Advertisement

Politics: ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ: ಎನ್ ರವಿಕುಮಾರ್ ವಾಗ್ದಾಳಿ

01:12 PM May 22, 2024 | Team Udayavani |

ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿಗಳ ಅಮಲಿನಲ್ಲಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡುತ್ತಿಲ್ಲ. ಗ್ಯಾರಂಟಿ ಬಿಟ್ಟು ರಾಜ್ಯದಲ್ಲಿ ಏನೂ ಇಲ್ಲ ಎಂದು ವಿಧಾನ ಪರಿಷತ್  ಮುಖ್ಯ ಸಚೇತಕ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ದಾಹಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ ತಂದರು.ರಾಜ್ಯದಲ್ಲಿ ನೀರಾವರಿ, ಕೈಗಾರಿಕೆ, ಕಂದಾಯ, ಶಿಕ್ಷಣ ಹಳ್ಳಹತ್ತಿ ಹೋಗಿವೆ. ಪೋಷಕರೂ ಸಹ ಆತಂಕದಲ್ಲಿದ್ದಾರೆ.ಸರ್ಕಾರಿ ಕೆಲಸ ಶಿಕ್ಷಕರಿಗೆ ಕೊಡಬೇಡಿ. ಶಿಕ್ಷಣದ ಕೆಲಸ ಮಾತ್ರ ಶಿಕ್ಷಕರಿಗೆ ಕೊಡಿ.ರಾಜ್ಯದ ಯುವ ನಿಧಿ ಒಬ್ಬರಿಗೂ ಕೊಟ್ಟಿಲ್ಲ. 5, 8, 9, ಪಬ್ಲಿಕ್ ಪರೀಕ್ಷೆ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಮುನ್ನೋಟವೇ ಇಲ್ಲ. ಶಿಕ್ಷಣ ಸಚಿವರು ಸಿನಿಮಾ‌ಲೋಕದಲ್ಲಿ ಹೀರೋ ಆಗಿದ್ದವರು ಇಲ್ಲಿ ಬಂದು ಜೀರೋ ಆಗಿದ್ದಾರೆ ಸಿನಿಮಾ ಹೀರೋ ಇಲ್ಲಿ ಜೀರೋ ಆದರಲ್ಲ ಯಾಕೆ ? ಎಂದು ಸಿಎಂ ಹೇಳಲಿ.ಶಿಕ್ಷಣ ಸಚಿವರಿಗೆ ಶಿಕ್ಷಣದ‌ ಗಂಧ ಗಾಳಿಯು ಗೊತ್ತಿಲ್ಲ ಅವರನ್ನು ಶಿಕ್ಷಣ ಕ್ಷೇತ್ರದಿಂದ ಮುಕ್ತಿ ಮಾಡಲಿ ಎಂದರು.

ಸರ್ಕಾರ ಮಕ್ಕಳ ಶಿಕ್ಷಣದ ಜೊತೆ ಆಟ ಆಡುತ್ತಿದೆ.ವಿವಿಗಳು ಮುಚ್ಚುವ ಪರಿಸ್ಥಿತಿಯಲ್ಲಿ ಇವೆ. 45 ಸಾವಿರ ತರಗತಿಗಳು ಶಿಥಿಲಾವಸ್ಥೆಯಲ್ಲಿವೆ. ಕನ್ನಡ ಮಾತನಾಡಲು ಬರದ ಶಿಕ್ಷಣ ಸಚಿವರ ಬಗ್ಗೆ ಸಿಎಂ ಕ್ರಮ ಕೈಗೊಳ್ಳಬೇಕು ಎಂದರು.

ಪೋನ್ ಟ್ಯಾಪಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು, ಟ್ಯಾಪಿಂಗ್ ವಿಚಾರ ಸಿಬಿಐಗೆ ಕೊಡಲಿ. ಚೀನಾ ಯಂತ್ರ ಬಳಸಿ ಪೋನ್ ಟ್ಯಾಪಿಂಗ್ ಮಾಡುವ ವಿಚಾರದ ಬಗ್ಗೆ ಬಿಜೆಪಿ ದೂರು ಕೊಡುವ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಬಿಜೆಪಿಗೆ ಎಕನಾಮಿಕ್ಸ್ ಗೊತ್ತಿಲ್ಲ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿಎಂ ಅವರು ಭದ್ರತಾ ವೆಚ್ಚಕ್ಕೆ ಶೇ.103 ರಷ್ಟು ವೆಚ್ಚ ಮಾಡಿದ್ದಾರೆ. ನಾವು ಎಕನಾಮಿಕ್ಸ್ ತಿಳಿದಿದ್ದೇವೆ, ಸಮಾಜವೂ ಎಕನಾಮಿಕ್ಸ್ ತಿಳಿದಿದೆ ಎಂದರು.

