Advertisement

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧಾರ : ಎನ್.ಎಸ್.ವಿನಯ್

07:12 PM Mar 12, 2022 | Team Udayavani |

ಪಿರಿಯಾಪಟ್ಟಣ : ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಗಲಿರುಳು ಪಕ್ಷ ಸಂಘಟನೆ ಮಾಡಿದ ನನಗೆ ಬಿಜೆಪಿ ಪಕ್ಷವು ಟಿಕೆಟ್ ನೀಡದೆ ವಂಚನೆ ಮಾಡಿ ಸೋಲುವ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿರುವ ಹಿನ್ನೆಲೆಯಲ್ಲಿ ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಎನ್.ಎಸ್.ವಿನಯ್ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರು.

ಕಳೆದ ಎರಡು ವರ್ಷಗಳಿಂದ ಮೈಸೂರು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ಮಾಡಿ 48.884 ಪದವಿದರರ ಮತದಾರರನ್ನು ನೊಂದಣಿ ಮಾಡಿಸಿರುವುದಲ್ಲದೆ, ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದೇನೆ. ಅಲ್ಲದೆ 1 ಲಕ್ಷ ವಿಮೆಯನ್ನು 28,000 ಮಂದಿಗೆ ನೀಡಿದ್ದೇನೆ. ದಕ್ಷಿಣ ಪದವಿದರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗುವ ಬಯಕೆ ಹೊಂದಿದ್ದೆ ಈ ವಿಷಯ ಪಕ್ಷದ ವರಿಷ್ಠರಿಗೂ ತಿಳಿದಿತ್ತು ಆದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನನ್ನನ್ನು ಕಡೆಗಣಿಸಿ ಕಳೆದ ಬಾರಿ ಸೋಲು ಅನುಭವಿಸಿರುವ ಮೈ.ವಿ.ರವಿಶಂಕರ್ ರವರಿಗೆ ಮತ್ತೆ ಟಿಕೆಟ್ ನೀಡಿರುವುದರಿಂದ ನನಗೆ ಅನ್ಯಾಯವಾಗಿದೆ ಆದ್ದರಿಂದ ನಾನು ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ನಾನು ಈ ಹಿಂದೆ ಹಲವು ವರ್ಷಗಳಿಂದ ಸಚಿವ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ.

ಇದನ್ನೂ ಓದಿ : ಮಾದಪ್ಪನ ಹುಂಡಿಯಲ್ಲಿ ದಾಖಲೆಯ ನಗದು, 28 ದಿನಗಳಲ್ಲಿ 2.83 ಕೋಟಿ ನಗದು ಸಂಗ್ರಹ

4 ಜಿಲ್ಲೆಗಳಲ್ಲಿ ನನ್ನ ಈ ಕಾರ್ಯ ಚಟುವಟಿಕೆಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೂ ಕೂಡ ತಂದಿದ್ದು ಇವರುಗಳು ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಆದರೆ ವಿಧಾನಪರಿಷತ್ ದಕ್ಷಿಣ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನನಗೆ ಟಿಕೆಟ್ ನೀಡದೇ ಕಳೆದ ಬಾರಿ ಸೋಲು ಅನುಭವಿಸಿದ ಮತ್ತು ಪದವಿದರರ ಸಂಪರ್ಕವೇ ಇಲ್ಲದ ಮೈ.ವಿ. ರವಿಶಂಕರ್ ಅವರಿಗೆ ಬಿಜೆಪಿ ಪಕ್ಷವು ಟಿಕೆಟ್ ನೀಡಿದ್ದು ನನ್ನಂತ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಮತ್ತು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ನನಗೆ 4 ಜಿಲ್ಲೆಯಲ್ಲಿ ಮತದಾರಿದ್ದಾರೆ ಇವರಗಳ ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಮುಖಂಡರಾದ ಸೋಮು,ಮಂಜಣ್ಣ, ಕೆ. ಪಿ. ಪವನ್ ಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next