Advertisement

ಮೈಸೂರು ವಿವಿಯಲ್ಲಿ  ಶೀಘ್ರವೇ ಬುದ್ಧ ಅಧ್ಯಯನ ಪೀಠ

05:54 PM May 27, 2021 | Team Udayavani |

ಮೈಸೂರು: ಮುಂದಿನ ಶೈಕ್ಷಣಿಕ ವರ್ಷದಿಂದಮೈಸೂರು ವಿಶ್ವ ವಿದ್ಯಾಲಯದಲ್ಲಿ ಬುದ್ಧನಹೆಸರಿ ನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವುದರೊಂದಿಗೆ, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬುದ್ಧನ ಅಧ್ಯಯನವನ್ನುಐಚ್ಛಿಕ ವಿಷಯವಾಗಿ ಬೋಧಿಸಲಾಗುವುದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಹೇಳಿದರು.

Advertisement

ಬುದ್ಧ ಪೂರ್ಣಿಮೆ ಅಂಗವಾಗಿ ಮೈಸೂರುವಿಶ್ವವಿದ್ಯಾಲಯ ಡಾ.ಬಿ.ಆರ್‌.ಅಂಬೇಡ್ಕರ್‌ಅಧ್ಯ ಯನ ಕೇಂದ್ರ ಆಯೋಜಿಸಿದ್ದ ಪ್ರಸ್ತುತಸಮಾಜದ ಆರೋಗ್ಯಕ್ಕೆ ಬುದ್ಧ ಪ್ರಜ್ಞೆ ವಿಶೇಷ ಆನ್‌ಲೈನ್‌ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಇಡೀ ಜಗತ್ತು ಕೊರೊನಾ ಸಂಕಷ್ಟ ಎದುರಿಸುತ್ತಿದೆ. ಬುದ್ಧನ ಸಂದೇಶ ತಲುಪುವಲ್ಲಿ ವಿಫ‌ಲವಾ ಗಿರುವುದರಿಂದ ಸಮಾಜದಲ್ಲಿ ಅಪಾಯ,ಸವಾಲು ಎದುರಾಗಿದೆ. ಬುದ್ಧ ಬಯಸಿದ್ದ ಪ್ರಜಾಪ್ರಭುತ್ವ ಇನ್ನೂ ನಿರ್ಮಾಣವಾಗಿಲ್ಲ. ಹಾಗಾಗಿಪ್ರತಿ ಯೊಬ್ಬರೂ ಬುದ್ಧನ ವಿಚಾರಧಾರೆಮೈಗೂಡಿಸಿ ಕೊಳ್ಳಬೇಕಾಗಿದೆ ಎಂದರು.

ಸನ್ಮಾರ್ಗದೆಡೆ ಸಾಗಲು ಬುದ್ಧನನ್ನು ಅನುಸರಿಸ ಬೇಕು. ಅವರು ಬೋಧಿಸಿದ ಪಂಚಶೀಲ,ಅಷ್ಟಾಂಗ ಮಾರ್ಗಗಳು, ಶ್ರೇಷ್ಠ ಸತ್ಯಗಳು ಜೀವನದ ಸೆಲೆಯಾಗಬೇಕು. ಬುದ್ಧರ ಬಹುದೊಡ್ಡಶಕ್ತಿಯಾಗಿದ್ದ ನೈತಿಕತೆಯೊಂದೇ ಈಗ ನಮ್ಮನ್ನುರಕ್ಷಿಸಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಆರ್‌.ಶಿವಪ್ಪ, ಅಂಬೇಡ್ಕರ್‌ ಸಂಶೋಧನಾ ಕೇಂದ್ರದನಿರ್ದೇಶಕ ಪ್ರೊ.ಕೆ.ಸೋಮಶೇಖರ್‌ ಸೇರಿದಂತೆಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next