Advertisement
ಕಲ್ಲು ಕತೆಯ ಹೇಳಿದೆ!ಬೆಂಗಳೂರು ಪೂರ್ವದಲ್ಲಿರುವ ಹೂಡಿ, ದೇವಸಂದ್ರ, ಪಟ್ಟಂದೂರು, ಕಾಡುಗೋಡಿ, ಇಮ್ಮಡಿಹಳ್ಳಿ, ವರ್ತೂರು, ಗುಂಜೂರು ಪ್ರದೇಶಗಳೂ 1000 ವರ್ಷಗಳಷ್ಟು ಇತಿಹಾಸವನ್ನು ಹೊಂದಿವೆ. ಅಲ್ಲಿ ಸಿಕ್ಕ ಶಾಸನ ಕಲ್ಲುಗಳು ಈ ಮಾಹಿತಿಗೆ ಸಾಕ್ಷ್ಯ ನುಡಿದಿವೆ. ಬೆಂಗಳೂರಿನಲ್ಲಿ ಸಾವಿರಾರು ಕೆರೆಗಳಿದ್ದ ಕಾಲವನ್ನು ಕಲ್ಪಿಸಿಕೊಳ್ಳುವುದು ಇಂದು ಕಷ್ಟಕರವಾದ ಕೆಲಸ. ಆದರೆ ಅಂಥದ್ದೊಂದು ಕಾಲದಲ್ಲಿ ಕೆತ್ತಲ್ಪಟ್ಟ ಶಾಸನಕಲ್ಲುಗಳು ಇಂದಿಗೂ ನಮ್ಮ ನಡುವೆಯೇ ಅಂದಿನ ಕಥೆಯನ್ನು ಸಾರುತ್ತಿದೆ. ಆಗಿನ ಕಾಲದಲ್ಲಿ ಇಲ್ಲಿ ವಾಸವಿದ್ದ ಜನರು ಯಾವ ಧರ್ಮವನ್ನು ಪಾಲಿಸುತ್ತಿದ್ದರು, ಯಾವ ಭಾಷೆಗಳನ್ನು ಮಾತಾಡುತ್ತಿದ್ದರು, ಯಾವೆಲ್ಲಾ ದೇವಸ್ಥಾನಗಳನ್ನು ಅವರು ಕಟ್ಟಿಸಿದರು, ಅಲ್ಲಿ ನಡೆದ ಕದನಗಳು ಮುಂತಾದ ಸ್ವಾರಸ್ಯಕರ ಮಾಹಿತಿ ಈ ಕಾರ್ಯಕ್ರಮದಿಂದ ಸಿಗುತ್ತದೆ. ಈ ಶಾಸನ ಕಲ್ಲುಗಳಿದ್ದಲ್ಲಿಗೆ ಕರೆದೊಯ್ಯಲಾಗುವುದು. ಅದರ ಮಹತ್ವವನ್ನು ಸ್ಥಳದಲ್ಲಿ ತಿಳಿಸಿಕೊಡಲಾಗುವುದು.
ಜೂನ್ 9ರಂದು ಬೆಳಿಗ್ಗೆ 8.30ಕ್ಕೆ ಕಾಡುಗೋಡಿಯ ಹೋಪ್ ಫಾರ್ಮ್(bit.ly/Hopefarm) ಬಳಿ ಸೇರುವುದು. ಅಲ್ಲಿಂದ ಕಾಡುಗೋಡಿ ಕುರಿತಾದ 7 ಶಾಸನಕಲ್ಲುಗಳಿದ್ದಲ್ಲಿಗೆ ಭೇಟಿ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಮುಂಚಿತವಾಗಿ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು. ಪಾಲ್ಗೊಳ್ಳುವವರು ಸ್ವಂತ ವಾಹನ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಸಂಪರ್ಕ: 9845204268(ಉದಯ್)