ಮೈಸೂರು: ಮೈಸೂರು ವಿಶ್ವ ವಿದ್ಯಾಲಯ ಉತ್ತರ ಪತ್ರಿಕೆ ಹಗರಣ ಇದೀಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಾರಾಯಣ ಸ್ವಾಮಿ ವಿರುದ್ಧ ಅದೇ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ತನ್ನ ಮೇಲೆ ಕೇಸು ದಾಖಲಾಗುತ್ತಿದ್ದಂತೆ ಇನ್ಸ್ ಪೆಕ್ಟರ್ ನಾರಾಯಣ ಸ್ವಾಮಿ ತಲೆ ಮರೆಸಿಕೊಂಡಿದ್ದಾರೆ.
ಏನಿದು ಪ್ರಕರಣ: ಮೈಸೂರು ವಿವಿ ನೌಕರರಾದ ಮಹಮದ್ ನಿಸಾರ್, ರಾಕೇಶ್, ಚಂದನ ಮತ್ತು ಚೇತನ ಜೂ.9ರಂದು ಲಾಡ್ಜ್ ನಲ್ಲಿ ಕುಳಿತು ಮೈಸೂರು ವಿಶ್ವವಿದ್ಯಾನಿಲಯದ ಬಿಎಸ್ ಸಿ ಕೆಮಿಸ್ಟ್ರಿ ಪರೀಕ್ಷೆಗೆ ಉತ್ತರ ಪತ್ರಿಕೆ ಸಿದ್ದ ಮಾಡುತ್ತಿದ್ದರು. ಈ ವೇಳೆ ಮಂಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಾರಾಯಣ ಸ್ವಾಮಿ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಶಿರಾಡಿ: ಚಾಲಕನ ನಿಯಂತ್ರಣ ತಪ್ಪಿ ಅಡ್ಡಲಾಗಿ ಬಿದ್ದ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್
ಆದರೆ ಆರೋಪಿಗಳ ಹೇಳಿಕೆ ಪಡೆದ ನಾರಾಯಣ ಸ್ವಾಮಿ ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ನಾರಾಯಣ ಸ್ವಾಮಿ ಸೇರಿ ಆರು ಮಂದಿಯ ವಿರುದ್ದ ಮಂಡಿ ಠಾಣೆಯಲ್ಲೇ ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ.
ತನ್ನ ವಿರುದ್ಧ ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಇನ್ಸ್ ಪೆಕ್ಟರ್ ನಾರಾಯಸ್ವಾಮಿ ತಲೆಮರೆಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಪೊಲೀಸಪ್ಪನ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.