Advertisement

ನ್ಯಾಕ್‌ ಮಾನ್ಯತೆ ಅವಶ್ಯಕ

06:57 AM Jan 11, 2019 | Team Udayavani |

ದಾವಣಗೆರೆ: ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಕಾರ್ಯಾಗಾರ ಹೆಚ್ಚು ಸಹಕಾರಿಯಾಗಲಿವೆ ಎಂದು ಬೆಂಗಳೂರಿನ ನ್ಯಾಕ್‌ (ಎನ್‌ಎಎಸಿ) ಅಧಿಕಾರಿ ಡಾ| ವಿನಿತ ಸಾಹು ಅಭಿಪ್ರಾಯಪಟ್ಟಿದ್ದಾರೆ.

Advertisement

ಗುರುವಾರ, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಐಕ್ಯೂಎಸಿ, ನ್ಯಾಕ್‌ ಕಮಿಟಿ ಜಂಟಿಯಾಗಿ ಆಯೋಜಿಸಿದ್ದ ರಿವೈಸ್ಡ್ ಫ್ರೇಮ್‌ವರ್ಕ್‌ ಆಫ್‌ ನ್ಯಾಕ್‌ ಅಕ್ರಿಡಿಟೇಷನ್‌ ಆಫ್‌ ನಾನ್‌ ಅಕ್ರಿಡಿಟೆಡ್‌ ಆ್ಯಂಡ್‌ ಟು ಬಿ ಅಕ್ರಿಡಿಟೆಡ್‌ ಇನ್ಸಿಟಿಟ್ಯೂಷನ್ಸ್‌ ಆಫ್‌ ದಾವಣಗೆರೆ ಯುನಿವರ್ಸಿಟಿ ವಿಷಯ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ನ್ಯಾಕ್‌ ಮಾನ್ಯತೆ ಪಡೆದ ಸಂಸ್ಥೆಗಳು ಮತ್ತು ಇನ್ನೂ ಮಾನ್ಯತೆ ಪಡೆಯದ ಸಂಸ್ಥೆಗಳು ನೀಡುತ್ತಿರುವ ಉನ್ನತ ಶಿಕ್ಷಣದ ಗುಣಮಟ್ಟ ಹಾಗೂ ಅದರಲ್ಲಿ ಮಾಡಬಹುದಾದ ಬದಲಾವಣೆಗಳ ಕುರಿತು ತಿಳಿಯುವುದು ಅವಶ್ಯಕ. ಕಾರ್ಯಗಾರಗಳಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ| ಬಸವರಾಜ ಬಣಕಾರ ಮಾತನಾಡಿ, ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲಾ ಸಂಸ್ಥೆಗಳ ಸಹಕಾರ ಅಗತ್ಯ. ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನ ಹಾಗೂ ತಾರತಮ್ಯ ತೊರೆಯಬೇಕು. ವಿಶ್ವವಿದ್ಯಾಲಯದ ಇತರೆ ವಿಭಾಗಗಳಿಗೆ ಅಗತ್ಯ ಅನುದಾನ ನೀಡಲು ನ್ಯಾಕ್‌ ಸಮಿತಿ ಮಾನ್ಯತೆ ಅಗತ್ಯ ಎಂದು ತಿಳಿಸಿದರು.

ಐಕ್ಯೂಎಸಿ ನಿರ್ದೇಶಕ ಪ್ರೊ| ಸೈಯದ್‌ ಅಷ್ಫಕ್‌ ಅಹಮದ್‌, ಪ್ರೊ| ಗಾಯತ್ರಿ ದೇವರಾಜ್‌, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಬಿ.ಪಿ ವೀರಭದ್ರಪ್ಪ, ಕುವೆಂಪು ವಿಶ್ವವಿದ್ಯಾಲಯದ ಪಿ. ಲಕ್ಷ್ಮಣ್‌, ಎಚ್.ಎಸ್‌. ಅನಿತಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next