Advertisement

Mysuru ಹಿರಿಯ ಸಾಹಿತಿ, ಖ್ಯಾತ ವಿಮರ್ಶಕ ಜಿ.ಎಚ್.ನಾಯಕ ವಿಧಿವಶ

03:34 PM May 26, 2023 | Team Udayavani |

ಮೈಸೂರು: ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

Advertisement

1935 ಸೆಪ್ಟಂಬರ್ 18 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಇವರು ಮೈಸೂರಿನಲ್ಲಿ ನೆಲೆಸಿದ್ದರು. ಜಿ.ಎಚ್. ನಾಯಕ ಅವರು ಪತ್ನಿ ಮೀರಾ, ಪುತ್ರಿ ಕೀರ್ತಿ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

ನಾಯಕ್ ಅವರ ಕೃತಿಗಳು
ಸಮಕಾಲೀನ (೧೯೭೩)
ಅನಿವಾರ್ಯ (೧೯೮೦)
ನಿರಪೇಕ್ಷೆ (೧೯೮೪)
ನಿಜದನಿ (೧೯೮೮)
ವಿನಯ ವಿಮರ್ಶೆ (೧೯೯೧)
ಸಕಾಲಿಕ (೧೯೯೫)
ಗುಣ ಗೌರವ (೨೦೦೨)
ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
ಕೃತಿ ಸಾಕ್ಷಿ (೨೦೦೬)
ಸ್ಥಿತಿ ಪ್ರಜ್ಞೆ (೨೦೦೭)
ಮತ್ತೆ ಮತ್ತೆ ಪಂಪ (೨೦೦೮)
ಸಾಹಿತ್ಯ ಸಮೀಕ್ಷೆ (೨೦೦೯)
ಉತ್ತರಾರ್ಧ (೨೦೧೧)

ಸಂಪಾದನೆ
ಕನ್ನಡ ಸಣ್ಣಕಥೆಗಳು
ಹೊಸಗನ್ನಡ ಕವಿತೆಗಳು
ಸಂವೇದನೆ (ಅಡಿಗರ ಗೌರವ ಗ್ರಂಥ)
ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
ಶತಮಾನದ ಕನ್ನಡ ಸಾಹಿತ್ಯ (ಸಂಪುಟ – ೧.೨)
ಆತ್ಮಕಥನ- ಬಾಳು

ಪ್ರಶಸ್ತಿಗಳು
ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನಿರಪೇಕ್ಷ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ.
ನಿಜದನಿ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ’ ಲಭಿಸಿವೆ.
ಪಂಪ ಪ್ರಶಸ್ತಿ

Advertisement

ಮುಖ್ಯಮಂತ್ರಿ ತೀವ್ರ ಸಂತಾಪ

ಕನ್ನಡ ಸಾಹಿತ್ಯದ ವಿಮರ್ಶೆ, ವಿಶ್ಲೇಷಣೆ ಹಾಗೂ ಬರಹಲೋಕದ ಅಪರೂಪದ ವ್ಯಕ್ತಿ. ಪ್ರಗತಿಪರ ಚಿಂತಕರು, ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಪ್ರಖರ ಚಿಂತರಕೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next