Advertisement

ಮೈಷುಗರ್‌ಗೆ ಬೇಕಿದೆ ಆಧುನಿಕ ಸ್ಪರ್ಶ

02:05 PM Oct 22, 2021 | Team Udayavani |

ಮಂಡ್ಯ: ಸರ್ಕಾರ ಮೈಷುಗರ್‌ ಕಾರ್ಖಾನೆ ಯನ್ನು ಪುನಶ್ಚೇತನಗೊಳಿಸಿ ಎರಡು ವರ್ಷಗಳ ಕಾಲ ಸರ್ಕಾರಿ ಸ್ವಾಮ್ಯದಲ್ಲಿಯೇ ಪ್ರಾಯೋಗಿಕವಾಗಿ ಚಾಲನೆ ನೀಡಲಾಗು ವುದು ಎಂದು ಘೋಷಣೆ ಮಾಡಿದೆ. ಆದರೆ ಮೈಷುಗರ್‌ನಲ್ಲಿರುವ ಯಂತ್ರಗಳು ಸಮರ್ಪಕವಾಗಿಲ್ಲ. ನೂತನ ತಂತ್ರಜಾnನದ ಯಂತ್ರಗಳ ಅಳವಡಿಕೆ ಮಾಡುವ ಮೂಲಕ ಆಧುನಿಕ ಸ್ಪರ್ಶ ನೀಡಬೇಕಾಗಿದೆ.

Advertisement

ಹೋರಾಟಗಾರರು, ರೈತ ಮುಖಂಡರ ಅಭಿಪ್ರಾಯದಂತೆ ಮೈಷುಗರ್‌ ಕಾರ್ಖಾನೆಯಲ್ಲಿ ಎರಡು ಮಿಲ್‌ಗ‌ಳಿದ್ದು, ಒಂದು ಸುಸ್ಥಿತಿಯಲ್ಲಿದ್ದು, ಮತ್ತೂಂದು ದುರಸ್ತಿ ಮಾಡಬೇಕಾಗಿದೆ ಎಂದು ಹೇಳುತ್ತಾರೆ. ಆದರೆ ದುರಸ್ತಿಯಲ್ಲಿರುವ ಮಿಲ್‌ನ್ನು ಸರಿಪಡಿಸಲು ಸಾಧ್ಯವಿಲ್ಲ. ಹೊಸ ಮಿಲ್‌ ಅಳವಡಿಸುವ ಅಗತ್ಯವಿದೆ.

ಕೆಟ್ಟು ನಿಲ್ಲುತ್ತಿದ್ದ ಘಟನೆಗಳು: ಸುಸ್ಥಿತಿ ಯಲ್ಲಿರುವ ಮಿಲ್‌ನಲ್ಲೂ ಕೆಲವು ಬಿಡಿ ಭಾಗಗಳು ಹಳೆಯದಾಗಿದ್ದು, ಉತ್ತಮ ಗುಣ ಮಟ್ಟದ ಬಿಡಿ ಭಾಗಗಳನ್ನು ಅಳ ವಡಿಸುವ ಅವಶ್ಯಕತೆ ಇದೆ. ಮಿಲ್‌ ಕಬ್ಬು ಅರೆಯಲು ಬೇಕಾದ ಸಾಮರ್ಥ್ಯ ಹೆಚ್ಚಿಸ ಬೇಕಾಗಿದೆ. ಸರ್ಕಾರಗಳು ಕಾರ್ಖಾನೆಯ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ ಮಾಡುತ್ತಿದ್ದವು.

ಆದರೆ ಅಧಿಕಾರಿಗಳ ಭ್ರಷ್ಟಾಚಾರದಿಂದ ಯಂತ್ರಗಳ ದುರಸ್ತಿಗೆ ಕಳಪೆ ಗುಣಮಟ್ಟದ ಬಿಡಿ ಭಾಗಗಳನ್ನು ಅಳವಡಿಸುವ ಮೂಲಕ ಯಂತ್ರಗಳ ಸಾಮರ್ಥ್ಯ ಕುಸಿದು 15 ದಿನ ಕಳೆಯುವುದರೊಳಗೆ ಕೆಟ್ಟು ನಿಲ್ಲುತ್ತಿದ್ದ ಘಟನೆಗಳು ನಡೆದಿವೆ.‌

