Advertisement

ನಾಡ ಕಚೇರಿ ನಿವೇಶನ ಒತ್ತುವರಿ ತೆರವು ಕಾರ್ಯಾಚರಣೆ

02:33 PM Dec 13, 2019 | Team Udayavani |

ಭಾರತೀನಗರ: ನಾಡಕಚೇರಿಗೆ ಮಂಜೂರಾಗಿದ್ದ ಸ್ಥಳ ಒತ್ತುವರಿ ತಹಶೀಲ್ದಾರ್‌ ನಾಗೇಶ್‌ ಸ್ಥಳದಲ್ಲಿ ಹಾಜರಿದ್ದು ತೆರವುಗೊಳಿಸಿದರು.

Advertisement

ಗ್ರಾಮದ ನಿವಾಸಿ ಲಕ್ಷ್ಮಮ್ಮ ಒತ್ತುವರಿ ಮಾಡಿ ಕೊಂಡಿದ್ದ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದ್ದರು. ಬುಧವಾರ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸುವಂತೆ ಉಪ ತಹಶೀಲ್ದಾರ್‌ ಸೋಮಶೇಖರ್‌ ಅವರಿಗೆ ಸೂಚನೆ ನೀಡಿದ್ದರು.

ಗುರುವಾರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ನಾಗೇಶ್‌ ನೇತೃತ್ವದಲ್ಲಿ ನಾಡಕಚೇರಿ ನಿವೇಶನ ತೆರವು ಗೊಳಿಸಲು ಸರ್ವೆ ನಡೆಸಿ ಗುರುತು ಹಾಕಿ, ತೆರವು ಗೊಳಿಸಿದರು. ನಾಡಕಚೇರಿಗೆ ಮಂಜೂರಾಗಿದ್ದ ಜಾಗ ಗುರುತು ಮಾಡಿ ಸಂಬಂಧ ಪಟ್ಟಿ ಎಂಜಿನಿಯರ್‌ಗೆ ಹಸ್ತಾಂತರಿಸಿ ಕಟ್ಟಡ ನಿರ್ಮಾಣ ಮಾಡುವಂತೆ ತಹಶೀಲ್ದಾರ್‌ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ನಾಗೇಶ್‌ ಮಾತನಾಡಿ, ಈ ಭಾಗದಲ್ಲಿ ಮೂರೂಕಾಲು ಗುಂಟೆ ಜಾಗವಿತ್ತು. ಅದರಲ್ಲಿ ಒತ್ತುವರಿ ಮಾಡಿಕೊಂಡಿದ್ದ ಒಂದು ಗುಂಟೆ ತೆರವುಗೊಳಿಸಿ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ನಿರ್ಮಿತಿ ಕೇಂದ್ರದವರು ಕೂಡಲೇ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವರು ಎಂದು ತಿಳಿಸಿದರು. ರಾಜಸ್ವ ನಿರೀಕ್ಷಕರಾದ ಮಹೇಶ್‌, ರಾಜಶೇಖರ್‌, ಗ್ರಾಮ ಲೆಕ್ಕಾಧಿಕಾರಿಗಳಾದ ರವಿ, ನವೀನ್‌, ಬೀರೇಶ್‌, ರುದ್ರೇಶ್‌, ಸುರೇಶ್‌, ಸೌಮ್ಯ, ಸಾಸಪ್ಪ, ಗೋವಿಂದಶೆಟ್ಟಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next