Advertisement
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ಮುನ್ನೋಟ; ಚಿಂತನಾ ಸಮಾವೇಶದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರೊ| ಹಂಪನಾ ಕೂಡ ಭಾಗವಹಿಸಿದ್ದರು. ಅವರನ್ನು ವೇದಿಕೆ ಮೇಲೆ ಆಹ್ವಾನಿಸಿದ ಸಿದ್ದರಾಮಯ್ಯ ಹೂಗುಚ್ಛ ನೀಡಿ ಶುಭ ಕೋರಿ ತಮ್ಮ ಆಸನದ ಪಕ್ಕದಲ್ಲಿಯೇ ಕೂರಿಸಿ ಗೌರವ ತೋರಿದರು.
ಪ್ರಾಧ್ಯಾಪಕರು…
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹಂಪಸಂದ್ರದ ಹಂ.ಪ. ನಾಗರಾಜಯ್ಯ (ಹಂಪನಾ), ಅಧ್ಯಾಪಕರಾಗಿ, ಬೆಂಗಳೂರು ವಿ.ವಿ.ಯಲ್ಲಿ ಕಲಾ ವಿಭಾಗದ ಮುಖ್ಯಸ್ಥರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 1978ರಿಂದ 1986ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂಪನಾ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು 300 ಮೌಲಿಕ ಪುಸ್ತಕಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಜೈನ ಪರಂಪರೆ ಕುರಿತು ಅಪಾರ ವಿದ್ವತ್ ಹೊಂದಿರುವ ಹಂಪನಾ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆ ಪರಿಗಣಿಸಿ ಹಂಪಿಯ ಕನ್ನಡ ವಿ.ವಿ. 2006ರಲ್ಲಿ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಉದಯವಾಣಿ ಸಂದರ್ಶನ:
ನನಗಿಂದು ಸಂತೋಷಾಘಾತ…
1. ದಸರಾ ಉದ್ಘಾಟಕರಾಗಿ ಆಯ್ಕೆ ಆಗುವ ನಿರೀಕ್ಷೆ ಇತ್ತಾ?
ನನಗೆ ಅನಿರೀಕ್ಷಿತವಾಗಿ ದೊರೆತ ಅಪೂರ್ವ, ಅವಿಸ್ಮರಣೀಯ ಸಂದರ್ಭ ಇದು. ಸಾಮಾನ್ಯವಾಗಿ ವಿದ್ಯುತ್ ಆಘಾತ ಎಂದು ಕರೆಯುತ್ತಾರೆ. ಅದೇ ರೀತಿ ನನಗಿಂದು ಸಂತೋಷಾ
ಘಾತವಾಗಿದೆ.
2. ನಿಮ್ಮ ಮೈಸೂರಿನ ನಂಟು ಹೇಗಿದೆ?
ನನ್ನ ಮೈಸೂರು ನಂಟು ತುಂಬಾ ಹಳೆಯದು. ವಿದ್ಯಾರ್ಥಿ ಜೀವನ ಇÇÉೇ ಕಳೆದಿದ್ದು ಮಹಾರಾಜ ಕಾಲೇಜಿನಲ್ಲಿ ಬಿಎ ಆನರ್ಸ್ ಪದವಿ, ಮೈಸೂರು ವಿ.ವಿ.ಯಲ್ಲಿ ಎಂಎ ಪದವಿ ಪಡೆದುಕೊಂಡಿ¨ªೆ. ಯಾವ ಊರಿನಲ್ಲಿ ಬದುಕಿನ ಜ್ಞಾನ ಉಂಟಾಯಿತೋ, ಅಕ್ಷರ ಲೋಕಕ್ಕೆ ಬಾಗಿಲು ತೆರೆದು ಸರಸ್ವತಿ ನನ್ನನ್ನು ಒಳಗೆ ಕರೆದುಕೊಂಡಲೋ ಇದೀಗ ಅದೇ ಊರಿನ ದಸರೆ ಉತ್ಸವವನ್ನು ಉದ್ಘಾಟಿಸುವ ಅವಕಾಶ ಒಲಿದು ಬಂದಿದೆ.
3. ದಸರಾ ನೋಡಿದ್ದೀರಾ? ನಿಮ್ಮ ಅನುಭವ ಏನು?
ಸುಮಾರು 50 ಬಾರಿ ನೋಡಿರಬಹುದು. ಆ ಸಂಭ್ರಮವನ್ನು ಅನುಭವಿಸಿ ರೋಮಾಚನಗೊಂಡಿದ್ದೇನೆ. ಇದು ಪ್ರಜಾಪ್ರಭುತ್ವ. ನಾನು ಕರ್ನಾಟಕದ ಒಬ್ಬ ಪ್ರಜೆ. ಇಡೀ ಕರ್ನಾಟಕದ ಕನ್ನಡಿಗರ ಪರ ನಾನು ದಸರಾ ಮಹೋತ್ಸವವನ್ನು ಉದ್ಘಾಟಿಸ ಬಯಸುತ್ತೇನೆ.
4. ಇವತ್ತಿನ ಕಾಲಕ್ಕೆ ದಸರಾ ಮಹೋತ್ಸವ ಬಗ್ಗೆ ಏನು ಹೇಳಬಯಸುತ್ತೀರಾ?
ಬಹಳ ಸ್ಥಿತ್ಯಂತರದ ಕಾಲಘಟ್ಟದಲ್ಲಿ ನಾವಿದ್ದೇವೆ. ಹಬ್ಬದ ಮಹತ್ವ ಏನು? ಈ ಕಾಲಕ್ಕೆ ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕಿದೆ.