ಮೈಸೂರು :ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು,ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಸೋಮವಾರ ಸಂಜೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.
ಮರದ ಅಂಬಾರಿ ಕಟ್ಟುವ ವೇಳೆಗೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಒಂದು ಗಂಟೆ ತಡವಾಗಿ ಪೂಜೆ ನೆರವೇರಿಸಲಾಯಿತು. ಸತತ ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಯ ನಡುವೆಯೇ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ತಾಲೀಮುಆರಂಭಿಸಲಾಯಿತು.
ಸಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಅರಮನೆ ಆವರಣದ ಮೂಲಕ ಸಾಗಿ ಬಲರಾಮ ದ್ವಾರದ ಮೂಲಕ ಹೊರಬಂದು ಆನೆಗಳು. ತಾಲೀಮು ನಡೆಸಿದವು.
ಈ ಬಾರಿಯೂ ಅಂಬಾರಿ ಹೊರುವ ಫೇವರಿಟ್ ಆಗಿರುವ ಅಭಿಮನ್ಯು ಆನೆಗೆ ಅರಣ್ಯ ಇಲಾಖೆ ಸಿಬಂದಿ ಮರದ ಅಂಬಾರಿ ಕಟ್ಟಿದರು.ಅಭಿಮನ್ಯು ಮಳೆಯ ನಡುವೆಯೂ ಮರದ ಅಂಬಾರಿ ಹೊತ್ತು ಚುರುಕಿನಿಂದ ಸಾಗಿದ.ಅಭಿಮನ್ಯು ಜತೆಗೆ ಮತ್ತೆರಡು ಆನೆಗಳಾದ ಮಹೇಂದ್ರ ಮತ್ತು ಧನಂಜಯನಿಗೆ ಮರದ ಅಂಬಾರಿ ತಾಲೀಮು ನಡೆಸಲಾಗುತ್ತಿದೆ.
ನೇತೃತ್ವ ವಹಿಸಿದ್ದ ಡಿಸಿಎಫ್ ಸೌರಭ್ ಕುಮಾರ್, ಮೊದಲ ಬಾರಿ ದಸರಾಗೆ ಬಂದಿರುವ 4 ಆನೆಗಳೂ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.ಸರತಿ ಸಾಲಿನಲ್ಲಿ ಸಾಗುವುದು, ಸೌಮ್ಯತೆ ಎಲ್ಲವೂ ಸರಿ ಇದೆ.ಅಂಬಾರಿ ಹೊರಲು ಅಭಿಮನ್ಯು ನೂರಕ್ಕೆ ನೂರು ಫಿಟ್ ಆಗಿದ್ದಾನೆ ಎಂದು ಹೇಳಿದರು.