Advertisement
ಫ್ರೆಂಚ್ ಓಪನ್ ರನ್ನರ್ ಅಪ್ ಆಗಿರುವ ರೊಮೇನಿಯಾದ ಸಿಮೋನಾ ಹಾಲೆಪ್ 6-4, 6-3ರಿಂದ ಲಾತ್ವಿಯಾದ ಅನಾಸ್ತಾಸಿಜಾ ಸೆವತ್ಸೋವಾ ಅವರಿಗೆ ಸೋಲುಣಿಸಿದರು. ಇಲ್ಲಿ ಚಾಂಪಿಯನ್ ಆಗಿ ಮೂಡಿಬಂದದ್ದೇ ಆದಲ್ಲಿ ಹಾಲೆಪ್ ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿ ಮೂಡಿಬರಲಿದ್ದಾರೆ.
Related Articles
ವಿಂಬಲ್ಡನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ, ಬ್ರಿಟನ್ನಿನ 7ನೇ ಶ್ರೇಯಾಂಕಿತೆ ಜೊಹಾನ್ನಾ ಕೊಂಟಾ ಅವರ ಪಂದ್ಯಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ಜೊಹಾನ್ನಾ ಕೊಂಟಾ 6-3, 6-4ರಿಂದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಮಣಿಸಿದರೆ, ಮುಗುರುಜಾ ಅಮೆರಿಕದ ಮ್ಯಾಡಿಸನ್ ಕೇಯ್ಸ ಅವರನ್ನು 6-4, 3-6, 7-6 (7-3)ರಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಮುಗುರುಜಾ ಅವರಿನ್ನು ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ವಿರುದ್ಧ ಆಡಲಿದ್ದಾರೆ. ಕುಜ್ನೆತ್ಸೋವಾ ಸ್ಪೇನಿನ ಕಾರ್ಲಾ ಸುರೆಜ್ ನವಾರೊ ವಿರುದ್ಧ 6-2, 6-4 ಅಂತರದ ಜಯ ಸಾಧಿಸಿದರು.
Advertisement
ರಫೆಲ್ ನಡಾಲ್-ಆಲ್ಬರ್ಟ್ ರಮೋಸ್ ವಿಲಾಸ್ ನಡುವಿನ 3ನೇ ಸುತ್ತಿನ ಪಂದ್ಯ ಭಾರೀ ಮಳೆಯಿಂದ ಆರಂಭವಾಗಲಿಲ್ಲ. ಈ ಟೆನಿಸ್ ಅಂಕಣ ಕೆರೆಯಂತಾಗಿದ್ದು, ಮೈಕಲ್ ಪೆಲ್ಫ್$Õ ಅವರಿಗೆ ಈಜಲು ಅತ್ಯಂತ ಪ್ರಶಸ್ತವಾಗಿದೆ ಎಂದು ಮಾಧ್ಯಮಗಳು ವ್ಯಂಗ್ಯವಾಡಿವೆ!