Advertisement

ನಾಡಾ ಒಪ್ಪಂದ: ಕ್ರಮಗಳನ್ನು ಪಾಲಿಸದ ಜೊಹ್ರಿ?

11:19 PM Aug 12, 2019 | Sriram |

ಮುಂಬಯಿ: ಮೊನ್ನೆಯಷ್ಟೇ ನಾಡಾದಿಂದ ಉದ್ದೀಪನ ಸೇವನೆ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಬಿಸಿಸಿಐ ಒಪ್ಪಿತ್ತು. ಸತತ 10 ವರ್ಷಗಳ ವಿರೋಧಗಳ ಬಳಿಕ, ಬಿಸಿಸಿಐ ನೀಡಿದ ಈ ಒಪ್ಪಿಗೆ ಐತಿಹಾಸಿಕ ಮಾನ್ಯತೆ ಪಡೆದಿತ್ತು. ಈ ಬಗ್ಗೆ ಮಂಗಳವಾರ ಮುಂಬಯಿಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.

Advertisement

ಈ ಸಭೆಯಲ್ಲಿ ಅಕ್ಟೋಬರ್‌ನಲ್ಲಿ ನಡೆಯುವ ಬಿಸಿಸಿಐ ಚುನಾವಣೆಯ ಕುರಿತೂ ಸಂವಾದಗಳು ನಡೆಯಲಿವೆ.ಇದೇ ವೇಳೆ ಹಲವು ಪ್ರಶ್ನೆಗಳೂ ಉದ್ಭವಿಸಿವೆ. ಮೊನ್ನೆ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ನಾಡಾದಿಂದ ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸಲು ಸಹಿ ಹಾಕುವ ಮುನ್ನ ಕೆಲವು ಕ್ರಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ. ಸಹಿ ಹಾಕುವ ವೇಳೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಅನುಮತಿಯನ್ನೇ ಪಡೆಯಲಿಲ್ಲ. ಯಾವುದೇ ನಿರ್ಣಯಗಳಿಗೆ ಬರುವ ಮುನ್ನ ರಾಜ್ಯ ಸಂಸ್ಥೆಗಳ ಒಪ್ಪಿಗೆ ಪಡೆಯಬೇಕು ಎನ್ನುವುದು ಬಿಸಿಸಿಐ ನಿಯಮವಾಗಿದೆ. ಆದರೆ ರಾಜ್ಯ ಸಂಸ್ಥೆಗಳನ್ನು ಕೇಳುವುದಿರಲಿ, ಕನಿಷ್ಠ ಬಿಸಿಸಿಐ ಪದಾಧಿಕಾರಿಗಳಿಗೂ ವಿಷಯ ಗೊತ್ತಿಲ್ಲ ಎಂದು ಕೆಲಮೂಲಗಳು ಆರೋಪಿಸಿವೆ.

ಹೀಗೆ ತೆಗೆದುಕೊಳ್ಳುವ ತೀರ್ಮಾನ ಎಷ್ಟರಮಟ್ಟಿಗೆ ಸರಿಯಾಗುತ್ತದೆ? ಈ ಹಿಂದೆ ನಿರ್ಧಾರ ತೆಗೆದುಕೊಳ್ಳುವಾಗ ಪದಾಧಿಕಾರಿಗಳನ್ನು ಕೇಳಲಾಗುತ್ತಿತ್ತು. ಈ ಬಾರಿ ಏಕೆ ಹಾಗೆ ಮಾಡಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next