Advertisement

ಜೂ. 03 ರಂದು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಈಶಾನ್ಯ ಭಾಗದಲ್ಲಿ 1.60 ಲಕ್ಷ ಮತದಾರರು ಇರಬಹುದು.ನಮ್ಮಲ್ಲಿ ಅನೇಕ ಆಕಾಂಕ್ಷಿಗಳಿದ್ದರು.  ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ ಪಾಟೀಲ್ ಅಭ್ಯರ್ಥಿಯಾಗಿದ್ದಾರೆ.  ನಮ್ಮ ಬಿಜೆಪಿ ಹಾಗೂ ಜೆಡಿಎಸ್ ನೆಟವರ್ಕ್ ಚೆನ್ನಾಗಿದೆ. ನಾವು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುತ್ತೇವೆ.  ಪದವೀಧರ, ಶಿಕ್ಷಕರ‌ ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆ ಇವೆ ಎಂದರು.

ಈ ಬಾರಿ SSLC ಫಲಿತಾಂಶ ಶೇ. 53 ಇತ್ತು. ರಾಜ್ಯ ಸರ್ಕಾರ 20 % ಗ್ರೇಸ್ ಅಂಕ ಕೊಟ್ಟಿದೆ ಗ್ರೇಸ್ ಮಾರ್ಕ್ಸ್ ನಿಂದ ಶಿಕ್ಷಣ ಸುಧಾರಣೆ ಅಸಾಧ್ಯ. ಕಕ ಭಾಗದ ಫಲಿತಾಂಶ ಶೇ.53 ರಷ್ಟು ಬಂದಿದೆ ಶಿಕ್ಷಣ ಸಚಿವರು ಈ ಬಗ್ಗೆ ಸಭೆ ಕರೆದು ಮಾತನಾಡಿದ್ದಾರಾ ? ಗ್ರೇಸ್ ಅಂಕ ಅತಿ ಹೆಚ್ಚು ಕೊಡಲಾಗಿದೆ. ಪ್ರೌಢ ಶಾಲೆ ಶಿಕ್ಷಕರು ಬರಿ ಪರೀಕ್ಷೆ ನಡೆಸಲಿದ್ದಾರೆ. ಪ್ರೌಢ ಶಾಲಾ ಶಿಕ್ಷಕರಿಗೆ ರಜೆ‌ ಸಿಗುತ್ತಿಲ್ಲ. ಶಿಕ್ಷಕರು ಬಿಸಿಯೂಟ, ಸರ್ಕಾರದ ಸರ್ವೆ, ಚುನಾವಣಾ ಕೆಲಸ ಮಾಡಬೇಕು.  ಮಕ್ಕಳ ಕಲಿಕೆಗೆ ಶಿಕ್ಷಕರನ್ನು ಬಿಡುತ್ತಿಲ್ಲ. ಸರ್ಕಾರಿ ಶಾಲೆ‌ ಶಿಕ್ಷಕರಿಗೆ ಸಾಕಷ್ಟು ಕೆಲಸ ಕೊಡಲಾಗುತ್ತಿದೆ  ಎಂದರು.

ಕಲ್ಯಾಣ ಭಾಗದಲ್ಲಿ ಶಿಕ್ಷಕರ ಕೊರತೆ 17796 ರಷ್ಟಿದೆ. ಈಗಾಗಲೇ 6 ಸಾವಿರ ಶಿಕ್ಷಕರು ವರ್ಗಾವಣೆ ತೆಗೆದುಕೊಂಡಿದ್ದಾರೆ. ಇದಕ್ಕೆ ಮಧು ಬಂಗಾರಪ್ಪ ಕಾರಣ.  ಶಿಕ್ಷಕರ ನೇಮಕ ತಕ್ಷಣ ಆಗಬೇಕು.  ದೇವದುರ್ಗ ತಾಲೂಕಿನಲ್ಲಿ ಒಬ್ಬ ಶಿಕ್ಷಕ ಇಲ್ಲದ ನೂರು ಶಾಲೆ ಇವೆ.  ಈ ಎಲ್ಲ ಸಮಸ್ಯೆಗಳ ಕುರಿತು ಪರಿಷತ್ ಹಾಗೂ ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ ಗುಳಗಣ್ಣನವರ್, ಎಂಎಲ್ಸಿ  ಹೇಮಲತಾ ನಾಯಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಡಾ. ಬಸವರಾಜ, ಜಿ. ಶ್ರೀಧರ್ , ಮಹಾಂತೇಶ ಮೈನಳ್ಳಿ ಸೋಮನಗೌಡ್ರು ಉಪಸ್ಥಿತಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next