Advertisement
ಈ ವೇಳೆ ಮಾತನಾಡಿ, 2-3 ತಿಂಗಳಿಂದ ಮಳೆ ಉತ್ತಮವಾಗಿ ಬೀಳುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸವುಂಟು ಮಾಡಿದ್ದು, ರೈತರಿಗೆ ಬೆಳೆ ಸಮೃದ್ಧವಾಗಿ ದೊರೆತು, ಅವರ ಸಾಲ ಕಡಿಮೆಯಾಗುವ ಮೂಲಕ ರೈತರ ಆತ್ಮಹತ್ಯೆಗಳು ನಿಲ್ಲಬೇಕಿದೆ ಎಂದರು. ಬೆಂಗಳೂರು ಕೃಷಿ ವಿವಿ ಜಿಕೆವಿಕೆ ಕುಲಪತಿ ಡಾ.ಎಂ.ಶಿವಣ್ಣ, ರೈತರು ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ಬದಲಾವಣೆಗೆ ಹೊಂದಿಕೊಂಡು ಬೆಳೆ ಬೆಳೆಯಬೇಕು. ರಾಜ್ಯದಲ್ಲಿ 72 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇತ್ತು. ಅದು 21 ಲಕ್ಷ ಹೆಕ್ಟೇರ್‌ಗೆ ಕುಸಿದಿದೆ ಎಂದು ವಿಷಾದಿಸಿದರು.
Related Articles
Advertisement
ಸಚಿವರ ಗೈರು: ರೈತರ ಅಸಮಾಧಾನ ರೈತರಿಗಾಗಿ ನಡೆಸುವ ರೈತದಸರೆ ಉದ್ಘಾಟನೆಗೆ ಕೃಷಿ ಸಚಿವ ಕೃಷ್ಣಬೈರೇಗೌಡ ಅವರ ಗೈರು ಹಾಜರಿ ನೆರೆದಿದ್ದ ರೈತರಲ್ಲಿ ಅಸಮಾಧಾನ ಮೂಡಿಸಿತು. ಪ್ರತಿಬಾರಿಯೂ ನೆಪಮಾತ್ರಕ್ಕೆ ರೈತ ದಸರೆ ನಡೆಸಲಾಗುತ್ತದೆ. ಆದರೆ ಇದರಲ್ಲಿ ರೈತರ ಅನುಕೂಲಕ್ಕಾಗಿ ಯಾವುದೇ ಮಾಹಿತಿ ಲಭಿಸುವುದಿಲ್ಲ. ಇನ್ನೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ರೈತ ದಸರೆ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ ಎಂದು ಕೆಲವು ರೈತರು ತಮ್ಮ ಅಸಮಾಧಾನ ಹೊರಹಾಕಿದರು.
ವಿವಿಧ ವಿಭಾಗಗಳ ಸಾಧಕ ರೈತರಿಗೆ ಸನ್ಮಾನಕೃಷಿ ಇಲಾಖೆಯ ಜಿಲ್ಲಾ ಮಟ್ಟದ 2015-16ನೇ ಸಾಲಿನ ಬೆಳೆ ಕಟಾವು ಸ್ಪರ್ಧೆಯಲ್ಲಿ ಜಯಮ್ಮ, ರಾಜೇಂದ್ರ ಕುಮಾರ್, ವೀರಜಮ್ಮ, ಎ.ನಾಗರಾಜ್, ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಕಟಾವು ಸ್ಪರ್ಧೆ ವಿಜೇತರಾದ ಕೆಂಪಲಮ್ಮ, ಪುಟ್ಟೇಗೌಡ, ಪಾಪೇಗೌಡ, ಕೆ.ಎಸ್.ಶಿವಕುಮಾರ್, ಕೆ.ನಾರಾಯಣ, ತೋಟಗಾರಿಕೆ ಇಲಾಖೆಯಿಂದ ಎನ್.ಕುಮಾರ್, ಗಿರಿಜಾ, ಮಾರಯ್ಯ, ಪಶುಸಂಗೋಪನೆಯಿಂದ ಚಂದ್ರಶೇಖರ, ಅಶ್ವತ್ಥ, ಸಾಗರ್ ಅರಸ್, ಮೀನುಗಾರಿಕೆ ಇಲಾಖೆಯಿಂದ ಮಸ್ತಾನ್ ಸಾಬ್, ವಿ.ಮಹೇಶ್, ಮಂಚಯ್ಯ, ರೇಷ್ಮೆ ಇಲಾಖೆಯಿಂದ ಪುಟ್ಟೇಗೌಡ, ಮಲ್ಲೇಶ್, ಎಸ್.ಪಿ.ಬಸವರಾಜು, ಅರಣ್ಯ ಇಲಾಖೆಯಿಂದ ಎಚ್.ಬಿ.ಶಿವರಾಜು, ಎಸ್.ಎಂ.ಉಲ್ಲಾಸ್, ಎಚ್.ಎಸ್.ಮಂಜುನಾಥಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.