Advertisement

ಮೈಷುಗರ್‌ ಕಾರ್ಖಾನೆ: ಬಾಕಿ ಹಣ ಬಿಡುಗಡೆಗೆ ಕ್ರಮ

02:46 PM Feb 25, 2023 | Team Udayavani |

ಮಂಡ್ಯ: ನಗರದ ಮೈಷುಗರ್‌ ಕಾರ್ಖಾನೆಗೆ ಕಬ್ಬು ಪೂರೈಸಿದ 300 ರೈತರಿಗೆ ಒಟ್ಟು 2.42 ಕೋಟಿ ರೂ. ಬಾಕಿ ಇದ್ದು, ಆ ಮೊತ್ತ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮನೇನಕೊಪ್ಪ ಭರವಸೆ ನೀಡಿದ್ದಾರೆ.

Advertisement

ವಿಧಾನ ಪರಿಷತ್‌ ಸದಸ್ಯ ದಿನೇಶ್‌ಗೂಳಿಗೌಡ ಅವರು ಈ ಬಾರಿ ಎಷ್ಟು ಟನ್‌ ಕಬ್ಬು ನುರಿಸುವ ಗುರಿ ಹೊಂದಲಾಗಿತ್ತು? ಹಾಗೂ ನುರಿಸಿದ ಕಬ್ಬಿಗೆ ರೈತರಿಗೆ ಹಣ ಪಾವತಿ ಬಾಕಿ ಇದೆಯೇ? ಕಾರ್ಖಾನೆಗೆ ಸರ್ಕಾರದಿಂದ ಬಾಕಿ ಇರುವ ಘೋಷಿತ ಹಣವನ್ನು ಯಾವಾಗ ಬಿಡುಗಡೆ ಮಾಡಲಾಗುವುದು? ಎಂಬ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಬಾಕಿ ಮೊತ್ತ ಪಾವತಿ: ಈ ಬಾರಿ 2022ರ ಸೆ.20ರಿಂದ ಕಬ್ಬು ನುರಿಸುವಿಕೆಯನ್ನು ಪ್ರಾರಂಭಿಸಲಾಗಿತ್ತು. ಫೆ.2ರವರೆಗೆ 1,01,842 ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿದೆ. ರೈತರಿಗೆ ಈಗಾಗಲೇ 26.30 ಕೋಟಿ ರೂ. ಪಾವತಿಸಲಾಗಿದೆ. ಬಾಕಿ ಮೊತ್ತ ಪಾವತಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

ನಷ್ಟ ತಪ್ಪಿಸಲು ಕಬ್ಬು ಅರೆಯುವಿಕೆ ಸ್ಥಗಿತ: ನಾಲ್ಕು ತಿಂಗಳು ಕಾರ್ಖಾನೆಗೆ ಪ್ರತಿ ದಿನ 800ರಿಂದ 1000 ಮೆಟ್ರಿಕ್‌ ಟನ್‌ ಕಬ್ಬು ಪೂರೈಕೆಯಾಗಿದ್ದು, 1.50 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಅರೆಯಲು ಗುರಿ ಹೊಂದಲಾಗಿತ್ತು. ಆದರೆ, ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯಕ್ಕೆ ಅನುಗುಣವಾಗಿ ಕಬ್ಬು ಪೂರೈಕೆಯಾಗದ ಕಾರಣ ಕಂಪನಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಫೆ.2ರಂದು ಕಬ್ಬು ಅರೆಯುವಿಕೆಯನ್ನು ನಿಲ್ಲಿಸಲಾಗಿದೆ ಎಂದು ವಿವರಿಸಿದ್ದಾರೆ.

2019-20ರಿಂದ ಸ್ಥಗಿತಗೊಂಡಿರುವ ಮೈಷುಗರ್‌ ಕಾರ್ಖಾನೆಯನ್ನು ಪುನರ್ಟಾàತನಗೊ ಳಿಸಲು ಸರ್ಕಾರವು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಮುಂದಿನ 2 ವರ್ಷ ಪ್ರಾಯೋಗಿಕವಾಗಿ ಸರ್ಕಾರದಿಂದಲೇ ಕಾರ್ಖಾನೆ ನಡೆಸಲಾಗುವುದು. ಕಾರ್ಖಾನೆಯ ಯಂತ್ರೋಪಕರಣ ದುರಸ್ತಿಗಾಗಿ 50 ಕೋಟಿ ರೂ. ಒದಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳವನ್ನು ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು ಎಂದು ವಿವರಿಸಿದರು.

Advertisement

15 ಕೋಟಿ ರೂ. ಸಾಲ: ಅದರಂತೆ ಯಂತ್ರೋಪಕರಣಗಳ ದುರಸ್ತಿ ಮತ್ತು ಓವರ್‌- ಹಾಲಿಂಗ್‌ ಕೆಲಸಗಳಿಗೆ, ಸಾಮಾಗ್ರಿ ಖರೀದಿ ಮತ್ತು ಗುತ್ತಿಗೆ ಕೆಲಸಗಳನ್ನು ಕೈಗೊಳ್ಳಲು, ಕಬ್ಬು ಕಟಾವು ಮಾಡುವ ಮೇಸ್ತ್ರಿಗಳಿಗೆ ಮುಂಗಡ ಹಣ ಪಾವತಿಸಲು, ನೌಕರರಿಗೆ ಸ್ವಯಂ ನಿವೃತ್ತಿ ಸೌಲಭ್ಯ ಪಾವತಿಸುವುದಕ್ಕಾಗಿ 32.58 ಕೋಟಿ ರೂ. ಅನುದಾನವನ್ನು ಇದುವರೆಗೆ ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದಿರುವ 17.42 ಕೋಟಿ ರೂ. ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ಕಾರ್ಖಾನೆಯ ದುಡಿಯುವ ಬಂಡವಾಳಕ್ಕಾಗಿ ಹಾಗೂ ತುರ್ತು ಅವಶ್ಯಕ ಸೌಕರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದಿಂದ 15 ಕೋಟಿ ರೂ., ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ (ಕೆಎಸ್‌ಎಸ್‌ಐಡಿಸಿ)ಯಿಂದ 15 ಕೋಟಿ ರೂ. ಸಾಲವನ್ನು ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಕಳೆದ ವರ್ಷ 3 ಲಕ್ಷ ಟನ್‌ ಕಬ್ಬು ನುರಿಯುವ ಗುರಿಯನ್ನು ಹೊಂದಲಾಗಿತ್ತು. ಆದರೆ, 1.01 ಲಕ್ಷ ಮೆಟ್ರಿಕ್‌ ಟನ್‌ ಕಬ್ಬನ್ನು ಮಾತ್ರ ಅರೆಯಲಾಗಿದೆ. ಆದರೆ, ಈ ಬಾರಿ ಹೆಚ್ಚಿನ ಕಬ್ಬನ್ನು ಅರಿಯಬೇಕಿದೆ. ಇದಕ್ಕೆ ರೈತರು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಸಾಗಿಸಬೇಕು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. – ದಿನೇಶ್‌ ಗೂಳಿಗೌಡ, ವಿಧಾನ ಪರಿಷತ್‌ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next