Advertisement

ನಿಮಗಿದು ಗೊತ್ತೇ : ಈ ಮೊಲಗಳೇಕೆ ಮುಂಗಾಲಿನಲ್ಲಿ ನಡೆಯುತ್ತವೆ!

02:01 PM Apr 06, 2021 | Team Udayavani |

ನವದೆಹಲಿ : ಸಾಮಾನ್ಯವಾಗಿ ಮೊಲಗಳು ನಾಲ್ಕು ಕಾಲುಗಳಿಂದ ನಡೆಯುವುದನ್ನು ನೋಡಿದ್ದೇವೆ. ಓಡುವ ಸಮಯದಲ್ಲಿ ನೆಗೆಯುವುದನ್ನೂ ನೋಡಿದ್ದೇವೆ. ಆದರೆ ಇಲ್ಲೊಂದು ಜಾತಿಯ ಮೊಲವು ತನ್ನ ಮುಂಗಾಲಿನಿಂದ ನಡೆಯುತ್ತದೆ. ಹೌದು ಸೌತೂರ್ ಡಿ ಆಲ್ಫೋರ್ಟ್ (Sauteur d’Alfort rabbit)  ಜಾತಿಯ ಮೊಲಗಳು ತನ್ನ ಹಿಂಗಾಲುಗಳನ್ನು ಮೇಲಕ್ಕೆ ಎತ್ತಿಕೊಂಡು ತಮ್ಮ ಮುಂಗಾಲುಗಳಿಂದಲೇ ನಡೆಯುತ್ತವೆ.

Advertisement

ಪ್ರಕೃತಿಯ ವೈಚಿತ್ರಗಳಲ್ಲಿ ಇದೂ ಕೂಡ ಒಂದು. ಸರಿ ಈ ಮೊಲ ನಾಲ್ಕು ಕಾಲುಗಳಿಂದಲೂ ನಡೆಯಬಹುದಲ್ಲಾ, ಯಾಕೆ ಬರೀ ಮುಂಗಾಲಿನಿಂದ ನಡೆಯುತ್ತದೆ ಎಂದು ವಿಜ್ಞಾನಿಗಳು ಬಹಳಾ ವರ್ಷಗಳಿಂದ ತಲೆ ಕೆಡಿಸಿಕೊಂಡು ಅಧ್ಯಯನ ಮಾಡಿದ್ದಾರೆ. ಇದೀಗ ಈ ಮೊಲದ ಬಗ್ಗೆ ಒಂದು ವಿಷಯವನ್ನು ಹೊರ ಹಾಕಿದ್ದು, ಸೌತೂರ್ ಡಿ ಆಲ್ಫೋರ್ಟ್ ಮೊಲಗಳು ಯಾಕೆ ಮುಂಗಾಲಿನಲ್ಲಿ ನಡೆಯುತ್ತವೆ ಎಂಬುದನ್ನು ತಿಳಿಸಿದ್ದಾರೆ.

ಈ ಬಗ್ಗೆ ಅಧ್ಯಯನ ಮಾಡಿರುವ ವಿಜ್ಞಾನಿಗಳು ಹೇಳಿದ್ದು, ಇದು ಅನುವಂಶಿಯವಾಗಿ ಬಂದಿದೆ. ಅಲ್ಲದೆ  ಈ ಮೊಲಗಳು RORO ಜೀನ್ ಗಳನ್ನು ಹೊಂದಿವೆ. ಈ ಕಾರಣದಿಂದ ಇವುಗಳ ಬೆನ್ನು ಮೂಳೆಯ ಸಾಮರ್ಥ್ಯ ಕಡಿಮೆ ಇರುತ್ತದೆ. ಹಾಗೂ ತಮ್ಮ ನರಕೋಶವನ್ನು ಸಮನ್ವಯ ಮಾಡಿಕೊಳ್ಳುವುದಕ್ಕಾಗಿ ಈ ರೀತಿ ನಡೆಯುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಟ್ಟಾರೆ ಅದೇನೆ ಇರಲಿ ಪ್ರಕೃತಿಯ ವೈಚಿತ್ರಗಳನ್ನು ಸಂಶೋಧನೆ ಮಾಡುತ್ತಾ ಹೋದರೆ ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತವೆ ಇರುತ್ತವೆ ಎಂಬುದಕ್ಕೆ ಆಲ್ಫೋರ್ಟ್ ಮೊಲಗಳೇ ಸಾಕ್ಷಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next