Advertisement

Naatu Naatu ದಾಟಿಯಲ್ಲಿ ವೈರಲ್ ಆಗುತ್ತಿದೆ ಬಿಜೆಪಿಯ ಮೋದಿ ಮೋದಿ ಹಾಡು

04:57 PM Apr 11, 2023 | Team Udayavani |

ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ಜನಪ್ರೀಯ ಹಾಡು ನಾಟು ನಾಟು ಹಾಡಿನ ದಾಟಿಯಲ್ಲಿ ಮೋದಿ ಮೋದಿ ಎನ್ನುವ ಬಿಜೆಪಿ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Advertisement

ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಹಾಡನ್ನು ಚುನಾವಣಾ ಪ್ರಚಾರಕ್ಕಾಗಿ ಸಂಯೋಜಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಮಂಗಳವಾರ ತೆಲುಗು ಚಲನಚಿತ್ರ ಆರ್.ಆರ್.ಆರ್ ನಿಂದ ಆಸ್ಕರ್ ವಿಜೇತ ನಾಟು ನಾಟು ಹಾಡಿನ ರೀಮಿಕ್ಸ್ ಅನ್ನು ಬಿಡುಗಡೆ ಮಾಡಿದೆ.

ಚುನಾವಣಾ ಪ್ರಚಾರದ ಹಾಡಿನಲ್ಲಿ, ಮೂಲ ನಾಟು ನಾಟು ಸಾಹಿತ್ಯವನ್ನು ಮೋದಿ ಮೋದಿ ಎಂದು ಬದಲಾಯಿಸಲಾಗಿದೆ, ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಬಗೆಗೆ ಈ ಹಾಡಿನಲ್ಲಿ ಹೇಳಲಾಗಿದೆ. ಅಲ್ಲದೆ ಈ ವಿಡಿಯೊದಲ್ಲಿ ಜನರು ಪ್ರಸಿದ್ಧ ನಾಟು ನಾಟು ಹಾಡಿಗೆ ಹೆಜ್ಜೆಯನ್ನೂ ಅನುಕರಣೆ ಮಾಡುತ್ತಿರುವುದು ಕಂಡುಬಂದಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅನೇಕ ಯೋಜನೆಗಳು ಮಾಡಿದೆ . ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಮೆಟ್ರೋ ಮಾರ್ಗಗಳು ಮತ್ತು ಇತರ ಕಲ್ಯಾಣ ಯೋಜನೆಗಳಂತಹ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

ರಾಜಕೀಯ ಪಕ್ಷವೊಂದು ಆಸ್ಕರ್ ಪ್ರಶಸ್ತಿ ವಿಜೇತ ಹಾಡನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ಇದೇ ಮೊದಲಲ್ಲ. 2009 ರಲ್ಲಿ, ಸ್ಲಮ್ ಡಾಗ್ ಮಿಲಿಯನೇರ್‌ನ ‘ಜೈ ಹೋ’ ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದಾಗ, ಕಾಂಗ್ರೆಸ್ ಪಕ್ಷವೂ ಸಹ ಈ ಹಾಡನ್ನು ‘ಜೈ ಹೋ ಕಾಂಗ್ರೆಸ್’ ಎಂದು ಸಂಯೋಜನೆ ಮಾಡಿತ್ತು.

Advertisement

ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ 224 ಕ್ಷೇತ್ರಗಳಿಗೂ ಒಂದೇ ಬಾರಿ ಮತದಾನ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ದಳ ನಡುವೆ ಚುನಾವಣಾ ಕದನ ನಡೆಯಲಿದೆ.

ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಅವರು ವಿಡಿಯೋವನ್ನು ಟ್ವಿಟರ್‌ ನಲ್ಲಿ ಶೇರ್‌ ಮಾಡಿದ್ದಾರೆ. “ಪ್ರಧಾನಮಂತ್ರಿ ಶ್ರೀ @narendramodi ನೇತೃತ್ವದ ನಮ್ಮ ಡಬಲ್ ಇಂಜಿನ್ @BJP4Karnataka ಸರ್ಕಾರದ ಪ್ರಯತ್ನಗಳು ಕರ್ನಾಟಕದಲ್ಲಿ ಅಭಿವೃದ್ಧಿ ಉತ್ಸವವನ್ನು ಅದ್ಭುತವಾದ ಹಾಡಿನ ಮೂಲಕ ಜನರಿಗೆ ತಲುಪಿಸಲು ಶ್ರಮಿಸುತ್ತಿವೆ @BJYM ಶ್ಲಾಘನೀಯ.” ಎಂದು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next