Advertisement

N.R.Pura; ಸೊಂಟಕ್ಕೆ ವೈರ್ ಕಟ್ಟಿಕೊಂಡು ಈಜಿ ಕೆಲಸ ಮಾಡಿದ ಲೈನ್ ಮ್ಯಾನ್; ವಿಡಿಯೋ ವೈರಲ್

03:47 PM Jul 26, 2024 | Team Udayavani |

ಚಿಕ್ಕಮಗಳೂರು: ಮಳೆಗಾಲದಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಅದು ಲೈನ್ ಮ್ಯಾನ್ ಗಳದ್ದು. ಕೆಲ ಕಾಲ ಕರೆಂಟ್ ಇಲ್ಲದಿದ್ದರೆ ಜನರು ಲೈನ್ ಮ್ಯಾನ್ ಗಳಿಗೆ ಜನರು ಹಿಡಿಶಾಪ ಹಾಕುತ್ತಾರೆ. ಆದರೆ ಲೈನ್ ಮ್ಯಾನ್ ಗಳು ಜನರ ಕೆಲಸ ಮಾಡಲು ಯಾವುದೇ ಹಂತಕ್ಕೂ ತಲುಪುತ್ತಾರೆ.

Advertisement

ಅಪಾಯ ಮಟ್ಟ ಮೀರಿ ಧುಮ್ಮಿಕ್ಕಿ ಹರಿಯುವ ಹೊಳೆಯಲ್ಲಿ ಧುಮುಕಿದ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಲೈನ್ ಎಳೆಯುವ ವಿಡಿಯೋ ವೈರಲ್ ಆಗಿದೆ. ಈ ದಡದಿಂದ ಆ ದಡಕ್ಕೆ ಸೊಂಟಕ್ಕೆ ವೈರ್ ಕಟ್ಕೊಂಡು ಈಜಿ ಆ ದಡ ಮುಟ್ಟುತ್ತಾರೆ

ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಗಳು ಶ್ರಮ ಪಡುವ ವಿಡಿಯೋ ವೈರಲ್ ಆಗಿದೆ. ಹುಯಿಗೆರೆ ಗ್ರಾಮದಲ್ಲಿ ಲೈನ್ ಮೇಲೆ ಮರ ಬಿದ್ದು 3 ದಿನದಿಂದ ಕತ್ತಲಿನಲ್ಲಿತ್ತು. ಈ ವೇಳೆ ಲೈನ್ ಮ್ಯಾನ್ ರವಿಕುಮಾರ್ ಹಳ್ಳದಲ್ಲಿ ಈಜಿ ಹೋಗಿ ವಿದ್ಯುತ್ ದುರಸ್ಥಿಗೆ ಹೋರಾಟ ನಡೆಸಿದ್ದಾರೆ.

ಲೈನ್ ಮ್ಯಾನ್ ರವಿಯವರ ಈ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next