Advertisement

ಮೈಷುಗರ್‌: ಸ್ಪಷ್ಟ ನಿರ್ಧಾರ ಪ್ರಕಟಿಸದ ಸರ್ಕಾರ

04:46 PM Sep 24, 2021 | Team Udayavani |

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸಲು ಸರ್ಕಾರದಿಂದ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದೆ. ಆದರೆ ಸರ್ಕಾರಿ ಸ್ವಾಮ್ಯವೋ ಅಥವಾ ಖಾಸಗಿಯೋ ಎಂಬ ಸ್ಪಷ್ಟ ನಿರ್ಧಾರವಿಲ್ಲ.

Advertisement

ಅಲ್ಲದೆ, ಯಾವಾಗ ಪ್ರಾರಂಭ ಮಾಡುವ ಬಗ್ಗೆಯೂ ಪ್ರಕಟಿಸಿಲ್ಲದಿರುವುದು ಜಿಲ್ಲೆಯ ರೈತರ ಅಸಮಾಧಾನಕ್ಕೆಕಾರಣವಾಗಿದೆ. ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಅರ್ಧ ಗಂಟೆ ಮೈಷುಗರ್‌ ಕಾರ್ಖಾನೆಬಗ್ಗೆಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕರಾದ ಕೆ.ಸುರೇಶ್‌ಗೌಡ, ಕೆ.ಅನ್ನದಾನಿ, ಡಿ.ಸಿ.ತಮ್ಮಣ್ಣ, ಸಿ.ಎಸ್‌. ಪುಟ್ಟರಾಜು, ಎಂ.ಶ್ರೀನಿವಾಸ್‌, ರವೀಂದ್ರಶ್ರೀಕಂಠಯ್ಯ ಅವರು, ಕಾರ್ಖಾನೆಯ ಇತಿಹಾಸದ ಬಗ್ಗೆ ಸಂಪೂರ್ಣ ವಾಗಿ ವಿವರಿಸಿ, ಕಾರ್ಖಾನೆಗೂ ಜಿಲ್ಲೆಗೂ ಭಾವನಾತ್ಮಕ ಸಂಬಂಧದ ಸುದೀರ್ಘ‌ ಚರ್ಚೆ ನಡೆಸಿ ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸುವಂತೆ ಒತ್ತಾಯಿಸಿದ್ದರು.

ಕಾರ್ಯಗತವಾಗದ ಭರವಸೆಗಳು: ಇದಕ್ಕೆ ಉತ್ತರಿಸಿದ ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ, ಸಾಕಷ್ಟು ಅನುದಾನ ನೀಡಲಾಗಿದೆ. ಅಲ್ಲದೆ, ಲಾಭ ಬರುವ ಘಟಕಗಳಿದ್ದರೂ ನಷ್ಟದ ಹಾದಿಯಲ್ಲಿಯೇ ಸಾಗುತ್ತಿದೆ. ಆದರೂ ಜನಪ್ರತಿನಿಧಿಗಳ ಒತ್ತಾಯದಂತೆ ಶೀಘ್ರದಲ್ಲಿಯೇ ಪುನಶ್ಚೇತನಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸೇರಿದಂತೆ ಬದಲಾದ ಸಕ್ಕರೆ ಸಚಿವರು ಇದೇ ಭರವಸೆ ನೀಡಿ ದ್ದರು. ಆದರೆ ಇದುವರೆಗೂ ಕಾರ್ಯಗತ ವಾಗಿಲ್ಲ. ಭರವಸೆಯಾಗಿಯೇ ಉಳಿದಿವೆ.

ಇದನ್ನೂ ಓದಿ:ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಆರಂಭಿಸುವ ಸ್ಪಷ್ಟತೆ ಇಲ್ಲ:ಕಾರ್ಖಾನೆಯನ್ನು ಪುನರಾರಂಭ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ಈಗಾಗಲೇ ಜಿಲ್ಲೆಯ ಖಾಸಗಿ ಕಾರ್ಖಾನೆಗಳು ಪ್ರಾರಂಭಗೊಂಡುಕಬ್ಬು ಅರೆ ಯುತ್ತಿವೆ. ಆದರೆ ಮೈಷುಗರ್‌ ಕಾರ್ಖಾನೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆ ಬೇರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಲಾಗಿದ್ದು, ಮೈಷುಗರ್‌ ಆರಂಭದ ಬಗ್ಗೆ ರೈತರಿಗೆ ಇನ್ನೂ ಸ್ಪಷ್ಟ ಉತ್ತರ ಸಿಗದಂತಾಗಿದೆ.

