Advertisement

ಪ್ರಮಾಣ ಪತ್ರ ವಿತರಿಸಲು ವಸೂಲಿ ಮಾಡಿದರೆ ಕ್ರಮ

12:26 PM Jan 22, 2021 | Team Udayavani |

ಕೊಳ್ಳೇಗಾಲ: ಸಾರ್ವಜನಿಕರಿಗೆ ಪ್ರಮಾಣ ಪತ್ರ ನೀಡಲು ನಿಗದಿಗಿಂತ ಹೆಚ್ಚು ಹಣ ಪಡೆದರೆ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಶಾಸಕ ಎನ್‌.ಮಹೇಶ್‌ ಎಚ್ಚರಿಕೆ ನೀಡಿದರು.

Advertisement

ನಗರಸಭೆ ಅಧ್ಯಕ್ಷೆ ಗಂಗಮ್ಮ ಅಧ್ಯಕ್ಷತೆಯಲ್ಲಿ 2 ವರ್ಷಗಳ ಬಳಿಕ ಇದೇ ಮೊಟ್ಟ ಮೊದಲ ನಗರಸ ಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ದೂರುಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ಜನನ ಮತ್ತು ಮರಣ ಪ್ರಮಾಣ ಪತ್ರ ನೀಡಲು ಸರ್ಕಾರ ನಿಗದಿಗೊಳಿಸಿರುವ ದರ ಪಡೆಯಬೇಕು. ಹೆಚ್ಚು ಹಣ ವಸೂಲಿ ಮಾಡಿದರೆ ಅಂತಹ ಸಿಬ್ಬಂದಿ ಮೇಲೆ ಕಾನೂನು ಕ್ರಮ ಅನಿವಾರ್ಯ ಎಂದರು.

ನಗರಸಭೆ ಸಿಬ್ಬಂದಿಗಳು ಸದಸ್ಯರಿಗೆ‌ ಗೌರವ ನೀಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಮರ್ಪಕ ಮಾಹಿತಿ ನೀಡುವುದಿಲ್ಲ ಎಂದು ಸದಸ್ಯರು ದೂರಿದರು. ಚುನಾಯಿತ ಸದಸ್ಯರಿಗೆ ಗೌರವ ನೀಡಬೆಕು. ಈ ಬಗ್ಗೆ ನಗರಸಭೆ ಪೌರಾಯುಕ್ತರು ಸಿಬ್ಬಂದಿಗಳ ಸಭೆಯಲ್ಲಿ ಸೂಚಿಸಬೇಕು ಎಂದು ಶಾಸಕರು ತಾಕೀತು ಮಾಡಿದರು.

ಪಟ್ಟಣದಲ್ಲಿ ಪರವಾನಗಿ ಪಡೆಯದೆ ಅನಧಿಕೃತ ಫ್ಲೆಕ್ಸ್‌ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸದಸ್ಯರು ಮನವಿಗೆ ಸ್ಪಂದಿಸಿದರು.  ಖಾಸಗಿಯವರಿಗೆ ಸೇರಿದ ಸೈಟ್‌ಗಳಲ್ಲಿ ಗಿಡಗಂಟಿಗಳು ಬೆಳೆದು ಅಶುಚಿತ್ವ ಉಂಟಾಗಿದೆ. ಈ ಬಗ್ಗೆ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು. ಇದಕ್ಕೆ ಮನ್ನಣೆ ನೀಡದಿದ್ದರೆ ಆ ನಿವೇಶನಗಳನ್ನು ನಗರಸಭೆಯ ಆಸ್ತಿ ಎಂದು ನಾಮಫ‌ಲಕ ಅಳವಡಿಸಲಾಗುವುದು ಎಂದರು.

ಇದನ್ನೂ ಓದಿ:ವಯಸ್ಸಿನ ಅವಾಂತರ ಸಂಚಾರಿ ಅವಸ್ಥಾಂತರ

Advertisement

ಹಣ ದುರುಪಯೋಗ: ಪಟ್ಟಣದಲ್ಲಿ ಶುದ್ಧ ನೀರಿನ ಘಟಕಗಳಿಂದ ಸಾಕಷ್ಟು ಹಣ ಬರುತ್ತಿದ್ದರೂ ಘಟಕ ಗಳನ್ನು ಸರಿಯಾಗಿ ನಿರ್ವ ಹಿಸುತ್ತಿಲ್ಲ. ಈ ಹಣ ದುರುಪ ಯೋಗವಾಗುತ್ತಿದೆ ಎಂಬ ಸದಸ್ಯರ ದೂರಿಗೆ ಉತ್ತರಿಸಿದ ಶಾಸಕರು, ಕೂಡ ಲೇ ಘಟಕಗಳ ನಿರ್ವಹಣೆಗೆ ಟೆಂಡರ್‌ ಕರೆಯ ಲಾಗುವುದು ಎಂದರು.ಪಟ್ಟಣದಲ್ಲಿ ಸರ್ಕಟನ್‌ ನಾಲೆ ಕುಡಿಯುವ ನೀರಿನ ಯೋ ಜನೆ, ಬಸ್‌ ನಿಲ್ದಾಣ, ರಸ್ತೆ ಕಾಮಗಾರಿಗಳ ಪ್ರಗತಿಯ ಬಗ್ಗೆ ಮತ್ತೂಂದು ಸಭೆಯಲ್ಲಿ ಪ್ರತ್ಯೇಕ ಚರ್ಚಿಸ ಲಾಗುವುದು ಎಂದು ಶಾಸಕರು ತಿಳಿಸಿದರು.

ಪ್ರಮಾಣ ವಚನ: ನಗರಸಭೆಯ ಚೊಚ್ಚಲಸಾಮಾನ್ಯಸಭೆಯಲ್ಲಿ 31 ಸದಸ್ಯರಿಗೆ ಪೌರಾ ಯುಕ್ತ ವಿಜಯ್‌ ಪ್ರಮಾಣ ವಚನ ಬೋಧಿ ಸಿದರು. ಸಭೆಯಲ್ಲಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಕವಿತಾ, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next