Advertisement
ದಾಖಲೆ 23ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದ ನಡಾಲ್ ಈ ವರ್ಷ ಇದೇ ಮೊದಲ ಬಾರಿಗೆ ಪ್ರಮುಖ ಕೂಟದಲ್ಲಿ ಸೋತು ನಿರ್ಗಮಿಸಿದ್ದಾರೆ. ಅವರನ್ನು ತಿಯಾಫೋಯಿ 6-4, 4-6, 6-4, 6-3 ಸೆಟ್‌ಗಳಿಂದ ಸೋಲಿಸಿದರು. ನನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಇದು ಸಂತೋಷಕ್ಕಿಂತಲೂ ಮಿಗಿಲಾದದ್ದು. ನನಗೆ ಖುಷಿಯಲ್ಲಿ ಅಳು ಬರುತ್ತಿದೆ ಎಂದು ಪಂದ್ಯದ ಬಳಿಕ ತಿಯಾಫೋಯಿ ಹೇಳಿದರು.
Related Articles
ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ ಕಠಿನ ಹೋರಾಟದಲ್ಲಿ ಜೂಲಿ ನೀಮೀಯರ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದ್ದಾರೆ. ಮೊದಲ ಸೆಟ್‌ನಲ್ಲಿ ಸೋತಿದ್ದ ಸ್ವಿಯಾಟೆಕ್ ಅಂತಿಮವಾಗಿ 2-6, 6-4, 6-0 ಸೆಟ್‌ಗಳಿಂದ ಗೆದ್ದು ಬಂದರು. ಈ ವರ್ಷದ ಆರಂಭದಲ್ಲಿ ಅವರು ಸತತ 37 ಪಂದ್ಯಗಳಲ್ಲಿ ಗೆಲುವು ಸಾಧಿಸುವ ವೇಳೆ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು. ಮುಂದಿನ ಸುತ್ತಿನಲ್ಲಿ ಅವರು ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಎದುರಿಸಲಿದ್ದಾರೆ.
Advertisement
ಸಿಲಿಕ್‌ಗೆ ಸೋಲುಸ್ಪೇನ್ನ 19ರ ಹರೆಯದ ಕಾರ್ಲೋಸ್ ಅಲ್ಕಾರಾಝ್ 2014ರ ಚಾಂಪಿಯನ್ ಮರಿನ್ ಸಿಲಿಕ್ ಅವರನ್ನು 6-4, 3-6, 6-4, 4-6, 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಈ ಗೆಲುವಿನಿಂದ ಈ ಬಾರಿ ಹೊಸ ಆಟಗಾರ ಇಲ್ಲಿ ಪ್ರಶಸ್ತಿ ಗೆಲ್ಲುವುದು ಖಚಿತವಾಗಿದೆ. ಮುಂದಿನ ಸುತ್ತಿನಲ್ಲಿ ಅವರು ಜಾನ್ನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಅರಿನಾ ಸಬಲೆಂಕಾ ಅವರು ಡಾನಿಲೆ ಕಾಲಿನ್ಸ್ ಅವರನ್ನು 3-6, 6-3, 6-2 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಅಲ್ಲಿ ಅವರು ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಎದುರಿಸಲಿದ್ದಾರೆ.