Advertisement
ಇದು ಈ ಮಾನ್ಯತೆ ಪಡೆದಿರುವ ರಾಜ್ಯದ ಮೊದಲ ಪ್ರಯೋಗಾಲಯ. ಇಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ನೀರಿನ ಜಲಮೂಲಗಳ ಮಾದರಿಗ ಳನ್ನು ಸಂಗ್ರಹಿಸಿ ಒಟ್ಟು 16 ನಿಯ ತಾಂಕಗಳ (ಬಣ್ಣ, ವಾಸನೆ, ರುಚಿ, ಹೈಡ್ರೋಜನ್ (ಪಿಎಚ್) ಪ್ರಮಾಣ, ಪ್ರಕ್ಷುಬ್ಧತೆ, ವಿದ್ಯುತ್ ವಾಹಕತೆ, ಟಿಡಿಎಸ್, ಕ್ಲೋರೈಡ್, ಗಡುಸುತನ, ಕ್ಯಾಲಿÏಯಂ ಪ್ರಮಾಣ, ಮ್ಯಾಗ್ನೇಶಿಯಂ, ಕ್ಷಾರತೆ, ನೈಟ್ರೇಟ್, ಫ್ಲೋರೈಡ್, ಕಬ್ಬಿಣ ಮತ್ತು ಸಲ್ಫೆàಟ್) ಪರೀಕ್ಷೆಗಳನ್ನು ನಡೆಸಲಾಗುವುದು.
Related Articles
Advertisement
ನೀರು ಪರೀಕ್ಷಾ ಪ್ರಯೋಗಾಲ ಯಗಳಿಗೆ ಕೇಂದ್ರ ಸರಕಾರದ ಜಲಜೀವನ್ ಮಿಷನ್‌ನ ಮಾರ್ಗ ಸೂಚಿ ಪ್ರಕಾರ ಎನ್‌ಎಬಿಎಲ್ ಮಾನ್ಯತೆ ಪಡೆಯುವುದು ಕಡ್ಡಾಯ. ಅದನ್ನು ಪಡೆಯುವುದು ಕಷ್ಟದ ಪ್ರಕ್ರಿಯೆಯಾಗಿದ್ದು, ಪ್ರಯೋಗಾಲ ಯದಲ್ಲಿ ಸೂಕ್ತ ಅರ್ಹತೆ ಹೊಂದಿರುವ, ನುರಿತ ಸಿಬಂದಿ, ಉಪಕರಣಗಳು, ಸೂಕ್ತ ಕಟ್ಟಡ ಕೂಡ ಅವಶ್ಯ.
ಪ್ರಯೋಗಾಲಯಕ್ಕೆ ಮಾನ್ಯತೆ:
ನೀಡುವ ಅಂತಿಮ ಪರಿಶೋಧನೆಯನ್ನು ಆರ್.ಕೆ. ಸೋಲಂಕಿ ನೇತೃತ್ವ ದಲ್ಲಿ, ತಾಂತ್ರಿಕ ಮೌಲ್ಯಮಾಪಕರಾದ ಸ್ಯಾಮ್ಯುಯಲ್ ಪ್ರಸನ್ನ ಅವರು ಜೂ. 2ರಂದು ಕೈಗೊಂಡಿದ್ದರು ಎಂದು ದ.ಕ. ಜಿ.ಪಂ. ಸಿಇಒ ಡಾ| ಕುಮಾರ್ ಅವರು ತಿಳಿಸಿದ್ದಾರೆ.