೂ ಕೆಂಪೇಗೌಡರಿಗೆ ಮಾಡಿರುವ ಅಪಮಾನ.
ಕೆಂಪೇಗೌಡ ಕಟ್ಟಿದ ಕೋಟೆ ಅಪೂರ್ಣಗೊಂಡಿದ್ದು ಪೂರ್ಣಗೊಳಿಸುವುದು, ಅವರ ಕಾಲದ ಪಳೆಯುಳಿಕೆ ಸಂರಕ್ಷಿಸುವ ಕೆಲಸ ಮಾಡಲಾಗುವುದು. ಕೆಂಪಾಪುರದ ಹಿರಿಯ ಕೆಂಪೇಗೌಡ ಐಕ್ಯ ಸ್ಥಳ ಅಭಿವೃದ್ಧಿ, ಪ್ರವಾಸಿ ತಾಣವನ್ನಾಗಿಸಲು ಯೋಜನೆ ರೂಪಿಸಲಾಗುವುದು.
– ಎಚ್.ಸಿ.ಬಾಲಕೃಷ್ಣ, ಶಾಸಕರು ಮಾಗಡಿ ಕ್ಷೇತ್ರ
ಮಾಗಡಿ ಪುರಸಭೆ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ್ದು, ಕಳೆದ 20 ವರ್ಷ ದಿಂದ ಪ್ರತಿಮೆಗೆ ವಿಶೇಷ ಪೂಜೆ, ಜಯಂತಿ ಆಚರಿಸಲಾಗುತ್ತಿದೆ. ಕೆಂಪೇಗೌಡರ ಹೆಸರಿನಲ್ಲಿ ಆರೋಗ್ಯ ಶಿಬಿರ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಮಾಡಲಾಗುತ್ತಿದೆ.
– ಎಚ್.ಎಂ.ಕೃಷ್ಣಮೂರ್ತಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷರು
–ತಿರುಮಲೆ ಶ್ರೀನಿವಾಸ್