ಕೋಟೇಶ್ವರ: ಧಾರ್ಮಿಕ, ಸಾಮಾಜಿಕ ಕಾರ್ಯಗಳೊಂದಿಗೆ ಸ್ನೇಹ ಜೀವಿಯಾಗಿ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸಗಳಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್ ರಾಘವೇಂದ್ರ ರಾವ್ ನೇರಂಬಳ್ಳಿ ಅವರನ್ನು “ಸಮಾಜ ಸೇವಾ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದರಿಂದ ಕೋಟೇಶ್ವರದ ಹಿರಿಮೆಗೆ ಮತ್ತೂಂದು ಗರಿ ಸೇರಿದಂತಾಗಿದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲ ಭತೀರ್ಥ ಶ್ರೀಪಾದರು ನುಡಿದರು.
ಕೋಟೇಶ್ವರದ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ರವಿವಾರ ನಡೆದ ಎನ್. ರಾಘವೇಂದ್ರ ರಾವ್ ನೇರಂಬಳ್ಳಿ ಅವರಿಗೆ ಸಮಾಜ ಸೇವಾ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು. ಸಚಿವ ಪ್ರಮೋದ್ ಮಧ್ವರಾಜ್ ಶುಭಾಶಂಸನೆಗೈದು, ರಾಘವೇಂದ್ರ ರಾವ್ ಅವರ ಸೇವೆಯ ಇತರರಿಗೆ ಮಾದರಿ ಎಂದರು.
ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಆನೆಗುಡ್ಡೆ ಶ್ರೀ ವಿನಾಯಕ ದೇವಾಸ್ಥನದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯ ನಾರಾಯಣ ಉಪಾಧ್ಯಾಯ ಅವರು ರಾಘವೇಂದ್ರ ರಾವ್ ಅವರ ಕ್ರೀಯಾಶೀಲತೆ ಹಾಗೂ ಕಾರ್ಯ ತತ್ಪರತೆಯನ್ನು ಶ್ಲಾಸಿದರು. ಉದ್ಯಮಿ ಕದಂ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ದಿನೇಶ್ ನೇರಂಬಳ್ಳಿ ಅವರು ಸುಶ್ರಾವ್ಯ ಗಾಯನದ ಮೂಲಕ ರಾಘವೇಂದ್ರ ರಾವ್ ಅವರ ಪರಿಚಯ ಮಾಡಿ ಶುಭ ಹಾರೈಸಿದರು. ಸಮ್ಮಾನಿತ ಎನ್. ರಾಘವೇಂದ್ರ ರಾವ್ ಅವರು ಮಾತನಾಡಿ, ಹುಟ್ಟಿ ಬೆಳೆದ ಊರ ಸಮಸ್ತ ನಾಗರಿಕರ ಭಾವನೆಗೆ ಚಿರಋಣಿಯಾಗಿದ್ದು ಈ ಭಾಗದ ಬಡ ಜನರ ಸೇವೆಯಲ್ಲಿ ಸದಾ ನಿರತನಾಗಿರುವೆ ಎಂದರು.
ಸ್ವಾಗತ ಸಮಿತಿ ಸಂಚಾಲಕ ಕೃಷ್ಣ ದೇವ ಕಾರಂತ ಸ್ವಾಗತಿಸಿದರು. ಅಧ್ಯಕ್ಷ ಬಿ. ಶೇಷಗಿರಿ ಗೋಟ ಪ್ರಸ್ತಾ ನೆಗೈದರು. ಮಾಲಿನಿ ಸತೀಶ್ ಹಾಗೂ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂ ಪಿಸಿದರು. ಬಿ.ಎಂ. ಗರುರಾಜ್ ರಾವ್ ವಂದಿಸಿದರು. ಹೈದರಾಬಾದ್ ಉದ್ಯಮಿ ಕೆ. ಗಣೇಶ್ ರಾವ್ ನೇರಂಬಳ್ಳಿ, ಶ್ರೀಧರ ಕಾಮತ್, ಗೋಪಾಡಿ ಶ್ರೀನಿವಾಸ ರಾವ್, ಡಾ| ಭಾಸ್ಕರ ಆಚಾರ್ಯ, ಕೃಷ್ಣಾನಂದ ಚಾತ್ರ, ಕಾರ್ತಿಕೇಯ ಮಧ್ಯಸ್ಥ, ಶಿವರಾಮ ಶೆಟ್ಟಿ ಮಲ್ಯಾಡಿ,
ದಿನೇಶ್ ಕಾಮತ್ ಕೋಟೇಶ್ವರ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ಇಸ್ಮಾಯಿಲ್ ಸಾಹೇಬ್ ನೇರಂಬಳ್ಳಿ, ಕೆ.ಎಚ್. ರಾಘವೇಂದ್ರ ರಾವ್, ದಿನಕರ ಶೆಟ್ಟಿ ಸಳ್ವಾಡಿ, ಪ್ರಶಾಂತ್ ತೋಳಾರ್, ರಾಜೇಂದ್ರ ತೋಳಾರ್, ಸಿಲ್ವೆಸ್ಟರ್ ಅಲ್ಮೇಡಾ, ಸದಾನಂದ ಚಾತ್ರ ಮೊ ಲಾದ ಗಣ್ಯರು ಶುಭ ಹಾರೈಸಿದರು.