Advertisement
ಇಡೀ ಕಚೇರಿ ಜಲಾವೃತ ಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ರೂಂನಿಂದ ಪಹಣಿ, ಇತರೆ ದಾಖಲೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಡಕಚೇರಿ ಉಪತಹಶೀಲ್ದಾರ್ ಕಚೇರಿ ಬಳಿ ಮಳೆಯಿಂದ ಕಚೇರಿ ಶಿಥಿಲಗೊಂಡಿದ್ದು, ನ.20ರಂದು ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸೂಚನಾ ಫಲಕವನ್ನು ಲಗತ್ತಿಸಿ, ಕಚೇರಿಗೆ ಬೀಗ ಹಾಕಲಾಗಿದೆ. ರೈತರು ತಮ್ಮ ದಾಖಲೆಗಳು ಸಿಗದೆ ವಾಪಸ್ಸಾದರು.
Related Articles
Advertisement
ಕಚೇರಿಯ ಎಲ್ಲಾ ಕೊಠಡಿಗಳು ಮಳೆಯಿಂದ ನೆನೆಯುತ್ತಿದ್ದು, ಅಧಿ ಕಾರಿಗಳು ಕುಳಿತು ಕೆಲಸ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ನಾಡಕಚೇರಿ ಉಪತಹಶೀಲ್ದಾರ್ ಜಗನ್ನಾಥರೆಡ್ಡಿ ಮಾತನಾಡಿ, ನಿರಂತರ ಮಳೆಗೆ ರೆಕಾರ್ಡ್ ರೂಮ್ ಸೋರಿಕೆ ಆಗುತ್ತಿದ್ದು, ಕಡತಗಳನ್ನು ಸಂರಕ್ಷಿಸಲು ಟಾರ್ಪಲ್ ಹಾಕಲಾಗಿದೆ.
ಕಂಪ್ಯೂಟರ್ ರೂಂನಲ್ಲಿ ನೀರು ಸುರಿಯುತ್ತಿರುವ ಕಾರಣ ಕರೆಂಟ್ ಶಾಕ್ ಹೊಡೆಯುತ್ತಿದ್ದು, ನಾಡಕ ಚೇರಿಯ ಕಾರ್ಯಚಟುವಟಿಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದು ಹೇಳಿದರು. ಮಳೆ ನಿಲ್ಲುವ ಸೂಚನೆ ನೋಡಿಕೊಂಡು ಶಿಥಿಲವಾದ ಕಡೆ ಸ್ವಲ್ಪಮಟ್ಟಿಗೆ ರೀಪೇರಿ ಮಾಡಿಕೊಂಡು ಮುಂದು ವರಿಸಲಾಗುತ್ತದೆ. ಕೆ.ಜಿ.ಹಳ್ಳಿ ಸರ್ವೆ ನಂ.10ರಲ್ಲಿ 20 ಗುಂಟೆ ಸ್ಥಳ ನಾಡಕಚೇರಿಗೆ ಮಂಜೂರು ಆಗಿದ್ದು, ಡೀಸಿ ಆದೇಶದಂತೆ ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ವಿವರಿಸಿದರು.