Advertisement
ನಿಂಗವ್ವ ಮೃತ ದುರ್ದೈವಿ, ಈರಯ್ಯ ಎಬುವವನೇ ಕೊಲೆ ಆರೋಪಿ, ಈತ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಬಳಿಕ ಹೊರ ಬಂದವ ನಿಂಗವ್ವಳನ್ನು ಎರಡನೇ ಮದುವೆಯಾದ. ಆದರೆ ಅದೇನಾಗಿತ್ತೋ ಗೊತ್ತಿಲ್ಲ ಎರಡನೇ ಪತ್ನಿಯನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಮಾಡಿದ್ದಾನೆ ಈ ವೇಳೆ ನಿಂಗವ್ವ ಅವರ ತಾಯಿ, ತಂದೆ, ಮತ್ತಿಬ್ಬರು ಹಲ್ಲೆ ನಡೆಸುವುದನ್ನು ತಡೆಯಲು ಬಂದಿದ್ದಾರೆ ಆದರೆ ಈರಯ್ಯ ಅವರ ಮೇಲೂ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ, ಪರಿಣಾಮ ನಾಲ್ವರೂ ಗಂಭೀರ ಗಾಯಗೊಂಡಿದ್ದು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
Advertisement