Advertisement
ಪರ್ವತಾರೋಹಿಗಳು ಮತ್ತು ಹಾಲಿವುಡ್ ಚಿತ್ರ ನಿರ್ಮಾಪಕ ಡೇವಿಡ್ ಬ್ರಿಶಿಯರ್‌ಸ್ ಅವರ ಅತ್ಯದ್ಭುತ ಎರಡು ಬಿಲಿಯ ಪಿಕ್ಸೆಲ್ ಫೋಟೋಗ್ರಫಿಯಲ್ಲಿ ಸೆರೆ ಹಿಡಿದಿರುವ 477 ಯುಎಫ್ಓ ಗಳ ಪೈಕಿ ಮೌಂಟ್ ಎವರೆಸ್ಟ್ ಯುಎಫ್ಓ ಒಂದಾಗಿರುವುದಾಗಿ “ಮಿರರ್’ ವರದಿ ಮಾಡಿದೆ.
Related Articles
Advertisement
ಭಾರತ – ಚೀನ ನಡುವಿನ ಲಡ್ಡಾಕ್ ಗಡಿಯಲ್ಲಿ, ಅತ್ಯಂತ ದುರ್ಗಮವಾದ “ಏರಿಯಾ 51′ ಎಂದು ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿನ ರಹಸ್ಯ ಭೂಗತ ನೆಲೆಗಳಲ್ಲಿ ಯುಎಫ್ಓ ಇರಬಹುದೆಂಬ ಶಂಕೆಯನ್ನು ಬಹಳ ಹಿಂದೆಯೇ “ಯುಎಫ್ಓ ಟುಡೇ’ ವ್ಯಕ್ತಪಡಿಸಿ ಲೇಖನ ಪ್ರಕಟಿಸಿತ್ತು.
2017ರಲ್ಲಿ ಅಮೆರಿಕದ ಸಿಐಎ ಬಹಿರಂಗಪಡಿಸಿದ್ದ ರಹಸ್ಯ ವರ್ಗೀಕೃತ ದಾಖಲೆಗಳಲ್ಲಿ 1968ರಲ್ಲಿ ನೇಪಾಲ ಮತ್ತು ಭೂತಾನ್‌ನಲ್ಲಿ ಏಳು ಯುಎಫ್ಓಗಳನ್ನು ಗುರುತಿಸಲಾಗಿತ್ತೆಂಬುದನ್ನು ಉಲ್ಲೇಖೀಸಲಾಗಿದೆ.