Advertisement

Mysuru Dasara ನಾಳೆ ವಿಜಯದಶಮಿ ವೈಭವ

12:20 AM Oct 23, 2023 | Team Udayavani |

“ನೋಡ ಬನ್ನಿ ಮೈಸೂರು ದಸರಾ’ ಎನ್ನುವುದು ಸದಾ ಪ್ರಸ್ತುತ. ಈ ವರ್ಷದ ಮೈಸೂರು ದಸರಾ ಉತ್ಸವದ ವಿಜಯದಶಮಿ ಮೆರವಣಿಗೆ ಮಂಗಳವಾರ, ಅ. 24ರಂದು ಮಧ್ಯಾಹ್ನ ನಡೆಯಲಿದೆ.

Advertisement

ಏನೇನು ಕಾರ್ಯಕ್ರಮಗಳು?
ಮುಹೂರ್ತ
1.46ರಿಂದ 2.08ರ ವರೆಗೆ ಸಲುವ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ

ಎಲ್ಲಿ?
ಅರಮನೆಯ ಬಲರಾಮ ದ್ವಾರ
ಒಳ ಆವರಣದಲ್ಲಿ: ಸಂಜೆ 4.40ರಿಂದ 5 ಗಂಟೆಯ ವರೆಗೆ ಸಲುವ ಮೀನ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಉದ್ಘಾಟನೆ

ಉದ್ಘಾಟಕರು: ಸಿದ್ದರಾಮಯ್ಯ, ಮುಖ್ಯಮಂತ್ರಿ,
ಉಪಸ್ಥಿತಿ- ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ, ಮುಖ್ಯ ಅತಿಥಿ- ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌

-6,000 ಪೊಲೀಸರಿಂದ ಭದ್ರತೆ ವ್ಯವಸ್ಥೆ
-ರಾತ್ರಿ 7.30ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು
-750 ಕೆ.ಜಿ.ಚಿನ್ನದ ಅಂಬಾರಿಯ ತೂಕ.
-ಅಂಬಾರಿ ಹೊರಲಿದೆ “ಅಭಿಮನ್ಯು’ ಆನೆ

Advertisement

ಹಲವು ಸ್ತಬ್ಧಚಿತ್ರಗಳು
ಸಂವಿಧಾನ ಪೀಠಿಕೆ, ಯುನೆಸ್ಕೋದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಸ್ಥಳ ಹೊಯ್ಸಳ ದೇವಸ್ಥಾನ, ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು, ಕ್ಷೀರ ಭಾಗ್ಯ ಯೋಜನೆ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಶತಮಾನೋತ್ಸವ ಸ್ತಬ್ಧ ಚಿತ್ರಗಳು.

ಈ ಬಾರಿಯ ವಿಶೇಷ
ಭಾರತೀಯ ವಾಯು ಪಡೆಯಿಂದ ಅ. 24ರಂದು ಏರ್‌ ಶೋ ನಡೆಯಲಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಂಜೆ 4 ಗಂಟೆಗೆ ಮೈನವಿರೇಳಿ ಸುವ ವೈಮಾನಿಕ ಸಾಹಸ ಪ್ರದರ್ಶನ ನಡೆಯಲಿದೆ.

ಕೊಯಮತ್ತೂರಿನಿಂದ ಐಎಎಫ್ ವಿಮಾನಗಳು ಆಗಮಿಸಿ ಕಾರ್ಯಕ್ರಮ ನೀಡಲಿವೆ. ದಸರೆಯಲ್ಲಿ ಏರ್‌ಶೋ ನಡೆಯುತ್ತಿರುವುದು ಇದೇ ಮೊದಲ ಬಾರಿ.

 

Advertisement

Udayavani is now on Telegram. Click here to join our channel and stay updated with the latest news.

Next