ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಶೀಘ್ರ ಕಾರ್ಯಾರಂಭ ಮಾಡಿ ಬೆಳೆದು ನಿಂತಿರುವ ಕಬ್ಬನ್ನು ನುರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಜಿಲ್ಲೆಯಲ್ಲಿ ಲಕ್ಷಾಂ ತರ ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದಾರೆ.
ಮೈಷುಗರ್, ಪಿಎಸ್‌ಎಸ್‌ಕೆ, ಚಾಮುಂಡೇಶ್ವರಿ, ಎನ್‌ಎಸ್‌ಎಲ್, ಐಸಿಎಲ್ ವ್ಯಾಪ್ತಿಯಲ್ಲಿ ಅಂದಾಜು 30ರಿಂದ 40 ಲಕ್ಷ ಟನ್ ಕಬ್ಬು ಕಟಾವಿಗೆ ಬಂದಿದೆ. ಮೈಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಸೇರಿದ 8 ಲಕ್ಷ ಟನ್ ಹಾಗೂ ಪಿಎಸ್ ಎಸ್‌ಕೆ ವ್ಯಾಪ್ತಿಗೆ ಸೇರಿದ 4 ಲಕ್ಷ ಟನ್ ಕಬ್ಬು ಇದೆ. ಈ ಎರಡೂ ಕಾರ್ಖಾನೆಗಳು ಪ್ರಾರಂಭವಾಗುವುದು ವಿಳಂಬವಾಗುತ್ತಿರುವು ದರಿಂದ ಈ ವ್ಯಾಪ್ತಿಯ ಕಬ್ಬನ್ನು ಜುಲೈ ಮೊದಲನೇ ವಾರ ದಿಂದ ನುರಿಸಲು ಜಿಲ್ಲಾಡಳಿತ ಕ್ರಮ ವಹಿಸಿ ರೈತರಿಗೆ ಅನು ಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ: ಮೈಷುಗರ್ ವಿಚಾರಕ್ಕೆ ಸಂಬಂಧಿಸಿದಂತೆ ಮೇ 29ರಂದು ಸಿಎಂ ಜಿಲ್ಲೆಯ ಜನಪ್ರತಿನಿ ಧಿಗಳು ಮತ್ತು ಹೋರಾಟಗಾರರ ಸಭೆ ನಡೆಸಿದರು. ಈ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಮೈಷುಗರ್ ಕಾರ್ಖಾನೆ ಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿ ಸರ್ಕಾರವೇ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು. ಸಭೆಗೆ ಬಂದಿದ್ದ ಕೆಲವರು ಓ ಆ್ಯಂಡ್ ಎಂ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅದಕ್ಕೆ ಶಾಸಕರು ಮತ್ತು ಹೋರಾಟಗಾರರಿಂದ ತೀವ್ರವಾದ ವಿರೋಧ ವ್ಯಕ್ತವಾದ್ದರಿಂದ ಸಿಎಂ ಮಧ್ಯಪ್ರವೇಶಿಸಿ ಓ ಆ್ಯಂಡ್ ಎಂಇಷ್ಟೆಲ್ಲಾ ವಿರೋಧವಿದ್ದ ಮೇಲೆ ಮುಂದೆ ಸಮಾಲೋಚನೆ ನಡೆಸಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಈವರೆ ಗೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂದು ದೂರಿದರು.
ಬಾಕಿ ಹಣ ನೀಡಿ: ಮೈಷುಗರ್, ಪಿಎಸ್‌ಎಸ್‌ಕೆ ಹಾಗೂ ಖಾಸಗಿ ಕಾರ್ಖಾನೆಗಳ ವ್ಯಾಪ್ತಿಯ ಕಬ್ಬನ್ನು ನುರಿಸಲು ಜಿಲ್ಲಾಡ ಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿಯ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಕೂಡಲೇ ನೀಡಬೇಕು. ಕೇಂದ್ರವು ನಿಗದಿಪಡಿಸಬಹುದಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ)ಯಂತೆ ಹಾಗೂ ರಾಜ್ಯ ಸರ್ಕಾರವು ನಿಗದಿಪಡಿಸಬಹುದಾದ ರಾಜ್ಯ ಸಲಹಾ ಬೆಲೆ ಯಂತೆ ರೈತರ ಕಬ್ಬಿನ ಬಿಲ್ಲನ್ನು ಸಕಾಲದಲ್ಲಿ ಪಾವತಿಸುವುದು,
ಅನೇಕ ಬಾರಿ ಬಾಕಿ ಹಣಕ್ಕೆ (ಎಫ್‌ಆರ್‌ಪಿ) ಪ್ರಕಾರ ಒತ್ತಾಯಿಸಿ ದರೂ ಕೂಡ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಬಾಕಿ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ ಏಕಮಾತ್ರ ಸರ್ಕಾರಿ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಿರ್ವಹಿಸಬೇಕು. ಆನ್‌ಲೈನ್ ಮೂಲಕ ಷೇರುದಾರರ ಸಭೆ ನಡೆಸಲು ಹೊರಟಿರುವ ಸರ್ಕಾರದ ಕ್ರಮವು ಅವೈಜ್ಞಾನಿಕವಾಗಿದ್ದು, ಈ ಕ್ರಮವನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು.
ಸರ್ಕಾರವೇ ನಿರ್ವಹಿಸಬೇಕು. ಯಾವುದೇ ಕಾಣಕ್ಕೂ ಖಾಸಗೀಕರಣ ಮಾಡಬಾರದೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಸುನಂದಾ ಜಯರಾಂ, ಸಿ. ಕುಮಾರಿ, ಮುದ್ದೇಗೌಡ, ಎಂ.ಬಿ.ಶ್ರೀನಿವಾಸ್, ಎಂ. ಎಲ್. ತುಳಸೀಧರ್, ಕೃಷ್ಣೇಗೌಡ, ಇಂಡುವಾಳು ಚಂದ್ರಶೇಖರ್, ಕಿರಂಗೂರು ಪಾಪು ಭಾಗವಹಿಸಿದ್ದರು.