Advertisement

ಸಂಸತ್‌ನಲ್ಲಿ ರಚನಾತ್ಮಕ ಚರ್ಚೆಗಳಾಗುತ್ತಿಲ್ಲ; ‌ಸಂಸತ್‌ ಅಣುಕು ಸ್ಪರ್ಧೆ

05:39 PM Nov 04, 2022 | Team Udayavani |

ಮೈಸೂರು: ಇಂದಿನ ಸಂಸತ್‌ ಅಧಿವೇಶನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತಹ ರಚನಾತ್ಮಕ ಚರ್ಚೆಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫ‌ಲಗೊಂಡಿವೆ ಎಂದು ವಾಣಿವಿಲಾಸ ಅರಸು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮತ್ತು ಆಡಳಿತ ಮುಖ್ಯಸ್ಥ ಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಕಾಲೇಜು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿದ್ದ ತಾಲೂಕು ಮಟ್ಟದ ಯುವ ಸಂಸತ್‌ ಅಣುಕು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವೈಯುಕ್ತಿಕ ಕೆಸರೆರಚಾಟದ ಕೂಪ: ಕಳೆದ ಎರಡು ದಶಕಗಳಿಂದ ನಡೆಯತ್ತಿರುವ ಸಂಸತ್‌ ಅಧಿವೇಶನಗಳನ್ನು ನೋಡಲು ಸಾಧ್ಯವಾದ ಮಟ್ಟಿಗೆ ಬೀದಿ ರಂಪಾಟದಂತಾಗಿವೆ. ರಚಾನಾತ್ಮ ಚರ್ಚೆಗಳ ಕೇಂದ್ರವಾಗಬೇಕಿದ್ದ ಸಂಸತ್‌ ಅಧೀವೇಶನಗಳು ಇಂದು ವೈಯುಕ್ತಿಕ ಕೆಸರೆರಚಾಟದ ಕೂಪವಾಗಿ ಮಾರ್ಪಾಡಾಗುತ್ತಿರುವು ನಿಜಕ್ಕೂ ಬೇಸರದ ಸಂಗತಿ ಎಂದರು.

ಈ ಹಿಂದೆ ನೆಹರು, ವಾಜಪೇಯಿರಂತಹ ನಾಯಕರುಗಳು ಪ್ರಧಾನ ಮಂತ್ರಿಯಾಗಿದ್ದಾಗ, ದೇಶದ ಅಭಿವೃದ್ಧಿಗೆ ಸಹಕಾರಿಯಾಗುವಂತಹ ವಿಷಯಗಳ ಕುರಿತು ಸುದೀರ್ಘ‌ ಚರ್ಚೆ ನಡೆಯುತ್ತಿದ್ದವು ಆದರೆ, ಪ್ರಸ್ತುತ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ವೈಯುಕ್ತಿಕ ಟೀಕೆ ಮಾಡುವುದನ್ನೇ ಚರ್ಚೆ ಎಂದು ಭಾವಿಸಿರುವಂತೆ ಕಾಣುತ್ತದೆ. ಆದ್ದರಿಂದಲೇ ನಮ್ಮ ದೆಶದಲ್ಲಿ ಅಭಿವೃದ್ಧಿ ಕೆಲಸಗಳು ಬಹಳ ಮಂದಗತಿಯಲ್ಲಿ ಸಾಗುತ್ತಿವೆ ಎಂದರು.

ಭಾರತ ಪ್ರಪಂಚದಲ್ಲೇ ಬೃಹತ್‌ ಸಂವಿಧಾನ ಹೊಂದಿರುವ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯನ್ನು ತನ್ನಾಗಿಸಿಕೊಂಡಿದೆ. ಆದ್ದರಿಂದ ವೈಯುಕ್ತಿಕ ಟೀಕೆಗಳನ್ನು ಬದಿಗೊತ್ತಿ ಸಂವಿಧಾನದ ಆಶಯಗಳಿಗೆ ಅನುಗಣವಾಗಿ ನಮ್ಮ ನಾಯಕರು ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.

Advertisement

ನಾಯಕತ್ವ ಗುಣ ಬೆಳೆಸಿಕೊಳ್ಳಿ: ದೇಶದ ಜನಸಂಖ್ಯೆಯಲ್ಲಿ ಶೇ.55 ರಷ್ಟು ಯುವಕರೇ ಇದ್ದರು. ನಮ್ಮ ಸಂಸತ್ತಿನಲ್ಲಿರು ಯುವ ರಾಜಕಾರಣಿಗಳ ಪ್ರಮಾಣ ಕೇವಲ ಶೇ.12 ರಷ್ಟು ಮಾತ್ರ. ಅದರಲ್ಲೂ ಮಹಿಳಾ ಸಂಸದರ ಪ್ರಮಾಣ ಶೇ.8 ಮಾತ್ರ. ವಿದ್ಯಾವಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್‌ ಪ್ರವೇಶ ಮಾಡವುದರಿಂದ ದೇಶದ ಅಭಿವೃದ್ಧಿಗೆ ಅಗತ್ಯವಿರುವ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ಯುವ ಪೀಳಿಗೆಗೆ ಇಂತಹ ಯುವ ಸಂಸತ್‌ ಅಣಕು ಸ್ಪರ್ಧೆ ಮಾಡುವುದರಿಂದ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ತಿಳಿಸಿದರು.

ಜಯಚಾಮರಾಜ ಅರಸು ಎಜುಕೇಷನ್‌ ಟ್ರಸ್ಟಿನ ಗೌರವ ಕಾರ್ಯದರ್ಶಿ ಮಹೇಶ್‌ ಎನ್‌. ಅರಸು ಮಾತನಾಡಿ, ನಮ್ಮ ಯುವಕರಿಗೆ ರಾಜಕೀಯ ಪ್ರಜ್ಞೆ ಬಹಳ ಮುಖ್ಯ. ಮಾಹಿತಿಗೂ ಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಕೇವಲ ಮಾಹಿತಿ ಸಂಗ್ರಹಕ್ಕೆ ಮುಂದಾಗದೆ, ಜ್ಞಾನ ಸಂಪಾದಿಸುವ ಕಡೆ ಯುವಶಕ್ತಿ ಗಮನ ಹರಿಸಬೇಕು. ಪ್ರತಿಯೊಬ್ಬರಿಗೂ ಸಿಂಪತಿ ಮತ್ತು ಎಂಪತಿ ಎಂಬುದು ಬಹಳ ಮುಖ್ಯವಾಗುತ್ತದೆ. ಇನೊಬ್ಬರ ನೋವಿಗೆ ಕೇವಲ ಸಿಂಪತಿ ತೋರಿಸಿದರೆ ಸಾಲದು, ಆ
ನೋವನ್ನು ನಮ್ಮದೇ ನೋವು ಎಂಬು ಭಾವಿಸುವ ಎಂಪತಿ ಇರಬೇಕು ಎಂದು ಕಿವಿಮಾತು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದೇರ್ಶಕಿ ಎಂ.ಪಿ. ನಾಗಮ್ಮ, ಕಾಲೇಜಿನ ಪ್ರಾಂಶುಪಾಲರಾದ ಅನಿತಾ ಜೆ.ಸಿ., ಅಪೂರ್ವ, ಹೇಮಲತಾ, ಟ್ರಸ್ಟಿನ ಬಿ.ಪಿ ಬಾಲಚಂದ್ರ ಅರಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next