Advertisement

ಮೈಸೂರು:ಲೇಡಿಸ್‌ ಹಾಸ್ಟೇಲ್‌ನಲ್ಲಿ ಸೈಕೋ ಕಾಟ; ಪೊಲೀಸರ ಹುಡುಕಾಟ

11:36 AM Jul 22, 2018 | Team Udayavani |

ಮೈಸೂರು:ವಿಕೃತ ಕಾಮುಕನೊಬ್ಬ 3 ಮಹಡಿಯ ಲೇಡಿಸ್‌ ಹಾಸ್ಟೆಲ್‌ನಲ್ಲಿ ಪ್ರತ್ಯಕ್ಷವಾಗಿ ವಿಚಿತ್ರಾವಾಗಿ ವರ್ತಿಸಿ, ವಿದ್ಯಾರ್ಥಿನಿಯೊಬ್ಬಳ ಕತ್ತು ಹಿಸುಕಲು ಯತ್ನಿಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾನೆ. 

Advertisement

ಕೆ.ಆರ್‌.ಆಸ್ಪತ್ರೆಯ ನರ್ಸಿಂಗ್‌ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿದ ಸೈಕೋ ಒಣಗಲು ಹಾಕಿದ್ದ  ಬಟ್ಟೆಗಳನ್ನು ಹಿಡಿದು ವಿಕೃತವಾಗಿ ವರ್ತಿಸಿದ್ದಾನೆ. ಸಿಸಿಟಿವಿಯಲ್ಲಿ ವಿಕೃತನ ಕೃತ್ಯಗಳು ಸೆರೆಯಾಗಿದೆ. 

ಸ್ಯೆಕುರಿಟಿ ಗಾರ್ಡ್‌ ಇದ್ದರೂ ಕಣ್‌ತಪ್ಪಿಸಿ ಕಂಪೌಂಡ್‌ ಹಾರಿ ಒಳನುಗ್ಗಿ ಆತಂಕಕ್ಕೆ ಕಾರಣವಾಗಿದ್ದಾನೆ. 

ವಿದ್ಯಾರ್ಥಿನಿಯರು ವಿಕೃತನಿಂದಾಗಿ ತೀವ್ರ ಆತಂಕಕ್ಕೀಡಾಗಿದ್ದು ನಿದ್ದೆ ಇಲ್ಲದೆ ರಾತ್ರಿ ಕಳೆಯುವ ಪರಿಸ್ಥಿತಿ ಬಂದೊದಗಿದೆ. 

ದೇವರಾಜ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸೈಕೋ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next