Advertisement
ರಾಜಧಾನಿ ಬೆಂಗಳೂರಿನ ನಂತರ ಎಲ್ಲರ ದೃಷ್ಟಿ ಹರಿಯುವುದು ಮೈಸೂರಿ ನತ್ತ. ಕಳೆದ ಬಾರಿ ಘೋಷಿಸಿದ ಬೃಹತ್ ಜವಳಿ ಪಾರ್ಕ್ ತಾಂತ್ರಿಕ ಕಾರಣಗಳಿಂದಾಗಿ ಈವರೆಗೆ ಕಾರ್ಯಗತವಾಗಿಲ್ಲ. ಆದರೂ ಈ ಬಾರಿಯ ಬಜೆಟ್‌ನಲ್ಲಿ ಮೈಸೂರಿಗರು ಬೆಟ್ಟದಷ್ಟು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬೆಳೆಗಾರರ ಹಿತರಕ್ಷಣೆ, ಯುವಜನರಿಗೆ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಆದ್ಯತೆ ಸಿಗಬೇಕಿದೆ.
Related Articles
ಡಿಸೇಲ್ ದರ ಪ್ರತಿ ನಿತ್ಯ ಏರು ಪೇರಾಗುವುದರಿಂದ ಟ್ರ್ಯಾಕ್ಟರ್ ಹೊಂದಿರುವ ರೈತರಿಗೆ ಹೊರೆಯಾಗಿದೆ. ಹೀಗಾಗಿ ದರ ನಿಗದಿ ಸರಿಪಡಿಸಬೇಕು. ಕೃಷಿ ಉತ್ಪನ್ನಗಳಿಗಾಗಿ ಸ್ಥಳೀಯವಾಗಿ ಸಂಸ್ಕರಣಾ ಕೇಂದ್ರ, ಶೈತ್ಯಾಗಾರ, ಬೃಹತ್ ಉಗ್ರಾಣಗಳ ನಿರ್ಮಾಣ ವಾಗಬೇಕು.
ಕನಿಷ್ಠ ಬೆಂಬಲ ಬೆಲೆಯ ಲಾಭ ರೈತರಿಗೆ ದೊರಕುವಂತಾಗಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜತೆಗೆ ಕೃಷಿ ಮಾರುಕಟ್ಟೆಯ ವಹಿವಾಟಿನ ಬಗ್ಗೆ ರೈತನ ಮೊಬೈಲ್‌ಗೆ ಸಂದೇಶ ಬರುವುದಾದರೆ ರೈತ ನಷ್ಟ ಅನುಭವಿಸುವುದನ್ನು ತಪ್ಪಿಸಬಹುದು ಎನ್ನುತ್ತಾರೆ ರಾಜ್ಯ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷರಾದ ವಕೀಲ
ಬಿ.ವಿ.ಜವರೇಗೌಡ ಅವರು. ಒಂದು ದೇಶ-ಒಂದು ತೆರಿಗೆ ಪದ್ಧತಿ ಮುಖ್ಯವಾಗಿ ಜಾರಿಗೆ ಬರಬೇಕು. ಹೋಟೆಲ್ ಉದ್ಯಮಕ್ಕೇ ನಾಲ್ಕು ರೀತಿಯ ಜಿಎಸ್‌ಟಿ ಇದೆ. ಇದನ್ನು ತಪ್ಪಿ$ಸಬೇಕು. ಜತೆಗೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕಾದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹವನ್ನು ರದ್ದು ಪಡಿಸಬೇಕು.
● ನಾರಾಯಣ ಗೌಡ, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ
Advertisement
ಪ್ರವಾಸಿಗರ ಮೆಚ್ಚಿನ ತಾಣವಾದ ಮೈಸೂರನ್ನು ಪಾರಂಪರಿಕ ನಗರ (ಹೆರಿಟೇಜ್ ಸಿಟಿ) ಎಂದು ಘೋಷಣೆ ಮಾಡಿ, ಅನುದಾನವನ್ನು ಮೀಸಲಿಡಬೇಕು. ಜತೆಗೆ ಮೈಸೂರಿಗೆ ಸಾಫ್ಟ್ವೇರ್ ಇಂಡಸ್ಟ್ರಿಗಳು ಬರುವಂತಾಗಿ ಉದ್ಯೋಗ ಸೃಷ್ಟಿಗೆ ಅವಕಾಶವಾಗಬೇಕು. ಪ್ರವಾಸೋದ್ಯಮ ಬೆಳೆಯಲು ವಿಮಾನ ಯಾನ ಸೌಲಭ್ಯ ಹೆಚ್ಚಬೇಕು. ಜತೆಗೆ ಅಂದಾಜು 800 ಕೋಟಿ ರೂ. ವೆಚ್ಚದ ವಿವಿಧೋದ್ದೇಶ ಸಮ್ಮೇಳನ ಕೇಂದ್ರ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಕೇಂದ್ರ ನಿರ್ಮಾಣವಾದರೆ ಮೈಸೂರಿನಲ್ಲಿ ಪ್ರವಾಸೋದ್ಯಮದ ಚಟುವಟಿಕೆಗಳು ಹೆಚ್ಚಲಿದೆ.● ಬಿ.ಎಸ್.ಪ್ರಶಾಂತ್, ಮೈಸೂರು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ಹುಣಸೂರು