ಇದನ್ನೂ ಓದಿ:- ನಟಿ ಸಾಕ್ಷಿ ಅಗರ್ವಾಲ್ ಫೋಟೋ ಗ್ಯಾಲರಿ

Advertisement

ದುರಸ್ತಿ ಅಸಾಧ್ಯದ ಸ್ಥಿತಿ: ಕಬ್ಬು ನುರಿಸುವ ಯಂತ್ರಗಳು ಹಳೆಯದಾಗಿರುವುದ ರಿಂದ ಸವೆದಿವೆ. ಬಾಯ್ಲರ್‌ಗೆ ಅಳವಡಿಸುವ ಟ್ಯೂಬ್‌ಗಳು ಕಳಪೆಯಾಗಿರುತ್ತಿದ್ದವು. ಇದರಿಂದ ಬಾಯ್ಲರ್‌ನ ಬಿಸಿ ಶಾಖ ತಡೆದುಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದವು. ವಾರಕ್ಕೆ ಕಬ್ಬು ಅರೆಯುವುದನ್ನು ನಿಲ್ಲಿಸಲಾಗುತ್ತಿತ್ತು. ಅಲ್ಲದೆ, ಪ್ರತಿ ವರ್ಷ ಯಂತ್ರಗಳ ದುರಸ್ತಿ ಮಾಡುವುದು ಸಾಮಾನ್ಯ. ಆದರೆ ಪ್ರಸ್ತುತ ಕೆಲವು ಯಂತ್ರಗಳು ದುರಸ್ತಿ ಮಾಡದ ಪರಿಸ್ಥಿತಿಗೆ ತಲುಪಿದೆ.

ಕಬ್ಬು ಅರೆಯುವ ಯಂತ್ರಗಳ ಹಲ್ಲು ಗಳು ಸವೆದಿದ್ದರಿಂದ ಕಬ್ಬಿನ ರಸ ಸೋರಿಕೆಯಾಗುತ್ತಿತ್ತು. ಇದರಿಂದ ಸಾಕಷ್ಟು ಸಲ ಕಬ್ಬಿನ ರಸವನ್ನು ಪೋಲು ಮಾಡಿದ ಘಟನೆಗಳು ನಡೆದಿದೆ. ಆದ್ದರಿಂದ ಸರ್ಕಾರ ಗುಣಮಟ್ಟದ ಯಂತ್ರಗಳನ್ನು ಅಳವಡಿಸುವ ಮೂಲಕ ಕಾರ್ಖಾನೆ ಸುಗಮವಾಗಿ ನಡೆಯುವಂತೆ ನಿಗಾ ವಹಿಸಬೇಕು ಎಂಬುದು ಕೆಲವು ಕಾರ್ಮಿಕರ ಒತ್ತಾಯವಾಗಿ ದುರಸ್ತಿಯಲ್ಲಿರುವ ಯಂತ್ರಗಳು ಕಬ್ಬು ನುರಿಸುವ ಸಾಮರ್ಥ್ಯವನ್ನು 5 ಸಾವಿರ ಟಿಸಿಡಿಗೆ ಹೆಚ್ಚಿಸಬೇಕು

. ಬಾಯ್ಲಿಂಗ್‌ ಹೌಸ್‌ ರಿಪೇರಿ ಅಗತ್ಯವಿದ್ದು, 4.4 ಕೋಟಿ ರೂ. ವೆಚ್ಚವಾಗಲಿದೆ. ಇದರ ಜತೆಗೆ ನೀರು ಸರಬರಾಜು ಮಾಡುವ ಕೋಣನಹಳ್ಳಿ ಕೆರೆ ವಾಟರ್‌ಲೈನ್‌ ಸ್ವತ್ಛಗೊಳಿಸಬೇಕು. ಹೆಬ್ಟಾಳ ನೀರಿನ ಮಾರ್ಗವನ್ನು ಸರಿಪಡಿಸಬೇಕಾಗಿದೆ. ಇದಕ್ಕಾಗಿ 26 ಲಕ್ಷ ರೂ. ಅಗತ್ಯವಿದೆ. ಕೋಜನ್‌ ಘಟಕ ದುರಸ್ತಿ, 2 ಬಗಾಸೆ ಡ್ರಮ್‌ ಎಕ್ಸ್‌ಪ್ರೆಸ್‌ ಟ್ರ್ಯಾಕ್ಟರ್‌ಗಳನ್ನು ಬದಲಾಯಿಸಬೇಕು. ಇದಕ್ಕಾಗಿ 12 ಲಕ್ಷ ರೂ. ಖರ್ಚಾಗಲಿದೆ ಎಂದು ಅಧಿಕಾರಿಗಳು 2019ರಲ್ಲಿ ವರದಿ ನೀಡಿದ್ದಾರೆ. ಇದರ ಜತೆಗೆ ಕಾರ್ಖಾನೆಯಲ್ಲಿ ಅನುಪಯುಕ್ತ ಯಂತ್ರಗಳಿದ್ದು, ಎಂ.ಎಸ್‌.ಸಾðಪ್‌, ಅಲ್ಯೂಮಿನಿಯಂ ಸ್ಕ್ಯಾಪ್‌, ಹಳೇ ಮಿಲ್‌, ಬಾಯ್ಲಿಂಗ್‌ ಹೌಸ್‌ ಕೂಡ ಸ್ಕ್ರಾಪ್ ಆಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next