Advertisement

N. Chaluvaraya Swamy: ಎಲೆಚುಕ್ಕಿ,ಹಳದಿ ರೋಗ ನಿಯಂತ್ರಣಕ್ಕೆ ಶೀಘ್ರ ಕ್ರಮ: ಚಲುವರಾಯಸ್ವಾಮಿ

11:29 AM Oct 16, 2023 | Team Udayavani |

ಸುಬ್ರಹ್ಮಣ್ಯ: ಶಿವಮೊಗ್ಗ, ಮಂಗಳೂರು, ಉಡುಪಿ ಭಾಗದಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ಮತ್ತು ಹಳದಿ ರೋಗ ನಿಯಂತ್ರಣಕ್ಕೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಅವರು ಮಾತ ನಾಡಿ, ಶಿವಮೊಗ್ಗದ ಕೃಷಿ ವಿ.ವಿ.ಯ ವಿಜ್ಞಾನಿ ಡಾ| ಜಗದೀಶ್‌ ಅವರಿಗೆ ಈ ರೋ ಗದ ಬಗ್ಗೆ ಅಧ್ಯಯನ ವರದಿ ಸಲ್ಲಿಸಲು ತಿಳಿಸಲಾಗಿದೆ. ವರದಿ ಬಂದ ತತ್‌ಕ್ಷಣ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರೈತರ ಅನುಕೂಲಕ್ಕಾಗಿ ಕೃಷಿ ಭಾಗ್ಯ ಯೋಜನೆಯನ್ನು ಆರಂಭಿಸಲಾಗಿದೆ. ಹಾರ್ವೆಸ್ಟ್‌ ಹೈಟೆಕ್‌ ಹಬ್‌ ಯೋಜನೆ ಜಾರಿಗೊಳಿಸಿದ್ದು, 100 ಕೋಟಿ ರೂ. ಅನುದಾನ ನೀಡಲಾಗಿದೆ. ಇದರ ಮೂಲಕ ಕಬ್ಬು, ಭತ್ತ ಇತ್ಯಾದಿ ಬೆಳೆಯುವ ರೈತರಿಗೆ ಯಂತ್ರ ಖರೀದಿಗೆ ಅನುಕೂಲ ಮಾಡಲಾಗಿದೆ ಎಂದರು.

ಹೆಚ್ಚುವರಿ ಅನುದಾನ:

ರಾಜ್ಯದ 195 ತಾಲೂಕುಗಳ ಸಹಿತ ಹೆಚ್ಚುವರಿಯಾಗಿ ಮತ್ತೆ 21 ತಾಲೂಕು ಗಳನ್ನು ಬರ ಪೀಡಿತ ಎಂದು ಗುರುತಿಸಿದ್ದು, ಸರಕಾರ ಹೆಚ್ಚುವರಿ ಅನುದಾನ ಒದಗಿಸಲಿದೆ. ಇಲ್ಲಿನ ರೈತರಿಗೆ ರೂ.5 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲು ತೀರ್ಮಾನಿಸಲಾಗಿದೆ.

Advertisement

ದರುಶನ ಭೇಟಿ:

ಇದಕ್ಕಿಂತ ಮೊದಲು ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರುಶನ ಪಡೆದರು. ಅವರ ಪತ್ನಿ ಧನಲಕ್ಷ್ಮೀ ಜತೆಗಿದ್ದರು. ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಸಚಿವರಿಗೆ ಮಹಾಪ್ರಸಾದ ನೀಡಿದರು. ಬಳಿಕ ಸಚಿವರು ಹೊಸಳಿಗಮ್ಮನ ದರುಶನ ಮಾಡಿದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಎಸ್‌ ಸುಳ್ಳಿ ಸಚಿವರನ್ನು ಗೌರವಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next