Advertisement

ನ ಹಿ ಜ್ಞಾನೇನಸದೃಶಂ ತೆರೆಗೆ ಸಿದ್ಧ

02:23 PM Nov 02, 2022 | Team Udayavani |

ಸಿನಿಮಾ, ನಿರ್ದೇಶನ ಅನ್ನುವುದು ಕೆಲವರ ಪಾಲಿಗೆ ವೃತ್ತಿ ಬದುಕಾದರೆ, ಕೆಲವರ ಪಾಲಿನ ಆಸೆ. ಇನ್ನು ಕೆಲವರ ಪಾಲಿಗೆ ಅದೊಂದು ದೊಡ್ಡ ಕನಸು. ಆ ಕನಸನ್ನು ನನಸು ಮಾಡುವಲ್ಲಿ ತಮ್ಮೆಲ್ಲ ಜೀವನ, ವೃತ್ತಿಜೀವನವನ್ನು ಮೀಸಲಿಟ್ಟು, ಸಹನೆಯಿಂದ ತಾಳಿ ಇಂದು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವವರು ಯುವ ನಿರ್ದೇಶಕ ರಾಮ್‌. ಹೊಸಬರೇ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ “ನಹಿ ಜ್ಞಾನೇನ ಸದೃಶಂ’. ಸದ್ಯ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

ಕಿರು ಚಿತ್ರ ನಿರ್ಮಿಸಿದ್ದ ನಿರ್ದೇಶಕರು ಅದನ್ನೇ ದೊಡ್ಡದಾಗಿ ಮಾಡಿ ಸಂಪೂರ್ಣ ಚಿತ್ರವನ್ನಾಗಿಸುವ ಛಲ ಹೊಂದಿದ್ದರು. “ಕಿರು ಚಿತ್ರ ಆಗದಿದ್ದಾಗ ಸಂಪೂರ್ಣ ಪ್ರಮಾಣದ ಚಿತ್ರ ಮಾಡಲು ಮುಂದಾದೆ. ನಮ್ಮದೇ “ಫ್ರೆಂಡ್ಸ್‌ ಫ‌ಂಡೆಡ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಚಿತ್ರವನ್ನು ತಯಾರಿಸಲು ನಿರ್ಧರಿಸಿದೆ. ನನ್ನ ಸ್ನೇಹಿತರು ನನ್ನ ಕನಸಿಗೆ ಆಸರೆಯಾದರು. ಚಿತ್ರರಂಗಕ್ಕೆ ನಾನು ಹೊಸಬ ಮತ್ತೆ ಚಿತ್ರದಲ್ಲಿ ತಾಂತ್ರಿಕವಾಗಿ ಸಾಕಷ್ಟು ಅಂಶಗಳಿರುತ್ತವೆ. ನನಗೆ ಕಮರ್ಷಿಯಲ್‌ ಚಿತ್ರದ ಎಳೆ ತಿಳಿದಿಲ್ಲ. ತಾಂತ್ರಿಕವಾಗಿ ಅಷ್ಟು ದೊಡ್ಡ ಮಟ್ಟಕ್ಕೆ ಚಿತ್ರ ಆಗದಿದ್ದರೂ, ಸಿನಿಮಾ ಕಂಟೆಂಟ್‌ ಜನರಿಗೆ ಇಷ್ಟವಾಗಬೇಕು ಎನ್ನುವುದು ನನ್ನ ಆಲೋಚನೆಯಾಗಿತ್ತು. ಪ್ರೇಕ್ಷಕರಿಗೆ ಭಿನ್ನವಾಗಿ ಒಂದು ಉತ್ತಮ ಚಿತ್ರ ಕೊಡುವ ಆಸೆಯಿತ್ತು. ಹಾಗಾಗಿ ಮಕ್ಕಳ ಈ ಚಿತ್ರವನ್ನು ಮಾಡಿದೆ’ ಎನ್ನುತ್ತಾರೆ ರಾಮ್‌.

ಚಿತ್ರಕ್ಕೆ ಭಗವದ್ಗೀತೆಯ ಒಂದು ಸಾಲನ್ನೇ ಶೀರ್ಷಿಕೆಯಾಗಿರಿಸಿರುವ ನಿರ್ದೇಶಕರು ಹೇಳುವುದೆಂದರೆ, “ಚಿತ್ರಕ್ಕೆ ಸಾಕಷ್ಟು ಟೈಟಲ್‌ಗ‌ಳನ್ನು ಯೋಚಿಸಿದೆ. ಭಿನ್ನವಾಗಿರಬೇಕು ಎಂದು ಏನೇನೊ ಹೆಸರಿಟ್ಟೆ. ಆದರೆ, ಯಾವುದು ಸೂಕ್ತ ಎನಿಸಿರಲಿಲ್ಲ. ಒಂದು ದಿನ ಬಳ್ಳಾರಿಯ ನಾನು ಕಲಿತ ಇಂಜಿನಿಯರಿಂಗ್‌ ಕಾಲೇಜ್‌ಗೆ ಹೋಗಿದ್ದೆ. ಅಲ್ಲಿ “ನಹಿ ಜ್ಞಾನೇನ ಸದೃಶಂ’ ಎಂಬ ಬೋರ್ಡ್‌ ಇತ್ತು. ಆಗ ಜ್ಞಾನದ ಕುರಿತಾಗಿಯೇ ಮಾಡುತ್ತಿರುವ ಚಿತ್ರ ನಮ್ಮದು, ಹಾಗಾಗಿ ಇದೇ ಸೂಕ್ತವಾದ ಟೈಟಲ್‌ ಎಂದು ಅನಿಸಿತು. ಮಕ್ಕಳಿಗೆ ವಿದ್ಯಾಭ್ಯಾಸದ ಕುರಿತು ನಿಜವಾಗಿ ಆಸಕ್ತಿ ಇರುವುದಿಲ್ಲ. ಒತ್ತಡ, ಕಾಟಾಚಾರಕ್ಕೆ ಓದುತ್ತಾರೆ. ಆದರೆ ಈ ಚಿತ್ರ ನೋಡಿದ ನಂತರ ಆಸಕ್ತಿಯಿಂದ, ಖುಷಿಯಾಗಿ ಓದುತ್ತಾರೆ ಎನ್ನುವುದು ನನ್ನ ಭರವಸೆ. ಅದಕ್ಕಾಗಿಯೇ ಶಿಕ್ಷಣ ಜೊತೆಗೆ ಮನರಂಜನೆ ಎಂಬ ಟ್ಯಾಗ್‌ ಲೈನ್‌ ಕೂಡಾ ನೀಡಿದ್ದೇವೆ. ಇದೇ ಚಿತ್ರದ ವಿಶೇಷತೆ’ ಎಂಬುದು ನಿರ್ದೇಶಕರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next