ಮೈಸೂರು: ಅಪರಾಧ ಚಟುವಟಿಕಗಳಲ್ಲಿ ಭಾಗಿಯಾಗಿರುವುದು, ಹಣದ ದುರುಪಯೋಗ ಮತ್ತು ಲೈಂಗಿಕ ದುರ್ವರ್ತನೆ ಆರೋಪದ ಮೇಲೆ ಮೈಸೂರು ಪ್ರಾಂತ್ಯದ ಬಿಷಪ್ ಕೆ.ಎ. ವಿಲಿಯಮ್ ಮೇಲೆ ಈ ಧರ್ಮಪ್ರಾಂತ್ಯದ 37 ಧರ್ಮಗುರುಗಳು ನೇರವಾಗಿ ಪೋಪ್ ಪ್ರಾನ್ಸಿಸ್ ಅವರಿಗೆ ಪತ್ರವೊಂದನ್ನು ಬರೆದು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿಕೊಂಡಿರುವುದು ಇದೀಗ ಸುದ್ದಿಯಾಗಿದೆ.
ಇಷ್ಟು ಮಾತ್ರವಲ್ಲದೇ ಬಿಷಪ್ ವಿರುದ್ಧ ಗುಂಪುಗಾರಿಕೆ, ಸ್ವಜನ ಪಕ್ಷಪಾತ ಮತ್ತು ಮದುವೆಯಾಗಿರುವ ಆರೋಪಗಳಿವೆ.
ಇಷ್ಟು ಮಾತ್ರವಲ್ಲದೇ ಬಿಷಪ್ ವಿರುದ್ಧ ಗುಂಪುಗಾರಿಕೆ, ಸ್ವಜನ ಪಕ್ಷಪಾತ ಮತ್ತು ಮದುವೆಯಾಗಿರುವ ಆರೋಪಗಳಿವೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟನೆಯೊಂದನ್ನು ಹೊರಡಿಸಿರುವ ಮೆಲ್ವಿನ್ ಫೆರ್ನಾಂಡೀಸ್ ಅವರು ಮೈಸೂರು ಬಿಷಪ್ ಮೇಲಿನ ಈ ಎಲ್ಲಾ ಆರೋಪಗಳ ಕುರಿತಾದ ವಿವರ ನೀಡಿದರು.
ಮಕ್ಕಳ ಪಿತೃತ್ವಕ್ಕೆ ಸಂಬಂಧಿಸಿದಂತೆಯೂ ಬಿಷಪ್ ಅವರ ಮೇಲೆ ಆರೋಪಗಳಿರುವುದರಿಂದ ಡಿ.ಎನ್.ಎ. ಪರೀಕ್ಷೆಯನ್ನು ಸಹ ನಡೆಸಬೇಕೆಂದು ಫೆರ್ನಾಂಡಿಸ್ ಅವರು ಆಗ್ರಹಿಸಿದರು. ಮತ್ತು ಈ ಮೂಲಕ ಬಿಷಪ್ ಅವರ ನಿರಪರಾಧಿತ್ವ ಸಾಬೀತಾಗಲಿ ಎಂದವರು ಸವಾಲು ಹಾಕಿದರು. ಇನ್ನು ಬಿಷಪ್ ಅವರ ಸೂಚನೆಯ ಮೇರೆಗೆ ಹುಡುಗಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿರುವ ವಿಚಾರದ ಕುರಿತಾಗಿಯೂ ತನಿಖೆ ನಡೆಯಬೇಕೆಂಬ ಆಗ್ರಹವನ್ನು ಇವರೆಲ್ಲಾ ಮುಂದಿಟ್ಟಿದ್ದಾರೆ.