ಗ್ರೇಟರ್ ನೋಯ್ಡಾ: ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ಥಾನ ತಂಡವು ಅಯರ್‌ಲ್ಯಾಂಡ್ ವಿರುದ್ಧ ನಡೆದ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿದೆ.
ಇಲ್ಲಿನ ಗ್ರೇಟರ್ ನೋಯ್ಡಾದಲ್ಲಿ ರವಿವಾರ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ಅಯರ್‌ಲ್ಯಾಂಡ್ ತಂಡವನ್ನು 28 ರನ್ನುಗಳಿಂದ ಸೋಲಿಸಿದೆ. ಇನ್ನು ಉಭಯ ತಂಡಗಳು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖೀಯಾಗಲಿವೆ. 50 ಓವರ್‌ಗಳ ಈ ಏಕದಿನ ಸರಣಿಯ ಮೊದಲ ಪಂದ್ಯ ಮಾ. 15ರಂದು ನಡೆಯಲಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ ತಂಡವು ಆರಂಭಿಕ ಮೊಹಮ್ಮದ್ ಶಾಜಾದ್ ಮತ್ತು ಮೊಹಮ್ಮದ್ ನಬಿ ಅವರ ಉಪಯುಕ್ತ ಆಟದಿಂದಾಗಿ 20 ಓವರ್‌ಗಳಲ್ಲಿ 8 ವಿಕೆಟಿಗೆ 233 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಕೊನೆಯ ಹಂತದಲ್ಲಿ ಸ್ಫೋಟಕ ಆಟವಾಡಿದ ನಬಿ ಕೇವಲ 30 ಎಸೆತಗಳಲ್ಲಿ 89 ರನ್ ಸಿಡಿಸಿದರು. 6 ಬೌಂಡರಿ ಮತ್ತು 9 ಸಿಕ್ಸರ್ ಸಿಡಿಸಿದ ಅವರು ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ರನೌಟಾದರು. ಇದರಿಂದಾಗಿ ಅಘಾ^ನಿಸ್ಥಾನ ಉತ್ತಮ ಮೊತ್ತ ಗಳಿಸುವಂತಾಯಿತು.
ಗೆಲ್ಲಲು ಕಠಿನ ಗುರಿ ಪಡೆದ ಅಯರ್‌ಲ್ಯಾಂಡ್ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಪಾಲ್ ಸ್ಟರ್ಲಿಂಗ್ ಮತ್ತು ಸ್ಟುವರ್ಟ್ ಥಾಮ್ಸನ್ ಮೊದಲ ವಿಕೆಟಿಗೆ 4.2 ಓವರ್‌ಗಳಲ್ಲಿ 65 ರನ್ ಪೇರಿಸಿದ್ದರು. ಆದರೆ ಈ ಜೋಡಿ ಮುರಿದ ಬಳಿಕ ತಂಡ ಕುಸಿಯತೊಡಗಿತು. ಅಂತಿಮವಾಗಿ 19.2 ಓವರ್‌ಗಳಲ್ಲಿ 205 ರನ್ನಿಗೆ ಸರ್ವಪತನಗೊಂಡಿತು.ಸ್ಫೋಟಕ ಆಟವಾಡಿದ ಮೊಹಮ್ಮದ್ ನಬಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಸರಣಿಯುದ್ದಕ್ಕೂ ಉತ್ತಮ ನಿರ್ವಹಣೆ ನೀಡಿದ ರಶೀದ್ ಖಾನ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.
ಸಂಕ್ಷಿಪ್ತ ಸ್ಕೋರು
ಅಫ್ಘಾನಿಸ್ಥಾನ 8 ವಿಕೆಟಿಗೆ 233 (ಮೊಹಮ್ಮದ್ ಶಾಜಾದ್ 72, ಉಸ್ಮಾನ್ ಘಾನಿ 23, ಮೊಹಮ್ಮದ್ ನಬಿ 89, ಕೆವಿನ್ ಓ’ಬ್ರಿàನ್ 45ಕ್ಕೆ 4, ಜೇಕಬ್ ಮುಲ್ಡರ್ 32ಕ್ಕೆ 2); ಅಯರ್‌ಲ್ಯಾಂಡ್ 19.2 ಓವರ್‌ಗಳಲ್ಲಿ 205 ಆಲೌಟ್ (ಪಾಲ್ ಸ್ಟರ್ಲಿಂಗ್ 49, ಸ್ಟುವರ್ಟ್ ಥಾಮ್ಸನ್ 43, ಗ್ಯಾರಿ ವಿಲ್ಸನ್ 59, ಆಮಿರ್ ಹಂಝ 39ಕ್ಕೆ 2, ಕರೀಂ ಜನಾತ್ 34ಕ್ಕೆ 2, ರಶೀದ್ ಖಾನ್ 28ಕ್ಕೆ 3).