Advertisement

ಆಲೆಮನೆಗಳಿಗೆ ಬೆಳೆಗಾರರು
ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಕಟಾವು, ಸಾಗಣೆ ವೆಚ್ಚ ರೈತರೇಭರಿಸಬೇಕಾಗಿರುವುದರಿಂದ ಆಲೆಮನೆಗಳಿಗೆ ಕಬ್ಬು ನೀಡಲಾಗುತ್ತಿದೆ. ಮೈಷು ಗರ್‌ ವ್ಯಾಪ್ತಿಯ ಸಾಕಷ್ಟು ಕಬ್ಬು ಆಲೆಮನೆಗಳ ಪಾಲಾಗಿದೆ. ಆಲೆಮನೆಯವರು 1600ರಿಂದ 1700 ರೂ.ವರೆಗೆ ದರ ನೀಡಿಖರೀದಿಸುತ್ತಿದ್ದಾರೆ.

ಕಟಾವು ಆಗದ ಕಬ್ಬು
ಬೇರೆ ಕಾರ್ಖಾನೆಗಳಿಗೆ ಕಬ್ಬು ಹಂಚಿಕೆಯಾಗಿದ್ದರೂ ಮೈಷುಗರ್‌ ವ್ಯಾಪ್ತಿಯಕಬ್ಬು ನಿಗದಿತ ಅವಧಿಗೆ ಕಟಾವು ಮಾಡುತ್ತಿಲ್ಲ. ಇದರಿಂದ ರೈತರು ಇಳುವರಿ ನಷ್ಟ ಅನುಭವಿಸುವಂತಾಗಿದೆ. ಇಳುವರಿ ಕಡಿಮೆಯಾದರೆ ಸಮರ್ಪಕವಾದಕಬ್ಬಿನ ದರ ಸಿಗದೆ ನಷ್ಟವಾಗಲಿದೆ ಎಂಬುದು ರೈತರ ಅಳಲಾಗಿದೆ.ಕೆಲವು ರೈತರಕಬ್ಬುಕಟಾವು ಮಾಡಲಾಗಿದೆ.

ಕಡಿಮೆಯಾಗದ ವೆಚ್ಚ
ಕಬ್ಬು ಕಟಾವಿನ ವೆಚ್ಚ ಹೆಚ್ಚಳ ಮಾಡದಂತೆ ಎಲ್ಲ ಕಾರ್ಖಾನೆಗಳ ಆಡಳಿತ ಮಂಡಳಿಗಳ ಅಧಿಕಾ ರಿಗಳ ಸಭೆ ನಡೆಸಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ, ಮೈಷುಗರ್‌ ವ್ಯಾಪ್ತಿಯ ಕಬ್ಬು ಕಟಾವು ವೆಚ್ಚ ಮಾತ್ರ ಕಡಿಮೆಯಾಗಿಲ್ಲ.ಟನ್‌ ಕಬ್ಬಿಗೆ 450ರಿಂದ 600 ರೂ.ವರೆಗೂದರ ಹೆಚ್ಚಳ ಮಾಡಲಾಗಿದೆ. ಜತೆಗೆ ಸಾಗಾಣಿಕೆ ವೆಚ್ಚವೂ 600 ರೂ. ಆಗಿರುವುದರಿಂದ ಕಬ್ಬು ಬೆಳೆದ ರೈತರಿಗೆ ಆರ್ಥಿಕ ಹೊರೆಬಿದ್ದಿದೆ.

ಸ್ಪಷ್ಟ ನಿರ್ಧಾರ ಪ್ರಕಟಿಸಿ:
ಮುಂದುವರಿದ ಧರಣಿ
ಅಧಿವೇಶನದಲ್ಲಿಚರ್ಚೆಯಾದ ಹಿನ್ನೆಲೆಯಲ್ಲಿ ಸರ್ಕಾರ ಕಾರ್ಖಾನೆ ಆರಂಭಿಸುವಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬಹುದು ಎಂಬನಿರೀಕ್ಷೆ ಇತ್ತು. ಆದರೆ ಕೇವಲಭರವಸೆ ನೀಡಿ ಮೌನವಾದ ಸರ್ಕಾರದ ನಡೆಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರಂತರ ಧರಣಿ ಮುಂದುವರಿದಿದೆ. ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸುವ ಬಗ್ಗೆಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೂಡಲೇ ಉತ್ತಮವಾಗಿರುವ ಮಿಲ್‌ನಿಂದ ಕಬ್ಬು ಅರೆಯಬೇಕು ಎಂದು ಆಗ್ರಹಿಸಿದ್ದಾರೆ. ನಗರದ ಸರ್‌ಎಂವಿಪ್ರತಿಮೆ ಮುಂಭಾಗ ನಡೆಯುತ್ತಿರುವ ನಿರಂತರ ಧರಣಿ 11ನೇ ದಿನಕ್ಕೆ ಕಾಲಿಟ್ಟಿದ್ದು, ಮುಂದುವರೆದಿದೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next