Advertisement

ವಿಜ್ಞಾನಿಗಳಿಗೆ ಆಮ್ಲಜನಕದ ತಲೆಬಿಸಿ!

09:59 AM Nov 20, 2019 | Hari Prasad |

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ಆಮ್ಲಜನಕವು ಅಲ್ಲಿನ ಪ್ರತಿ ವಸಂತ ಋತುವಿನಲ್ಲಿ ಶೇ.30ರಷ್ಟು ಏರಿಕೆಯಾಗಿ, ಅನಂತರ ನಿಧಾನವಾಗಿ ಕುಸಿಯುವ ವೈಚಿತ್ರ್ಯವೊಂದು ಪತ್ತೆಯಾಗಿದೆ. ಮಂಗಳನಲ್ಲಿ ಅಧ್ಯಯನ ನಡೆಸುತ್ತಿರುವ ಕ್ಯೂರಿಯಾಸಿಟಿ ರೋವರ್‌ ಇದನ್ನು ಪತ್ತೆ ಹಚ್ಚಿದ್ದು, ಬಾಹ್ಯಾಕಾಶ ವಿಜ್ಞಾನಿಗಳು ಹಾಗೂ ಮಂಗಳ ಗ್ರಹದ ತಜ್ಞರು ಈ ವಿದ್ಯಮಾನದ ಹಿಂದಿನ ಕಾರಣ ಹುಡುಕುವಲ್ಲಿ ನಿರತರಾಗಿದ್ದಾರೆ.

Advertisement

ಈ ಬಗ್ಗೆ ‘ಜರ್ನಲ್‌ ಆಫ್ ಜಿಯೋ ಫಿಸಿಕಲ್‌ ರಿಸರ್ಚ್‌: ಪ್ಲಾನೆಟ್ಸ್‌’ ಎಂಬ ನಿಯತಕಾಲಿಕೆಯಲ್ಲಿ ವರದಿ ಪ್ರಕಟವಾಗಿದೆ. ಅದರಲ್ಲಿ, ಮಂಗಳನ ವಾತಾವರಣದಲ್ಲಿ ಇರುವ ಕಾರ್ಬನ್‌ ಡೈ ಆಕ್ಸೈಡ್‌ (CO2) ಹಾಗೂ ನೀರಿನ ಕಣಗಳ (H2O) ವಿಭಜನೆಯಿಂದಾಗಿ ಅಲ್ಲಿ ಆಮ್ಲಜನಕ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಆದರೆ, ಇದನ್ನು ಅಲ್ಲಗಳೆದಿರುವ ನಾಸಾ, ಮಂಗಳನಲ್ಲಿನ ಆಮ್ಲಜನಕ ಏಕಾಏಕಿ ಹೆಚ್ಚಾಗಲು ಅಲ್ಲಿನ ನೀರಿನ ಪ್ರಮಾಣ ಈಗಿರುವುದಕ್ಕಿಂತ 5 ಪಟ್ಟು ಹೆಚ್ಚಿರಬೇಕು ಹಾಗೂ CO2 ಕಣಗಳು ನಿಧಾನವಾಗಿ ವಿಭಜನೆಗೊಳ್ಳಬೇಕು. ಮಂಗಳನಲ್ಲಿ ಇದು ಸಾಧ್ಯವೇ ಎಂಬ ಅನುಮಾನ ವ್ಯಕ್ತಪಡಿಸಿದೆ. ಹಾಗಾಗಿ, ವಿಜ್ಞಾನಿಗಳು, ತಜ್ಞರು ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸುವುದು ಸವಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next