Advertisement

ಶಿಕಾರಿಗೆ ಸಿದ್ಧವಾದ ಮೈಸೂರು ರಂಗಾಯಣ

11:48 AM Nov 27, 2017 | Team Udayavani |

ಬೆಂಗಳೂರು: ರಂಗ ಪ್ರಯೋಗದಲ್ಲಿ ಸದಾ ಹೊಸತನವನ್ನು ಹುಡುಕುವ ಮೈಸೂರಿನ ರಂಗಾಯಣ ಇದೀಗ ಮತ್ತೂಂದು “ಶಿಕಾರಿ’ಗೆ ಸಿದ್ಧವಾಗಿದ್ದು, ದೇಶವ್ಯಾಪಿ ರಂಗಪ್ರಿಯರ ಮನಗೆಲ್ಲಲು ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ.

Advertisement

ಕನ್ನಡದ ಶ್ರೇಷ್ಠ ಕಥೆ ಹಾಗೂ ಕಾದಂಬರಿಕಾರ ಯಶವಂತ ಚಿತ್ತಾಲರು ಎಪ್ಪತ್ತರ ದಶಕದಲ್ಲಿ ಬರೆದ ನವ್ಯ ಸಾಹಿತ್ಯದ ಸಂಕೀರ್ಣ ಕಾದಂಬರಿ “ಶಿಕಾರಿ’ಗೆ ಹೆಸರಾಂತ ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಅವರು ರಂಗರೂಪ ನೀಡಿದ್ದಾರೆ. ಇದನ್ನು ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶಿಸಲು ಮೈಸೂರಿನ ರಂಗಾಯಣ ಅಣಿಯಾಗುತ್ತಿದೆ.

ರಂಗಾಯಣದ ಹಿರಿಯ ಕಲಾವಿದರಾದ ಹುಲುಗಪ್ಪ ಕಟ್ಟಿಮನಿ, ನಂದಿನಿ ಕೆ.ಆರ್‌, ಕೃಷ್ಣಪ್ರಸಾದ್‌, ವಿನಾಯಕ ಭಟ್‌ ಹಾಸಣಗಿ, ಕೃಷ್ಣಕುಮಾರ್‌ ನಾರ್ಣಕಜೆ ಸೇರಿ ದೊಡ್ಡ ಕಲಾವಿದರ ದಂಡೇ ಹಗಲಿರುಳು ತಾಲೀಮು ನಡೆಸುತ್ತಿದೆ. ಶಿಕಾರಿ ನಾಟಕ ಈಗಾಗಲೇ ಮೈಸೂರಿನಲ್ಲಿ 9 ಪ್ರದರ್ಶನ ಕಂಡಿದು, ರಂಗಾಸಕ್ತರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಹೈದರಬಾದ್‌ನಲ್ಲಿ ಪ್ರದರ್ಶನಕ್ಕೆ ಆಹ್ವಾನ ಬಂದಿದೆ.

ಈ ತಂಡ ಅಭಿನಯಿಸಿರುವ ತೇಜಸ್ವಿ ಅವರ “ಕೃಷ್ಣಗೌಡರ ಆನೆ’, ಮರಾಠಿ ಮೂಲದ “ಚೆಕ್‌ವೆುಟ್‌’, ಕುವೆಂಪು ಅವರ “ಶೂದ್ರ ತಪಸ್ವಿನಿ’, ಬಸವಲಿಂಗಯ್ಯ ನಿರ್ದೇಶನದ “ಗಾಂಧಿ ವರ್ಸೆಸ್‌ ಗಾಂಧಿ’, “ಕುಸುಮ ಬಾಲೆ’ ಮತ್ತು “ತಲೆದಂಡ’ ಮೊದಲಾದ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಶಿಕಾರಿ ನಾಟಕ ಕೂಡ ಆ ಸಾಲಿಗೆ ಸೇರಲಿದೆ ಎಂದು ರಂಗಾಯಣದ ಹಿರಿಯ ಕಲಾವಿದ ಕೃಷ್ಣ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಶವಂತ ಚಿತ್ತಾಲರು ದೂರದೃಷ್ಟಿಯುಳ್ಳ ಕಾದಂಬರಿಕಾರರು.”ಕುಮಟೆಗೆ ಬಂದ ಕಿಂದರಿ ಜೋಗಿ’, “ಓಡಿ ಹೋದ ಮುಟ್ಟಿ ಬಂದು’ ಎಂಬ ಕಥಾಸಂಕಲಗಳು, “ಮೂರು ದಾರಿಗಳು’, “ಶಿಕಾರಿ’, “ಛೇಧ’, “ಪುರುಷೋತ್ತಮ’ ಕಾದಂಬರಿಗಳನ್ನು ಬರೆದಿದ್ದಾರೆ. ಶ್ರೇಷ್ಠ ವಿರ್ಮಕ ಜಿ. ಎಸ್‌.ಅಮೂರರ ಮಾತಿನಲ್ಲಿ ಹೇಳುವುದಾರೆ ಚಿತ್ತಾರ ಶಿಕಾರಿ ಕಾದಂಬರಿ ಕನ್ನಡದ ಗತ್ತು ಎಂದು ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಹೇಳಿದರು.

Advertisement

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಹೈದ್ರಾಬಾದ್‌, ಮುಂಬೈನಿಂದಲೂ ಶಿಕಾರಿ ನಾಟಕ ಪ್ರದರ್ಶನಕ್ಕೆ ಆಹ್ವಾನ ಬಂದಿದೆ. ದೇಶದ ಹಲವು ಭಾಗಗಳಲ್ಲಿ ಈ ನಾಟಕ ಪ್ರದರ್ಶಿಸುವ ಹಂಬಲ ರಂಗಾಯಣದ್ದಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮೈಸೂರು ರಂಗಾಯಣ ತಂಡ ಪ್ರದರ್ಶನ ನೀಡಲಿದೆ.
 ● ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ

ಚಿತ್ತಾಲರು ಬದುಕಿರುವಾಗಲೇ ಅವರ “ಶಿಕಾರಿ’ ಕಾದಂಬರಿಯನ್ನು ರಂಗರೂಪಕ್ಕೆ ತರಬೇಕಿತ್ತು. ಅವರು ತುಂಬಾ ಖುಷಿ ಪಡುತ್ತಿದ್ದರು. ಎಪ್ಪತ್ತರ ದಶಕದಲ್ಲಿಯೇ ಕಾರ್ಪೊರೆಟ್‌ ಸಂಸ್ಕೃತಿಯ ಅನಾಹುತಗಳ ಬಗ್ಗೆ ಊಹಿ ಪಾತ್ರಗಳನ್ನು ರಚಿಸಿದ್ದಾರೆ. ಅವರೊಬ್ಬ ದೂರ ದೃಷ್ಟಿಯುಳ್ಳ ಕಾದಂಬರಿಕಾರ. 
● ಪ್ರಕಾಶ್‌ ಬೆಳವಾಡಿ, ರಂಗ ನಿರ್ದೇಶಕ

ದೇವೇಶ ಸೂರಗುಪ್ಪೆ

Advertisement

Udayavani is now on Telegram. Click here to join our channel and stay updated with the latest news.

Next