ಪುಣೆ: ನಗರದ ಔಷಧ ಮಳಿಗೆಗಳಲ್ಲಿ ಎನ್ 95 ಮಾಸ್ಕ್ ಗಳ ಮಾರಾಟವನ್ನು ಕಡಿಮೆ ಮಾಡಿವೆ ಎಂದು ಆರೋಪಿಸಲಾಗಿದೆ. ಅವುಗಳ ಮಾರಾಟದಿಂದ ಹೆಚ್ಚಿನ ಲಾಭವೇನೂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಇದರ ಜತೆಗೆ ಎನ್ 95 ಮಾಸ್ಕ್ ಗಳಿಗೆ ಭಾರೀ ಬೇಡಿಕೆ ಇರುವುದರಿಂದಲೂ ಈ ಬೆಳವಣಿಗೆ ಉಂಟಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.
ಕೆಲವೊಂದು ಮೆಡಿಕಲ್ ಶಾಪ್ ಗಳಲ್ಲಿ ಎನ್ 95 ಮಾಸ್ಕ್ ಗಳ ಬದಲಾಗಿ ಪುನರ್ ಬಳಕೆಯ ಮಾಸ್ಕ್ ಗಳ ಮಾರಾಟಕ್ಕೆ ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ.
ಇದೇ ವೇಳೆ, ಭಾರತೀಯ ವೈದ್ಯಕೀಯ ಉಪಕರಣ ಉದ್ದಿಮೆಗಳ ಸಂಘಟನೆ (ಎಐಎಂಇಡಿ) ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿ, ಮಾಸ್ಕ್ ಗಳ ಮಾರಾಟದ ದರ ಮೇಲೆ ನಿಯಂತ್ರಣ ಹೇರುವಂತೆ ಮನವಿ ಮಾಡಿದೆ.
Related Articles
ಇದನ್ನೂ ಓದಿ:ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ಕೋವಿಡ್ ಪಾಸಿಟಿವ್
ಮಾರಾಟಕ್ಕೆ ಸಂಬಂಧಿಸಿದಂತೆ ಕೊರತೆ ಇದ್ದಲ್ಲಿ ಇಂಥ ಕ್ರಮ ಕೈಗೊಳ್ಳಬಹುದು ಎಂದು ಅದು ಮನವಿಯಲ್ಲಿ ಉಲ್ಲೇಖೀಸಿದೆ.