Advertisement
ನಗರದ ಸಿಎಆರ್ ಮೈದಾನದಲ್ಲಿ ಮಂಗಳವಾರ ಪ್ರಾಪರ್ಟಿ ಪರೇಡ್ ನಡೆಸಿ ವಶಪಡಿಸಿಕೊಂಡಿರುವ ಮಾಲುಗಳನ್ನು ಅವುಗಳ ವಾರಸುದಾರರಿಗೆ ಹಿಂತಿರುಗಿಸಿದರು. 2018ರಲ್ಲಿ ಒಟ್ಟು 621 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 341 ಪ್ರಕರಣಗಳನ್ನು ಪತ್ತೆ ಹಚ್ಚಿ 4.07 ಕೋಟಿ ರೂ. ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
Related Articles
Advertisement
ದಿನದ 24 ಗಂಟೆಯೂ ನಗರದ ಗಸ್ತು ನಿರ್ವಹಣೆಗೆ 40 ಗರುಡಾ ವಾಹನಗಳು ಮತ್ತು 36 ಚೀತಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ನಗರದ ಪ್ರಮುಖ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ಕಳವು ನಿಯಂತ್ರಣ ಮಾಡುವ ಸಂಬಂಧ ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮತ್ತು ನಿಗಾವಹಿಸುವಿಕೆ ಮತ್ತು ವಾಣಿಜ್ಯ ಸಂಕೀರ್ಣಗಳ ಪಾರ್ಕಿಂಗ್ ಸ್ಥಳಗಳಲ್ಲಿ ಖಾಸಗಿಯಾಗಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹೊರ ಊರಿಗೆ ಹೋಗುವಾಗ ಈ ಬಗ್ಗೆ ಪೊಲೀಸ್ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಅರಿವು ಕಾರ್ಯಕ್ರಮ: ಪೊಲೀಸ್ ಸಿಬ್ಬಂದಿ ಪ್ರತಿ ತಿಂಗಳು ಎರಡು ಹೊಸ ಬೀಟ್ ಸಿಸ್ಟಂ ಸದಸ್ಯರ ಸಭೆ ನಡೆಸುತ್ತಿದ್ದು, ಈ ಸಭೆಗಳಲ್ಲಿ ಸಾರ್ವಜನಿಕರಿಗೆ ಅಪರಾಧ ನಿಯಂತ್ರಣ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಪರಾಧ ನಿಯಂತ್ರಣ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ. ಜತೆಗೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಡಾವಣೆಗಳಲ್ಲಿ ಪೊಲೀಸ್ ವಾಹನಗಳ ಪಬ್ಲಿಕ್ ಅಡ್ರೆಸ್ಸಿಂಗ್ ಸಿಸ್ಟಂ ಮೂಲಕ ಅಪರಾಧ ನಿಯಂತ್ರಣ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ.
ವಿಶೇಷ ಸಂದರ್ಭಗಳಲ್ಲಿ ಅಪರಾಧ ನಿಯಂತ್ರಣ ಕುರಿತ ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಜತೆಗೆ ವರದಿಯಾಗಿರುವ ಪ್ರಕರಣಗಳ ಪತ್ತೆಗೆ ಎಸಿಪಿ ಮಟ್ಟದಲ್ಲಿ ತಂಡಗಳನ್ನು ರಚಿಸಿದ್ದು, ತಾಂತ್ರಿಕ ಕೋಶ, ಬೆರಳಚ್ಚು, ಶ್ವಾನದಳ, ಇತರೆ ವೈಜ್ಞಾನಿಕತೆಯನ್ನು ಬಳಕೆ ಮಾಡಿಕೊಂಡು ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಳ್ಳತನ ತಡೆಗೆ ವಿಶೇಷ ಕಾರ್ಯಾಚರಣೆ: ನಗರದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸರಗಳ್ಳತನವನ್ನು ನಿಯಂತ್ರಿಸಲು ಬೆಳಗ್ಗೆ 6 ರಿಂದ 9ಗಂಟೆವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9ಗಂಟೆವರೆಗೆ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಆಪರೇಷನ್ ಸನ್‌ರೈಸ್ ಮತ್ತು ಸನ್‌ಸೆಟ್ ಕಾರ್ಯಾಚರಣೆ ನಡೆಸಲಾಗುವುದು. ಸರಗಳ್ಳತನ ಪತ್ತೆ ಸಂಬಂಧ ಆಪರೇಷನ್ ಫಾಸ್ಟ್ ಟ್ರಾಕ್ ವಿಶೇಷ ಕಾರ್ಯಾಚರಣೆ. ಪೊಲೀಸರು ಸಾರ್ವಜನಿಕರಂತೆ ವರ್ತಿಸಿ, ಸ್ವತ್ತು ಕಳವು ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಲು ಆಪರೇಷನ್ ಡಿಕಾಯ್ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.