Advertisement
ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾತ್ಕೊàಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ನಿರಾಶ್ರಿತರು, ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿ ಧಿಗಳ ಸಭೆಯಲ್ಲಿ ಮಾತನಾಡಿದರು. ಭದ್ರಾ ಮತ್ತು ತುಂಗಾ ನದಿಗಳ ಯೋಜನೆಯಿಂದ ನಿರಾಶ್ರಿತರ ಬಗ್ಗೆ ಇಂಜಿನಿಯರ್ ಹಾಗೂ ಕಂಪನಿಯವರು ಸಹಾನೂಭೂತಿ ಹೊಂದಬೇಕೇ ಹೊರತು, ಅವರನ್ನು ಹೆದರಿಸುವ ಕೆಲಸ ಮಾಡಬಾರದು ಎಂದರು.
Related Articles
Advertisement
ಕೆಲವರು ಗುಡಿಸಲು ಕಟ್ಟಿಕೊಂಡು ಕೆಲಸಕ್ಕಾಗಿ ಬೇರೆಕಡೆ ಹೋಗಿದ್ದು, ಅಂತವರ ಗುಡಿಸಲುಗಳಿಗೂ ಪರಿಹಾರ ನೀಡಬೇಕು. ಇಲ್ಲಿನ ಎಲ್ಲಾ ನಿರಾಶ್ರಿತರೂ ಬಡವರಾಗಿದ್ದು, ಅಂತಹವರ ಕಣ್ಣಲ್ಲಿ ನೀರು ಹಾಕಿಸಬೇಡಿ. ದೇವರ ನಿಮಗೆ ಒಳ್ಳೆಯದು ಮಾಡುವುದಿಲ್ಲ. ಕಾನೂನಿಗಿಂತ ಮಾನವೀಯತೆ ಮುಖ್ಯ. ಇವರಿಗೆ ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಲು 2 ಎಕರೆ ಜಾಗ ಸರ್ಕಾರದಿಂದ ಹುಡುಕಲು ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಖಾಸಗಿಯವರು ಜಾಗ ನೀಡಲು ಮುಂದೆ ಬಂದರೆ ಖರೀದಿಸಲು 30 ಲಕ್ಷ ರೂ.ಮೀಸಲಿಡಬೇಕು ಎಂದರು.
ಮನೆ ನಿರ್ಮಾಣ ಮಾಡಲು ಸಚಿವರೊಂದಿಗೆ ಚರ್ಚೆ ಮಾಡಿದ್ದು, ಪ್ರತಿ ಮನೆ ನಿರ್ಮಾಣಕ್ಕೆ 3ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ ಎಂದರು. ಈ ಭಾಗದ ರಸ್ತೆ ಸಂಪೂರ್ಣ ಹಾಳಾಗಿದ್ದು, 5ಕಿ.ಮೀ. ರಸ್ತೆ, ಕಾಲೋನಿಗಳಿಗೆ ಸಿಸಿ ರಸ್ತೆ ನಿರ್ಮಾಣ, ರಂಗ ಮಂದಿರ ಹಾಗೂ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುವುದು. ಇಲ್ಲಿನ ಕೆರೆ ಸಂಪೂರ್ಣ ಹಾಳಾಗಿದ್ದು, ರೈತರಿಗೆ ದುರಸ್ತಿ ಮಾಡಿಕೋಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ನಿರಾಶ್ರಿತರಾದ ಚಂದ್ರು, ಶೇಖರ್ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಅರಿಯಲು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಕಾಡಿನಲ್ಲಿ ನಡೆದುಕೊಂಡು ಬಂದ ಶಾಸಕರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಗುವುದು ಎಂದರು.
ಜಿಪಂ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಈ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ನಾಗರಾಜ್, ಪಟ್ಟಣ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ, ಮುಖಂಡರಾದ ಎಸ್.ಡಿ. ರಾಜೇಂದ್ರ, ಬಿ.ಎಸ್.ಸುಬ್ರಹ್ಮಣ್ಯ, ಗ್ರಾಮಸ್ಥರಾದ ವೆಂಕಟೇಶ್, ಹರೀಶ್, ಚಂದ್ರಶೇಖರ್, ಇಇ ಮಂಜಪ್ಪ, ಎಇಇ ಲೋಹಿತಾಶ್ವ, ಇಂಜಿಯರ್ ಗಳಾದ ಅಕ್ಷಯ್,ನಿತ್ಯಾ, ತಾಲೂಕು ಪಂಚಾಯತ್ ಇಒ ನಯನ, ವಲಯ ಅರಣ್ಯಾ ಧಿಕಾರಿ ರಂಗನಾಥ್, ಆರ್‌ಐ ವಿರೂಪಾಕ್ಷ ಸೇರಿದಂತೆ ತಾಲೂಕಿನ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.